ಭಾರತಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪರಂಪರೆಯಲ್ಲಿ ವ್ಯಕ್ತಿಗೆ 60 ವರ್ಷ ಆದಾಗ ಷಷ್ಟಿ ಪೂರ್ತಿ ಎಂಬ ಒಂದು ಕಾರ್ಯಕ್ರಮ ಮಾಡುವ ವಾಡಿಕೆ ಇದೆ. ವಿಶ್ವ ಮಟ್ಟದಲ್ಲಿ ತಬಲಾವಾದನದಲ್ಲಿ ಹೆಸರು ಮಾಡಿರುವ ಪಂಡಿತ ಸತೀಶ ಹಂಪಿಹೊಳಿಯವರು 60 ವಸಂತಗಳನ್ನು ಪೂರೈಸುತ್ತಿದ್ದಾರೆ.
ನಾದ, ಶೃತಿ,ತಾಳ, ಸಮ,ಹುಸಿ ಹೀಗೆ ನಿರಂತರ ಕಡೆಯಾದರೆ ಗುರುಗೌರವ ಸ್ವರ, ಆಲಾಪ, ಗಮಕ, ತಾನ, ಪಲ್ಟಾ,ಕಾಯಿದಾ,ಮುಕುಡಾ,ಗತ್ತ ಪೇತ್ಕಾರ, ರೇಲಾ, ರವು, ಚಾಪು, ತಿಹಾಯಿ ಅಧ್ಯಯನ ಒಂದು ಅಭ್ಯಾಸ ಸಂಘಟನೆ, ಸಂಘ,ಸಂಸ್ಥೆ,ಕಾರ್ಯಕ್ರಮಗಳು, ಸೋಲೋ,ಸಾಥಿ,ಮುಖ್ಯ ಆತಿಥ್ಯ, ಅಧ್ಯಕ್ಷ ಹೀಗೆ ಮತ್ತೊಂದು ಕಡೆಯಲ್ಲಿ ಪಂ. ಹಂಪಿಹೊಳಿ ನಿರಂತರ ಕ್ರಿಯಾಶೀಲರು.
ಅವರದು ಅಂತರಂಗ ಬಹಿರಂಗದಲ್ಲಿ ಶುದ್ಧವಾದ ಬದುಕು, ಸಮಯಪ್ರಜ್ಞೆ, ಸ್ಥಿತಪ್ರಜ್ಞೆ, ಶಿಸ್ತು, ಕ್ರಮಬದ್ಧವಾದ ಜೀವನ. ಅವರು ಆಯೋಜಿಸುವ ಕಾರ್ಯಕ್ರಮಗಳು ಬೃಹತ್ ಹಾಗೂ ಅಚ್ಚುಕಟ್ಟಾಗಿರುತ್ತವೆ. ಎತ್ತರದ ಗುಣಮಟ್ಟದ ಕಾರ್ಯಕ್ರಮಗಳಾಗಿರುತ್ತವೆ.ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಭಾರತದಲ್ಲಿ ಮಾಡಿದ್ದಾರೆ.
ಅವರು ವಿದೇಶಗಳಲ್ಲಿ ಬಹಳಷ್ಟು ಶ್ರೇಷ್ಠ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶತತಬಲಾ, ಶತಗಾಯನ, ವಚನನಿರಂತರ,ದಾಸನಿರಂತರ, ಸಂಗೀತಶ್ರಾವಣ, ಕಾರ್ಯಕ್ರಮಗಳನ್ನು ಅದ್ಭುತವಾಗಿ ಮಾಡುತ್ತಾರೆ. ತಮ್ಮೊಂದಿಗೆ ಅನೇಕ ಸಂಘ ಸಂಸ್ಥೆಗಳನ್ನು ಕಲಾ ಬಳಗಳನ್ನು ಕಟ್ಟಿ ಬೆಳೆಸಿದ್ದಾರೆ. ನೂರಾರು ಕಲಾವಿದರನ್ನು ಬೆಳೆಸಿದದ್ದಾರೆ. ಕಷ್ಟದಲ್ಲಿ ಇರುವ ಬಹಳಷ್ಟು ಕಲಾವಿದರಿಗೆ ಬಾಳನ್ನು ನೀಡಿ ಬದುಕನ್ನು ಕಲ್ಪಿಸಿಕೊಟ್ಟಿದ್ದಾರೆ.
