ಕವನ: ಅನ್ನ ನೀಡಿ ಧನ್ಯರಾಗಿ

Must Read

ಅನ್ನ ನೀಡಿ ಧನ್ಯರಾಗಿ

ಆಡಂಬರ ಬಿಡಿ ಅನ್ನ ನೀಡಿ
ವಿಲಾಸಕ್ಕೆ ಎಲ್ಲೆ ಇಲ್ಲ ನೆನಪಿಡಿ
ವಕ್ಕರಿಸಿರಲು ಮಹಾಮಾರಿ
ಎಲ್ಲಿಹುದು ನೆಮ್ಮದಿ
ಹೋಮ ಹವನಗಳನ್ನು ತ್ಯಜಿಸಿ
ಹಸಿದವನಿಗೆ ಅನ್ನ ಉಣಿಸಿ
ಕೈಚಾಚಿರುವಾಗ ಹಸಿದು
ಫೋಟೋ ಕ್ಲಿಕ್ಕಿಸಬೇಡಿ ನೆಗೆದು
ಬಯಕೆಗಳಿಗೆಲ್ಲಿ ಕೊನೆ
ಮನಸ್ಸು ಹುಚ್ಚುತನದ ಕೋಣೆ
ತೃಪ್ತ ಭಾವ ಬೇಕಿದೆ
ನೆಮ್ಮದಿಯ ಬದುಕಿಗೆ
ದಾನ ಧರ್ಮದಲ್ಲಿರಲು ನೀನು
ಮನದ ಸಂತಸಕ್ಕೆ ಕೊರತೆ ಇಹುದೇನು
ಒಂದು ಸಾರಿ ದಾನ ಮಾಡು
ಸಿಗುವ ಸಂತಸ ನೋಡು
ಮುಗುಳು ನಕ್ಕಾಗ ಆ ಜೀವ
ಜಗತ್ತನ್ನೇ ಗೆದ್ದಂತಾಗುವದು ನಿನ್ನ ಜೀವ


ಶ್ರೀಮತಿ ಜ್ಯೋತಿ ಸಿ ಕೋಟಗಿ
ಸಹ ಶಿಕ್ಷಕಿ
ಸರಕಾರಿ ಪ್ರಾಥಮಿಕ ಶಾಲೆ ತಲ್ಲೂರ
ತಾ: ಸವದತ್ತಿ ಜಿ: ಬೆಳಗಾವಿ
9980801993

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group