spot_img
spot_img

ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಸಿಎಮ್. ಹಾಗೂ ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಐದು ದಿನಗಳವರೆಗೆ
“ಹೋಮ್ ಕ್ವಾರಂಟೈನ್” ಒಳಗಾದ ಬಾಲಚಂದ್ರ ಜಾರಕಿಹೊಳಿ.

ಗೋಕಾಕ: ಶನಿವಾರದಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಗಳಾ ಸುರೇಶ ಅಂಗಡಿ ಅವರ ಪರ ಕ್ಷೇತ್ರಾದಾಧ್ಯಂತ ಮತಯಾಚಿಸಿ, ಹಗಲಿರುಳು ದುಡಿದ ಅರಭಾವಿ-ಗೋಕಾಕ ಕ್ಷೇತ್ರದ ಎಲ್ಲ ಮುಖಂಡರು, ಪದಾಧಿಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರಿಗೆ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಮೂಡಲಗಿಗೆ ಏ-14ರಂದು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೋರೋನಾ ಸೋಂಕು ದೃಢಪಟ್ಟಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಇಡೀ ದಿನ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದೆ.

- Advertisement -

ಮುಖ್ಯಮಂತ್ರಿಗಳು ಸಹ ತಮ್ಮೊಂದಿಗೆ ಪ್ರಾಥಮಿಕ ಹಂತದಲ್ಲಿ ಯಾರೂ ಸಂಪರ್ಕವಿರುತ್ತಾರೋ ಅವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ಏ-18 ರಿಂದ 5 ದಿನಗಳವರೆಗೆ ಹೋಮ್ ಕ್ವಾರಂಟೈನ್‍ಗೆ ಒಳಗಾಗಲಿದ್ದೇನೆ. ನನಗೆ ಯಾವುದೇ ತರಹ ರೋಗ ಲಕ್ಷಣಗಳಿಲ್ಲದಿದ್ದರೂ ಸಿಎಮ್ ಹಾಗೂ ವೈದ್ಯರ ಸಲಹೆ ಮೇರೆಗೆ ಈ ತೀರ್ಮಾಣ ಕೈಗೊಂಡಿದ್ದೇನೆಂದು ಅವರು ಹೇಳಿದ್ದಾರೆ.

ನಾಳೆಯಿಂದಲೇ ಕ್ಷೇತ್ರದ ಕಾರ್ಯಕರ್ತರ ಬಂಧುಗಳನ್ನು ಭೇಟಿ ಮಾಡಬೇಕೆಂಬುವುದು ನನ್ನ ಆಶಯವಾಗಿತ್ತು. ಅನಿವಾರ್ಯದಿಂದ ಹೋಮ್ ಕ್ವಾರಂಟೈನ್‍ಗೆ ಒಳಗಾಗುತ್ತಿರುವದರಿಂದ ಯಾರೂ ತಪ್ಪು ತಿಳಿದುಕೊಳ್ಳಬಾರದು. ನನ್ನ ಅನುಪಸ್ಥಿತಿಯಲ್ಲಿ ನಮ್ಮ ಟೀಂ ಎನ್‍ಎಸ್‍ಎಫ್ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವರು. ಬರುವ ಶುಕ್ರವಾರದ ನಂತರ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದು-ಕೊರತೆಗಳನ್ನು ವಿಚಾರಿಸುತ್ತೇನೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.

- Advertisement -
- Advertisement -

Latest News

ವಿಮರ್ಶೆ ; ಹಾಸನದಲ್ಲಿ ಶಿವ ಸಂಚಾರ ತಂಡದ ಬಂಗಾರದ ಮನುಷ್ಯ ನಾಟಕ

ಹಾಸನದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ಶಿವಶಂಚಾರ ತಂಡದಿಂದ ಶನಿವಾರ ಪ್ರದರ್ಶಿತವಾದ ಬಂಗಾರದ ಮನುಷ್ಯ ನಾಟಕ ಹಲವು ಆಯಾಮಗಳಿಂದ ಗಮನ ಸೆಳೆಯಿತು. ಪ್ರಸಿದ್ದ...
- Advertisement -

More Articles Like This

- Advertisement -
close
error: Content is protected !!
Join WhatsApp Group