ಕಳೆದ 40 ವರ್ಷಗಳಿಂದ ಸಂಗೀತ ಕ್ಷೇತ್ರವನ್ನು ಬಹಳ ಪ್ರಾಮಾಣಿಕವಾಗಿ ಪ್ರತಿನಿಧಿಸಿದ್ದಾರೆ.ಬೆಳೆಸಿದ್ದಾರೆ. ತಮ್ಮ ಪೂಜ್ಯ ಗುರುಗಳಾದ ಕಸ್ತೂರಿಯವರನ್ನು ಹಾಗೂ ತಬಲಾ ದಿಗ್ಗಜ ಪಂ. ಬಸವರಾಜ ಬೆಂಡಿಗೇರಿಯವನ್ನು ಬಹಳ ಅರ್ಥಪೂರ್ಣವಾಗಿ, ಅತ್ಯಂತ ಗೌರವದಿಂದ ಸ್ಮರಿಸುತ್ತಾರೆ. ತಮ್ಮ ಪೂರ್ತಿ ಬದುಕನ್ನ ಸಂಗೀತ ಕ್ಷೇತ್ರದ ಬೆಳವಣೆಗಾಗಿ, ಕಲಾವಿದರ ಅಭ್ಯುದಯಕ್ಕಾಗಿ ಸವೆಸಿದರು. ನೂರಾರು ಪ್ರಶಸ್ತಿಗಳನ್ನು ಪಡೆದಿರುವ ಪಂ. ಸತೀಶ ಹಂಪಿಹೊಳಿಯನವರು ನಮ್ಮ ನಡುವೆ ಇದ್ದು 60 ವರ್ಷಗಳನ್ನು ಪೂರೈಸುತ್ತಿರುವುದು ನಮಗೆ ಹೆಮ್ಮೆಯ ಮತ್ತು ಅಭಿಮಾನದ ಸಂಗತಿಯಾಗಿದೆ.
ನಾವು ಪಂಡಿತ ಸತೀಶ ಹಂಪಿಹೊಳಿ ಅವರೊಂದಿಗೆ ವಿಶ್ವಪರ್ಯಟನ ಮಾಡಿದ್ದೇವೆ. ಅನೇಕ ಕಾರ್ಯಕ್ರಮಗಳನ್ನು ವಿಶ್ವದ ತುಂಬಾ ನೀಡಿದ್ದೇವೆ. ಮಾನವೀಯ ಮೌಲ್ಯಗಳನ್ನು ಜೀವನ ತುಂಬ ಬದುಕಿದ ಈ ಅಂತಾರಾಷ್ಟ್ರೀಯ ತಬಲಾ ಕಲಾವಿದರಿಗೆ 60 ವರ್ಷ ಆಗುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುತ್ತೇನೆ.
ಪಂ. ಡಾ. ಮೃತ್ಯುಂಜಯ ಶೆಟ್ಟರ ಅಂತಾರಾಷ್ಟ್ರೀಯ ಗಾಯಕರು ಪ್ಲಾಟ ನಂ 18, ಸೂರ ಶೃಂಗಾರ ಬಸವಶಾಂತನಗರ 2 ಹಂತ ಶಂಕರಮಠದ ಮುಂದೆ ಬಲಗಡೆ ಯಾಲಕ್ಕಿ ಶೆಟ್ಟರ ಕಾಲನಿ ಧಾರವಾಡ 580004. 9845627368