ಮಲ್ಲಮ್ಮ ದೇವಸ್ಥಾನಕ್ಕೆ ರೂ.೫೦ ಲಕ್ಷ ಅನುದಾನ: ರಾಮಲಿಂಗಾರೆಡ್ಡಿ

Must Read

ಜಮಖಂಡಿ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನ ಎಲ್ಲ ಸಮುದಾಯಗಳಿಗೂ ಅನುಕೂಲ ಆಗುತ್ತಿರುವುದು ಸಂತಸದ ಸಂಗತಿ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಜಮಖಂಡಿಯ ವೇಮ ವಿಕಾಸ ವೇದಿಕೆಯ ಆಶ್ರಯದಲ್ಲಿ ನಿರ್ಮಾಣಗೊಳ್ಳಲಿರುವ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಅಡಿಗಲ್ಲು ಸಮಾರಂಭ ಹಾಗೂ ಸಮುದಾಯ ಭವನ ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನದ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯಿಂದ ರೂ.೫೦ ಲಕ್ಷ ಹಾಗೂ ವೈಯಕ್ತಿಕವಾಗಿ ರೂ.೧೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ದೇವಸ್ಥಾನದ ವಿನ್ಯಾಸ ಚೆನ್ನಾಗಿದೆ ಎಂದರು.

ಶಾಸಕ ನಾಡೋಜ ಜಗದೀಶ ಗುಡಗುಂಟಿ ಮುಖ್ಯ ಅತಿಥಿಯಾಗಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ನಡೆಯುವ ವಿವಾಹಗಳ ನೂತನ ದಂಪತಿಗೆ ನಮಸ್ಕರಿಸಲು ದೇವಾಲಯ ಬೇಕಾಗಿತ್ತು. ಈಗ ಹೇಮರಡ್ಡಿ ಮಲ್ಲಮ್ಮನವರ ದೇವಸ್ಥಾನ ನಿರ್ಮಿಸುತ್ತಿರುವುದು ಸ್ತುತ್ಯರ್ಹ ಕಾರ್ಯ ಎಂದರು.

ತಮ್ಮ ಶಾಸಕರ ನಿಧಿಯಿಂದ ರೂ.೫ ಲಕ್ಷ ಹಾಗೂ ವೈಯಕ್ತಿಕವಾಗಿ ರೂ.೨ ಲಕ್ಷ ಅನುದಾನ ನೀಡುವುದಾಗಿ ವಾಗ್ದಾನ ಮಾಡಿದರು.

ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿ, ರಡ್ಡಿ ಸಮಾಜದವರು ಬೇಡುವವರಲ್ಲ, ನೀಡುವವರು ಎಂಬುದನ್ನು ರಡ್ಡಿ ಸಮಾಜದವರ ಕೈ ಆಕಾಶದ ಕಡೆಗೆ ಇರಬಾರದು. ಬದಲಾಗಿ ಭೂಮಿಯ ಕಡೆಗೆ ಇರಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಒಬ್ಬ ಆದರ್ಶ ಸತಿ, ಆದಾರ್ಶ ತಾಯಿ ಹಾಗೂ ಆದರ್ಶ ಕುಟುಂಬ ನಿರ್ವಾಹಕಿ ಎಂದು ಬಣ್ಣಿಸಿದರಲ್ಲದೆ ಅವರ ಆದರ್ಶಗಳು ಇಂದಿನ ಮಹಿಳೆಯರಿಗೆ ದಾರಿದೀಪವಾಗಬೇಕು ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಹನೆ ಮತ್ತು ತಾಳ್ಮೆಗೆ ಹೇಮರಡ್ಡಿ ಮಲ್ಲಮ್ಮ ಸ್ಪೂರ್ತಿಯಾಗಿದ್ದಾರೆ. ಜೀವನದಲ್ಲಿ ಬರುವ ಕಷ್ಟಗಳನ್ನು ದೈವಭಕ್ತಿಯಿಂದ ನಿವಾರಿಸಿಕೊಳ್ಳಬಹುದು ಎಂಬುದನ್ನು ತಮ್ಮ ಜೀವನದ ಮೂಲಕ ಸಾಬೀತು ಪಡಿಸಿದ್ದಾರೆ ಎಂದರು.

ಹೇಮರಡ್ಡಿ ಮಲ್ಲಮ್ಮನವರ ಸುಪ್ರಭಾತದ ಲೋಕಾರ್ಪಣೆ ಹಾಗೂ ಜಮಖಂಡಿ ತಾಲ್ಲೂಕಿನ ರಡ್ಡಿ ಸಮಾಜ ಬಾಂಧವರ ಮನೆ ಮನೆಯ ಸಮೀಕ್ಷಾ ವರದಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಹರಿಹರ ತಾಲ್ಲೂಕಿನ ಎರೆಹೊಸಹಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಿನಗುಂಡಿ ಶ್ರೀಮಠದ ಲಕ್ಕಮ್ಮತಾಯಿ, ರಾಜೇಶ್ವರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಂ. ಶೇಖರಡ್ಡಿ ಮಾತನಾಡಿದರು. ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ, ಬೀಳಗಿಯ ರಾಮನಗೌಡ ಚಿಕ್ಕನಗೌಡರ, ಶಿವನಗೌಡ ಪಾಟೀಲ, ಡಾ.ಜಿ.ವಿ. ಉದಪುಡಿ, ಎಲ್.ಆರ್. ಉದಪುಡಿ, ಕೃಷ್ಣಾರೆಡ್ಡಿ ಇತರರು ಇದ್ದರು.

ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಸರಸ್ವತಿ ಸಬರದ ಪ್ರಾರ್ಥನೆ ಗೀತೆ ಹಾಡಿದರು. ವೇಮ ವಿಕಾಸ ವೇದಿಕೆಯ ಅಧ್ಯಕ್ಷ ಡಾ.ಆರ್.ಎನ್. ಸೋನವಾಲ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕಲ್ಲೂರ, ಅನಿತಾ ಪಾಟೀಲ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಮೇಶ ಕೆ.ಬಿರಾದಾರಪಾಟೀಲ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group