- Advertisement -
ಬೀದರ್ – ನಗರಸಭೆಯ ಅಧಿಕಾರದ ಚುಕ್ಕಾಣಿ ಬಹುತೇಕ ಕಾಂಗ್ರೆಸ್ ಕೈಗೆ ದೊರಕುವ ಸಂಭವವಿದ್ದು ನಗರಸಭೆಯ 33 ಸ್ಥಾನಗಳ ಪೈಕಿ 15 ಸ್ಥಾನದಲ್ಲಿ ಜಯಗಳಿಸಿದೆ
8 ಸ್ಥಾನಗಳಲ್ಲಿ ಜೆಡಿಎಸ್ ಜಯ, 7 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ 2 ಎಂಐಎಂ ಹಾಗೂ ಒಂದು ಎಎಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ
ಬೀದರ್ ನಗರಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್ 17 ಬೇಕು. ಆದ್ದರಿಂದ ಕಾಂಗ್ರೆಸ್ ಹಾಗೂ ಎಂಐಎಂ ಸೇರಿ ನಗರಸಭೆ ಅಧಿಕಾರಿದ ಚುಕ್ಕಾಣಿ ಹಿಡಿಯುವುದು ಬಹುತೇಕ ಫಿಕ್ಸ್ ಆದ ಹಾಗಿದೆ.
- Advertisement -
35 ಸ್ಥಾನಗಳ ಪೈಕಿ 33 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಈ ಫಲಿತಾಂಶ ದಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹಾಗೂ ಸಂಸದ ಭಗವಂತ್ ಖೂಬಾಗೆ ಬಾರಿ ಮುಖಭಂಗವುಂಟಾದಂತಾಗಿದೆ.