ಬೀದರ – ಪಂಜಾಬ್ ನ ಫಜಲಿಕಾ ದಲ್ಲಿ ನಡೆದ ಉಗ್ರರು ಮತ್ತು ಯೋಧರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಔರಾದ್ ತಾಲೂಕಿನ ಬೇಲೂರು ಗ್ರಾಮದ ಬಸವರಾಜ ಹುತಾತ್ಮರಾಗಿದ್ದಾರೆ.
ಸುದ್ದಿ ತಿಳಿಯುತ್ತಲೇ ಬಸವರಾಜ್ ಮನೆಯಲ್ಲಿ ಶೋಕ ಮಡುಗಟ್ಟಿದ್ದು ಬಸವರಾಜ್ ಪಾರ್ಥಿವ ಶರೀರಕ್ಕಾಗಿ ಕುಟುಂಬ ಕಾಯುತ್ತಿದೆ.ಆದರೆ ಪ್ರಕರಣ ನಡೆದು ೧೨ ಗಂಟೆಯಾದರೂ ಜಿಲ್ಲಾಡಳಿತಕ್ಕೆ ಮಾಹಿತಿ ಸಿಕ್ಕಿಲ್ಲ.

ಇತ್ತ ಸಂಸದ ಭಗವಂತ್ ಖೂಬಾ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕ ಖುಷಿಯಲ್ಲಿದ್ದರೆ ಅತ್ತ ಇಡೀ ಬೀದರ ಜಿಲ್ಲೆಯೇ ಯೋಧನೊಬ್ಬನನ್ನು ಕಳೆದುಕೊಂಡು ಮಂಕಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಅವರು ಸಹ ಬಸವರಾಜ್ ನಿಧನಕ್ಕೆ ಸರಿಯಾದ ಸ್ಪಂದನೆ ನೀಡಿಲ್ಲವಾದ್ದರಿಂದ ಔರಾದ ತಾಲ್ಲೂಕಿನ ಜನರು ಜಿಲ್ಲಾ ಉಸ್ತುವಾರಿ ಮತ್ತು ನೂತನ ಕೇಂದ್ರ ಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

