spot_img
spot_img

ಅಂಗವಿಕಲರಿಗೆ ದಿನಸಿ ಕಿಟ್ ವಿತರಣೆ

Must Read

spot_img
- Advertisement -

ಸಿಂದಗಿ: ಕೋರೋನಾ ಎರಡನೇಯ ಅಲೆಯಲ್ಲಿ ತತ್ತರಿಸಿ ಹೋಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಗವಿಕಲರಿಗೆ ಸರಕಾರವೇ ಸಹಾಯಹಸ್ತ ನೀಡದಿರುವ ಪರಿಸ್ಥಿತಿಯಲ್ಲಿ ಮಕ್ಕಳ ತಜ್ಞ ಡಾ. ಚನ್ನವೀರ ಮನಗೂಳಿಯವರು ಉದಾರತೆ ಮನೋಭಾವನೆ ತೋರಿ ಅಂಗವಿಕಲರಿಗೆ ದಿನಸಿ ವಸ್ತುಗಳ ಕಿಟ್ ಗಳನ್ನು ನೀಡುತ್ತಿದ್ದಾರೆ ಇದರಿಂದ ಸರಕಾರಕ್ಕೆ ಪ್ರೇರಣೆಯಾಗಬೇಕಾಗಿದೆ ಎಂದು ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆಯ ರಾಜ್ಯಾಧ್ಯಕ್ಷೆ ಸಬೀಯಾಬೇಗಂ ಮರ್ತೂರ ಹೇಳಿದರು.

ಪಟ್ಟಣದ ದಿ. ಮಾಜಿ ಸಚಿವ ಎಂ.ಸಿ.ಮನಗೂಳಿ ಅಭಿಮಾನಿ ಬಳಗದ ವತಿಯಿಂದ ಲಾಕ್‍ಡೌನ್‍ದಿಂದ ಸಂಕಷ್ಟಗೊಳಗಾಗಿರುವ ಅಂಗವಿಕಲರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿ ಅವರು ಮಾತನಾಡಿದರು.

ಮಕ್ಕಳ ತಜ್ಞ ಡಾ. ಚನ್ನವೀರ ಮನಗೂಳಿ ಅವರ ಸೇವೆ ಬಹಳ ಅಗಾಧವಾಗಿದ್ದು ಸಮಾಜದ ಮುಖ್ಯವಾಹಿನಿಗೆ ಬಾರದೇ ಇರುವ ಅಂಗವಿಕಲರ ನೋವಿಗೆ ಸ್ಪಂದಿಸಿ 50ಕ್ಕೂ ಹೆಚ್ಚು ಆಹಾರ ಕಿಟ್ ನೀಡಿದ್ದಾರೆ ಎಂದರು.

- Advertisement -

ಇದೇ ಸಂದರ್ಭದಲ್ಲಿ ದಾವಲಸಾಬ ಮರ್ತೂರ, ವಿಜಯ ಭಜಂತ್ರಿ, ಸಲೀಮ ಮಂದೇವಾಲಿ, ರಾಜು ಯಡ್ರಾಮಿ, ಹೇಮಾ ಕಾಸರ್, ಗಣೇಶ ಜಿ. ಶಾಬೂದ್ದೀನ್ ಬುಕ್ಕದ್, ಲಕ್ಷ್ಮೀ ರಾಠೋಡ, ಪುಂಡಲೀಕ, ಸುರೇಖಾ ಗುರುವ, ಯಲ್ಲಮ್ಮ, ಮಲ್ಲಮ್ಮ ಸೇರಿದಂತೆ ಇನ್ನಿತರರು ಇದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group