ಸಿಂದಗಿ; ಪತ್ರಿಕೆ ವಿತರಿಸಿ ಮನೆಗೆ ಮರಳುತ್ತಿದ್ದ ಶಿವಬಸು ಮೋರೆ ಅವರನ್ನು ತಡೆದು ಹಿಗ್ಗಾಮುಗ್ಗಾ ಥಳಿಸಿರುವ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಅವರ ಕ್ರಮವನ್ನು ಸಿಂದಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಉಗ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕರೆಯಲ್ಪಟ್ಟಿರುವ ಪತ್ರಕರ್ತರು ಫ್ರಂಟ್ ಲೈನ್ ವಾರಿಯರ್ಸ್ ಎಂದು ಗುರುತಿಸಲ್ಪಟ್ಟಿದ್ದರೂ ಕೂಡಾ ಮೂಡಲಗಿ ಸಿಪಿಐ ಹಲ್ಲೆ ನಡೆಸಿದ್ದು ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪತ್ರಿಕೆ ವಿತರಣೆ ಹಾಗೂ ಸುದ್ದಿ ಸಂಗ್ರಹಣೆ ಮಾಡುವ ಸರ್ಕಾರಗಳು ಶ್ಲಾಘಿಸಿದ್ದರೂ ಪೊಲೀಸ್ ಅಧಿಕಾರಿಗಳಿಗೆ ಅದರ ಅರಿವಿಲ್ಲದೆ ದರ್ಪ ತೋರಿಸುತ್ತ, ನೀನು ಪತ್ರಕರ್ತನಾದರೆ ನನಗೇನು ? ಬೇಕಾದರೆ ದೂರು ದಾಖಲು ಮಾಡು ಎಂದು ದರ್ಪದ ಮಾತನಾಡಿ ಉದ್ಧಟತನ ತೋರಿರುವ ಸಿಪಿಐ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.