75 ಅಡಿ ರಂಗೋಲಿ ಬಿಡಿಸಿದ ದೀಕ್ಷಾ ವಿದ್ಯಾರ್ಥಿಗಳು

Must Read

ಮೂಡಲಗಿ: ದಾಲ್ಮಿಯಾ ಭಾರತ್ ಫೌಂಡೇಶನದ ಮೂಡಲಗಿ ತಾಲೂಕಿನ ಯಾದವಾಡದ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯ ಇನ್ಸಿಟ್ಯೂಟ್ ಆಫ್ ನಾಲೆಜ್ ಅಂಡ್ ಸ್ಕಿಲ್ ಹಾರ್ನೆಸಿಂಗ್(ದೀಕ್ಷಾ) ವಿದ್ಯಾರ್ಥಿಗಳು ಬೆಳಗಾವಿಯ ಎಸ್.ಜಿ.ಬಿ.ಐ.ಟಿ ಕಾಲೇಜಿನಲ್ಲಿ 75 ಅಡಿ ರಂಗೋಲಿ ಬಿಡಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿದರು.

ದಾಲ್ಮಿಯಾ ಸಿಮೆಂಟ್‍ನ ಮಾನವ ಸಂಪನ್ಮೂಲ ಮುಖ್ಯಸ್ಥ ಮಯಾಂಕ್ ಪಾಠಕ್ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮತ್ತು ರಂಗೋಲಿ ಬಿಡಿಸಿದ ವಿದ್ಯಾರ್ಥಿಗಳ ಕಾರ್ಯ ಶ್ಲಾಘಿಸಿದರು.

ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಕಾರ್ಯಕ್ರಮಾಧಿಕಾರಿ ಚೇತನ್ ವಾಘಮೋರೆ, ದಾಲ್ಮಿಯಾ ಭಾರತ್ ಫೌಂಡೇಶನದಿಂದ ವಿದ್ಯಾರ್ಥಿಗಳನ್ನು ಶ್ಲಾಘಿಸಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಉದ್ದೇಶಗಳನ್ನು ವಿವರಿಸಿದರು.

ಮೂಡಲಗಿ: ಯಾದವಾಡ ದಾಲ್ಮಿಯಾ ಸೆಮೆಂಟ ಕಾರ್ಖಾನೆಯ ದೀಕ್ಷಾ ವಿದ್ಯಾರ್ಥಿಗಳು 75 ಅಡಿ ರಂಗೋಲಿ ಬಿಡಿಸುವ ಮೂಲಕ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿದರು.

ಎಸ್‍ಜಿಬಿಐಟಿಯ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು.

ಈ ಸಮಯದಲ್ಲಿ ನಬಾರ್ಡ್ ಡಿ,ಎಸ್.ಎಂ ಎಸ್.ಕೆ.ಭಾರದ್ವಾಜ್, ಕೆನರಾ ಬ್ಯಾಂಕ್ ಐ.ಆರ್.ಒ ರಾಹು, ಡಾ ಸುರೇಂದ್ರ ಪೋತಲ್ಕರ್, ದೀಕ್ಷಾ ವ್ಯವಸ್ಥಾಪಕಿ ಶ್ರೀಮತಿ ತೇಜಸ್ವಿ, ಮತ್ತು ದೀಕ್ಷಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group