ಮೂಡಲಗಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಹನಮಂತ ರಮೇಶ ಮೆಳವಂಕಿ, ಬಸವರಾಜ ಭೀಮಶಿ ಶಿವಾಪೂರ, ಸನತ ರಾಮಪ್ಪ ಬೆಳಕೂಡ, ಆಕಾಶ ಮಲ್ಲಿಕಾರ್ಜುನ ಕಂಬಾರ, ಪ್ರವೀನ ಹನಮಂತ ಶಿಗಿಹಳ್ಳಿ, ವಿಠ್ಠಲ ಸತ್ತೇಪ್ಪಾ ನಿಪ್ಪಾಣಿ, ಲೋಕೇಶ್ ಸಿದ್ದಪ್ಪಾ ತಿಗಡಿ, ಸಿದ್ದು ಬಾಬು ಸೊರಗಾಂವಿ, ಓಂಕಾರ ಸುರೇಶ ಕಲಾಲ ತೇರ್ಗಡೆಯಾಗಿದ್ದಾರೆ.
ಹಿಮಾಲಯ ವುಡ್ ಬ್ಯಾಡ್ಜ್ ರಾಷ್ಟ್ರೀಯ ತರಭೇತಿ ಪಡೆದ ಸ್ಕೌಟ್ಸ್ ಶಿಕ್ಷಕರಾದ ಬಿ. ಎಂ. ಗೊರವರ ತರಬೇತಿ ನೀಡಿದ್ದಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಎಸ್.ಆರ್.ಇ. ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಎಸ್. ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎ.ಆರ್. ಪಾಟೀಲ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ರಾಜು ಉಪ್ಪಾರ, ಆರ್.ಪಿ. ಬಾಗೋಜಿ, ಸ್ಕೌಟ್ಸ್ ಶಿಕ್ಷಕ ವಿನಾಯಕ ನಾಯಿಕ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.