ಹಸಿರೇ ಉಸಿರು ಹಸಿರಿನ ಮೂಲಕ ಪ್ರಕೃತಿಯನ್ನು ಉಳಿಸೋಣ – ರತ್ನಾ ಆನಂದ ಮಾಮನಿ

Must Read

ಸವದತ್ತಿ – ಸಾಮಾಜಿಕ ಅರಣ್ಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಸಣ್ಣ ಪುಟ್ಟ ಬೆಟ್ಟಗುಡ್ಡಗಳು. ಗೋಮಾಳಗಳು ಮತ್ತು ಕೆರೆಗಳ ಸುತ್ತಮುತ್ತಲಿನ ಸರ್ಕಾರಿ ಜಮೀನುಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾದ ಸ್ಥಳೀಯ ಜಾತಿಯ ಗಿಡಮರಗಳನ್ನು ಬೆಳೆಸುವ ಮೂಲಕ ಹಸಿರನ್ನು ಉಳಿಸೋಣ. ಹಸಿರಿನ ಮೂಲಕ ನಮ್ಮ ಪ್ರಕೃತಿಯನ್ನು ಶುದ್ಧವಾಗಿಡೋಣ ಎಂದು ರತ್ನಾ ಆನಂದ ಮಾಮನಿ ತಿಳಿಸಿದರು.

ಅವರು ಶಿಂತ್ರಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳೊಂದಿಗೆ ಗಿಡ ನೆಡುವ ಮೂಲಕ ಹಸಿರು ಕರ್ನಾಟಕ ಯೋಜನೆಯ ಸದ್ಬಳಕೆ ಕುರಿತು ಮಾತನಾಡಿದರು.
ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ನಯನಾ ಭಸ್ಮೇ ಮಾತನಾಡಿ ಮನೆಗೊಂದು ಮರ ಊರಿಗೊಂದು ತೋಪು.ತಾಲೂಕಿಗೊಂದು ಕಿರು ಅರಣ್ಯವನ್ನು ನಾವು ರೂಪಿಸಬೇಕಾಗಿದೆ. ಶಾಲೆ ಕಾಲೇಜು ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಆವರಣದಲ್ಲಿ ಗಿಡ ನೆಡುವುದಲ್ಲದೇ ಅದರ ಪೋಷಣೆಯನ್ನು ಮಾಡುವ ಮೂಲಕ ಹಸಿರು ಕರ್ನಾಟಕ ಯೋಜನೆಗೆ ವಿಶೇಷತೆಯನ್ನು ಉತ್ತೇಜಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಮಹಿಳಾ ಅಧ್ಯಕ್ಷರಾದ ರೇಖಾ ಚಿನ್ನಾಕಟ್ಟಿ, ವಿಜಯಲಕ್ಷ್ಮೀ ಉಕುಮನಾಳ, ಡಾ.ರಾಜಶ್ರೀ ಚಿಂಚನಿಕರ, ರೇಣುಕಾ ಪೂಜೇರಿ,ಮಂಜುಳಾ ಕಡಕೋಳ,ಸುವರ್ಣಲತಾ ಹಂಜಿ, ಮಹಾದೇವಿ ಮಠದ, ಅರಣ್ಯ ಇಲಾಖೆಯ ಬಿಸಗುದ್ದಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಂಜುಳಾ ಕಡಕೋಳ ಸ್ವಾಗತಿಸಿದರು. ಸುವರ್ಣಲತಾ ಹಂಜಿ ನಿರೂಪಿಸಿದರು. ಮಹಾದೇವಿ ಮಠದ ವಂದಿಸಿದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group