ಆನ್ ಲೈನ್ ಖದೀಮನ ಬಂಧನ

Must Read

ಬನವಾಸಿ: ಸಾಮಾಜಿಕ ಜಾಲತಾಣ ಇನ್‍ಸ್ಟಾಗ್ರಾಂ ನಲ್ಲಿ ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು ಹರಿಬಿಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಮೀಪದ ಕೆರೆಕೊಪ್ಪ ನಿವಾಸಿಯಾಗಿರುವ ಆರೋಪಿ ಅಸ್ಲಾಂ ಜಿಕ್ರಿಯಾ ಶೇಖ್ ಎಂಬಾತನು ಸಾಮಾಜಿಕ ಜಾಲತಾಣದ(ಇನ್‍ಸ್ಟಾಗ್ರಾಂ) ನಕಲಿ ಐಡಿಯನ್ನು ತಯಾರಿಸಿ ಅದರಲ್ಲಿ ಹುಡುಗಿಯರ ಭಾವಚಿತ್ರವನ್ನು ಬದಲಾಯಿಸಿ ಅಶ್ಲೀಲ ಭಾವಚಿತ್ರಗಳನ್ನು ಹಾಗೂ ಅಶ್ಲೀಲ ಸಂದೇಶಗಳನ್ನು ಹರಿಬಿಡುತ್ತಿದ್ದ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಬನವಾಸಿ ಠಾಣಾ ಪೊಲೀಸರು ಪೊಲೀಸ ಅಧೀಕ್ಷಕ ಶಿವಪ್ರಕಾಶ ದೇವರಾಜ್, ಹೆಚ್ಚವರಿ ಪೊಲೀಸ್ ಅಧೀಕ್ಷಕ ಬದ್ರಿನಾಥ ಎಸ್. ಶಿರಸಿ ಉಪ ವಿಭಾಗದ ಉಪಾಧೀಕ್ಷಕ ರವಿ ಡಿ. ಅವರ ಮಾರ್ಗದರ್ಶನದಲ್ಲಿ ಪ್ರಭಾರ ಶಿರಸಿ ವೃತ್ತ ನಿರೀಕ್ಷಕ ಸೀತಾರಾಮನ್ ನೇತೃತ್ವದಲ್ಲಿ ಬನವಾಸಿ ಪೊಲೀಸ್ ಠಾಣೆಯ ಪಿಎಸ್‍ಐ ಹನುಮಂತ ಬಿರಾದಾರ ಸಿಬ್ಬಂದಿಗಳಾದ ಎಸ್. ಶಿವರಾಜ್, ಬಿ.ಮಂಜುನಾಥರವರು ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group