ದಿನಾಂಕ-27 ಸೋಮವಾರದಂದು ಶ್ರೀಕೃಷ್ಣ ಪದವಿ ಕಾಲೇಜಿನ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಂಗಳೂರು ವಿಜಯ ಕಾಲೇಜಿನ ಪ್ರಾಧ್ಯಾಪಕರು, ಕವಿ, ಲೇಖಕ ಮತ್ತು ವಿಮರ್ಶಕರು ಆದ ಡಾ.ಆರ್.ವಾದಿರಾಜುರವರು ಅಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ಎಂ.ರುಕ್ಮಾಂಗದ ನಾಯ್ಡುರವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಪ್ರೊ. ಎಸ್.ಪಿ. ಮನೋಹರ್‍ರವರು, ಸ್ನಾತಕೋತ್ತರ ವಿಭಾಗದ ನಿರ್ದೇಶಕರಾದ ಪ್ರೊ.ವೇಣುಗೋಪಾಲ, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಉಷಾಕುಮಾರಿ ಹಾಗೂ ಎಲ್ಲಾ ವಿಭಾಗದ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಆರ್.ವಾದಿರಾಜುರವರು ಮಾತನಾಡುತ್ತಾ, ಕನ್ನಡ ರಾಜ್ಯೋತ್ಸವವನ್ನು ಯಾವುದೇ ಭೇದ ಭಾವವಿಲ್ಲದೆ ಕನ್ನಡಿಗರೆಲ್ಲರು ಒಟ್ಟಾಗಿ ತಾಯಿ ಭುವನೇಶ್ವರಿಯ ಹಬ್ಬವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
1956ರಲ್ಲಿ ಕನ್ನಡ ಮಾತನಾಡುವ ಭಾಷಿಕರನ್ನು ಒಂದೆಡೆ ಸೇರಿಸಿ ಮೈಸೂರು ರಾಜ್ಯವನ್ನಾಗಿ ಮಾಡಿದ್ದರ ವಿಷಯವನ್ನು ತಿಳಿಸಿಕೊಟ್ಟರು. 1973ರ ನವೆಂಬರ್ 1ರಂದು ಕರ್ನಾಟಕದ ಅಂದಿನ ಮುಖ್ಯಮಂತ್ರಿಗಳಾದ ದೇವರಾಜು ಅರಸುರವರ ಕಾಲದಲ್ಲಿ ‘’ಕರ್ನಾಟಕ’’ ಎಂದು ನಾಮಕರಣ ಮಾಡಿದ್ದು ಇಲ್ಲಿಗೆ 50ವರ್ಷಗಳು ತುಂಬಿದೆ. ಕನ್ನಡ ಭಾಷೆಗೆ ಪ್ರಪಂಚದಲ್ಲಿಯೇ ಸರಳ, ಸಜ್ಜನಿಕೆ,ಶಾಸ್ತ್ರೀಯ ಸ್ಥಾನಮಾನಗಳು ದೊರಕಿವೆ. ಕನ್ನಡ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ, ಪ್ರಪಂಚದಲ್ಲಿ ಯಾವ ಭಾಷೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ. ಇದರಿಂದ ಪ್ರತಿಯೊಬ್ಬರು ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಂ.ರುಕ್ಮಾಂಗದ ನಾಯ್ಡುರವರು ಮಾತನಾಡುತ್ತಾ, ಪ್ರತಿಯೊಬ್ಬರು ತಮ್ಮ ತಂದೆ ತಾಯಿಗೆ ಕೊಡುವ ಗೌರವವನ್ನು ನಮ್ಮ ಮಾತೃ ಭಾಷೆಯಾದ ಕನ್ನಡಕ್ಕೆ ಗೌರವವನ್ನು ನೀಡಬೇಕು. ವಿದೇಶಗಳಿಂದ ಬರುವ ವ್ಯಕ್ತಿಗಳು ಕನ್ನಡವನ್ನು ಕಲಿಯಲು ಆಸಕ್ತಿ ವಹಿಸಿದ್ದಾರೆ. ಇದರಿಂದ ಕನ್ನಡ ಭಾಷೆಯ ಮೇಲಿನ ಅಭಿಮಾನ ಪ್ರೀತಿಯನ್ನು ಕಾಣಬಹುದು. ಈ ನಾಡಿನಲ್ಲಿ ಸಾಧು, ಸಂತರು. ಕವಿಗಳು ಜನಿಸಿದ್ದು ಭಾಷೆಯ ಬೆಳವಣಿಗೆಗಾಗಿ ಶ್ರಮ ವಹಿಸಿರುವುದು ಅತ್ಯಂತ ಶ್ಲಾಘನೀಯ. ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಸಂಸ್ಕೃತಿ ಬಗ್ಗೆ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.