ಮೂಡಲಗಿ: ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರ ಶಿವಶರಣ ಮೇದಾರ ಕೇತಯ್ಯ ಅವರ ೮೯೩ನೇ ಜಯಂತಿಯನ್ನು ಮೂಡಲಗಿ ಪಟ್ಟಣದಲ್ಲಿ ಮೇದಾರ ಸಮಾಜ ಬಾಂಧವರು ಶೃದ್ಧಾ ಭಕ್ತಿಯಿಂದ ಆಚರಿಸಿದರು.
ಈಶ್ವರ ಗೊಳಶೆಟ್ಟಿ ಮತ್ತು ಶಿವಾಜಿ ಮೇದಾರ ಅವರು ಮೇದಾರ ಕೇತಯ್ಯ ಅವರ ಭಕ್ತಿ ಗೀತೆಯನ್ನು ಪ್ರಸ್ತುತ ಪಡಿಸಿ ಶ್ರೇಷ್ಠ ವಚನಕಾರ ಶಿವಶರಣ ಮೇದಾರ ಕೇತಯ್ಯ ಅವರ ಬಿದಿರುಬುಟ್ಟಿ ಕಾಯಕದ ಹಣದಿಂದ ದಾಸೋಹ ನಡೆಸಿ, ಪವಿತ್ರಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣ. ವೀರಶೈವ ತತ್ವವನ್ನು ಅನುಸರಿಸಿ ಜನರಿಗೆ ಬೋಧಿಸಿದ ವಚನಗಳು, ತತ್ವ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಮೇದಾರ ಸಮಾಜ ಬಾಂಧವರು ಶಿವಶರಣ ಮೇದಾರ ಕೇತಯ್ಯನವರ ಭಾವ ಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ಸಮಾಜದ ಮುಖಂಡರಾದ ಸುಭಾಸ ಮೇದಾರ, ಭೀಮಶಿ ಮೇದಾರ, ರಮೇಶ ಮೇದಾರ, ಶಿವಾಜಿ ಮೇದಾರ, ಮಹೇಶ ಮೇದಾರ, ಸಾಗರ ಮೇದಾರ, ಆನಂದ ಮೇದಾರ, ಮಯೂರ ಮೇದಾರ, ದೀಪಕ ಮೇದಾರ, ಸಂದೀಪ ಮೇದಾರ, ಗೋಕಾಕ ತಾಲೂಕಾ ಮೇದಾರ ಸಮಾಜದ ಅಧ್ಯಕ್ಷ ರಾಜು ಮೇದಾರ ಡಾ.ಮಾರುತಿ ಮೇದಾರ,ಆನಂದ ಗಿರಡ್ಡಿ, ಶಿವಬಸು ಸುಣಧೋಳಿ, ಈಶ್ವರ ಗೊಳಶೆಟ್ಟಿ, ಸದಾಶಿವ ನಿಡಗುಂದಿ, ಶಿವಬಸು ಉದಗಟ್ಟಿ, ಮಾರುತಿ ನಾವಿ ಮತ್ತಿತರು ಇದ್ದರು.