ನೆನಪುಗಳ ನೆರಳಲ್ಲಿ

Must Read

ಡಾ|| ಟಿ. ವಿ. ವೆಂಕಟಾಚಲಶಾಸ್ತ್ರಿಯವರು ನಾಡಿನ ಹಿರಿಯ ಸಂಶೋಧಕರು, ವಿದ್ವಾಂಸರು, ಲೇಖಕರು. ಪ್ರಾಚೀನ ಕಾವ್ಯ, ವ್ಯಾಕರಣ-ಛಂದಸ್ಸು-ಗ್ರಂಥಸಂಪಾದನೆ-ಸಾಹಿತ್ಯಚರಿತ್ರೆ-ಶಾಸನಸಾಹಿತ್ಯಗಳ ಕ್ಷೇತ್ರದಲ್ಲಿ ಆರು ದಶಕಗಳಿಗೂ ಮೀರಿದ ನಿರಂತರ ಕೃಷಿ, ಶಾಸ್ತ್ರಿಗಳದು.

ನಿರಂತರ ಸಾಹಿತ್ಯಿಕ – ಸಂಶೋಧನ ಚಟುವಟಿಕೆಗಳ ಕಾರಣದಿಂದಾಗಿ ನಾಡಿನ ಹಲವರು ವಿದ್ವಾಂಸರು, ಸಾಹಿತಿಗಳು, ಗಣ್ಯರ ಸಂಪರ್ಕ-ಸಹವಾಸ ಅವರಿಗೆ ಲಭಿಸಿದ್ದು ಸಹಜ. ಹಾಗೆ ತಾವು ಒಡನಾಡಿದ, ತಮಗಿಂತ ಹಿರಿಯರಾದ ೧೧೧ ಜನ ಸಾಧಕರನ್ನು ಕುರಿತ ನೆನಪುಗಳನ್ನು ಒಂದೆಡೆ ಕಟ್ಟಿಕೊಟ್ಟಿದ್ದಾರೆ, ಟಿ. ವಿ. ವೆಂಕಟಾಚಲಶಾಸ್ತ್ರಿಗಳು.

ಆ ಕೃತಿಯ ಹೆಸರೇ ‘ ನೆನಪುಗಳ ನೆರಳಲ್ಲಿ ‘

ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ ಅತ್ಯಂತ ಉಪಯುಕ್ತವಾಗಬಲ್ಲ, ಹಲವರು ಗಣ್ಯರು-ವಿದ್ವಾಂಸರನ್ನು ಕುರಿತು ಅಪರೂಪದ ಮಾಹಿತಿಗಳನ್ನೂ ನೀಡಬಲ್ಲ ನೆನಪುಗಳ_ನೆರಳಲ್ಲಿ ಕೃತಿ ಸಾಹಿತ್ಯಾಸಕ್ತರು ಓದಲೇಬೇಕಾದ ಗೃಂಥ. ಹಿರಿಯ ಸಾಹಿತಿಗಳ ಒಡನಾಟದಲ್ಲಿ ತಮಗಾದ ಅನುಭವಗಳನ್ನು ಆತ್ಮೀಯವಾಗಿ ಹಿಡಿದಿಟ್ಟಿದ್ದಾರೆ ಲೇಖಕರು.


ಪ್ರತಿಯನ್ನು ಖರೀದಿಸಲು ಇಚ್ಛಿಸುವವರು WhatsApp ಮಾಡಿ: 74836 81708

Latest News

ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು- ದೇಮಶೆಟ್ಟಿ

ಮೂಡಲಗಿ: ಇಂದಿನ ವಿದ್ಯಾರ್ಥಿಗಳು ಅಭ್ಯಾಸದೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಪ್ರತಿಯೊಂದನ್ನು ಪ್ರಶ್ನಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಮಮದಾಪೂರ ಚಿಂತಾಮಣಿ ಪಾವಟೆ ಪ್ರೌಢಶಾಲೆಯ ನಿವೃತ್ತ ಮುಖ್ಯಾದ್ಯಾಪಕ...

More Articles Like This

error: Content is protected !!
Join WhatsApp Group