ಶಾಸಕರ ಅನುದಾನದಲ್ಲಿ ಸವದತ್ತಿ ಪೊಲೀಸ ಠಾಣೆಗೆ ಬೊಲೇರೋ ಜೀಪ್ ವಿತರಣೆ

Must Read

ಸವದತ್ತಿ – “ಸಾರ್ವಜನಿಕರ ರಕ್ಷಣೆ ಮಾಡುತ್ತಿರುವ ಮತ್ತು ಕಾನೂನನ್ನು ಬಹಳಷ್ಟು ಜವಾಬ್ದಾರಿಯುತವಾಗಿ ಸುವ್ಯವಸ್ಥಿತವಾಗಿ ನಡೆಯಿಸಿಕೊಂಡು ಹೋಗುತ್ತಿರುವ ಪೋಲೀಸ ಇಲಾಖೆ ಮತ್ತು ಕಂದಾಯ ಇಲಾಖೆಗಳಿಗೆ ವಾಹನಗಳ ತೊಂದರೆ ಇರಬಾರದು ಅದರಲ್ಲೂ ಪೊಲೀಸ ಇಲಾಖೆಯು ರಸ್ತೆ ಸಂಚಾರ ಸುಗಮ ವಾಗಿಡಲು ಮತ್ತು ಬಹು ಮುಖ್ಯವಾಗಿ ಯಲ್ಲಮ್ಮನಗುಡ್ಡದ ಜಾತ್ರೆಯ ಸಂದರ್ಭದಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ಸರಿಪಡಿಸುವಾಗ ಅತಿಮುಖ್ಯವಾಗಿ ಪೊಲೀಸ ಜೀಪ್ ಗಳ ಅವಶ್ಯಕತೆ ಇರುತ್ತದೆ ಮತ್ತು ಆಡಳಿತಾತ್ಮಕವಾಗಿ ಸವದತ್ತಿ ತಾಲೂಕಿನಲ್ಲಿ ಬಹಳಷ್ಟು ಗ್ರಾಮಗಳಿರುವುದರಿಂದ ಪೋಲಿಸ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೂ ವಾಹನದ ಅವಶ್ಯಕತೆ ಇರುತ್ತದೆ ಆದ್ದರಿಂದ ನಾನು ಶಾಸಕರ ಅನುದಾನದಲ್ಲಿ 8 ಲಕ್ಷ 50 ಸಾವಿರ ವೆಚ್ಚದಲ್ಲಿ ಸವದತ್ತಿ ಪೊಲೀಸ ಠಾಣೆಗೆ ಬೊಲೇರೋ ಜೀಪ್ ವಿತರಿಸಿರುವೆ ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಬಾಧ್ಯಕ್ಷ ಆನಂದ ಮಾಮನಿಯವರು ಹೇಳಿದರು.

ಶಾಸಕ ಹಾಗೂ ವಿಧಾನಸಭೆ ಉಪ ಸಬಾಧ್ಯಕ್ಷ ಆನಂದ ಮಾಮನಿಯವರು ನೂತನ ಪೋಲಿಸ ಜೀಪ್ ಗೆ ಜ್ಯೋತಿ ಬೆಳಗುತ್ತಿರುವ ಚಿತ್ರ

ಅವರು ಸವದತ್ತಿ ಪೊಲೀಸ ಠಾಣೆಯ ಆವರಣದಲ್ಲಿ ನೂತನ ಪೋಲೀಸ ಜಿಪ್ ಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಪಿಎಸ್‍ಐ ಶಿವಾನಂದ ಗುಡಗನಟ್ಟಿ ಸ್ವಾಗತಿಸಿದರು ಸಿಪಿಐ ಮಂಜುನಾಥ ನಡುವಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಗಣ್ಯರಾದ ಶಂಕರಗೌಡಾ ಘ ಪಾಟೀಲ. ಪುರಸಭೆ ಉಪಾದ್ಯಕ್ಷರಾದ ದೀಪಕ ಜಾನ್ವೇಕರ. ಪುರಸಭೆ ಸದಸ್ಯರು ಹಾಗೂ ಪೋಲಿಸ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group