“ಉಡಾಳ್ ಕಂಪನಿ” ಚಿತ್ರದ ಮುಹೂರ್ತ; ಕ್ಲಾಪ್ ಮಾಡಿ ಶುಭ ಹರಸಿದ ಲಕ್ಷ್ಮೀ ಹೆಬ್ಬಾಳ್ಕರ್

Must Read

ಬೆಳಗಾವಿ: ನಿರ್ದೇಶಕ ಸಂಜಯ್ ಎಚ್ ನಿರ್ದೇಶನದ “ಉಡಾಳ್ ಕಂಪನಿ” ಚಿತ್ರಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು.

ಶ್ರೀ ಗಣಪತಿ ದೇವಸ್ಥಾನ ಇಂಡಾಲ ನಗರ ಶಿಂಧೋಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಉಡಾಳ್ ಕಂಪನಿ ಚಲನಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು.

ನಂತರ ಮಾತನಾಡಿದ ಅವರು, ಚಲನಚಿತ್ರಗಳು ಬೆಂಗಳೂರಿಗಷ್ಟೆ ಸೀಮಿತವಾಗದೆ ಉತ್ತರ ಕರ್ನಾಟಕಕ್ಕೂ ಸೀಮಿತವಾಗಬೇಕು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಕಲಾವಿದರಿದ್ದು, ಅವಕಾಶಗಳು ಸಿಗದೇ ವಂಚಿತರಾಗುತ್ತಿದ್ದಾರೆ, ಇವತ್ತು ಅಂತಹ ಪ್ರತಿಭೆಗಳನ್ನು ಗುರುತಿಸಿ, ಉತ್ತರ ಕರ್ನಾಟಕವು ಕೂಡ ಯಾವ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡಬೇಕಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಈ ಚಲನಚಿತ್ರಕ್ಕೆ ನಿರಂಜನ ಸ್ವಾಮಿಗಳು ನಿರ್ಮಾಪಕರಾಗಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಸಂಜಯ ಎಚ್. ಅವರು ವಹಿಸಿಕೊಂಡಿದ್ದಾರೆ. ಸದ್ಯದಲ್ಲೇ ಚಲನಚಿತ್ರದ ಅಧಿಕೃತ ಶೂಟಿಂಗ್ ಪ್ರಾರಂಭವಾಗುತ್ತಿದ್ದು, ಸಂಪೂರ್ಣ ಶೂಟಿಂಗ್ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ. ಹೊಸ ಪ್ರತಿಭೆ ಸಂಜಯ್ ಎಚ್. ನಿರ್ದೇಶನದ ಈ ಚಿತ್ರದಲ್ಲಿ ಪ್ರೀಯಾ ಸವದಿ ನಾಯಕಿ.

ಇದೊಂದು ಸಸ್ಪೆನ್ಸ್ ಡ್ರಿಲ್ಲರ್. ಶಾಲಾ ಜೀವನದಲ್ಲಿ ಆಗು ಹೋಗುಗಳ ಸುತ್ತಮುತ್ತ ನಡೆಯುವ ಪ್ರೇಮಕತೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಹೇಳಲಾಗದ ಕಥೆ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಎದುರಿಸುವ ಸಮಸ್ಯೆಗಳ ಸುತ್ತ ಈ ಕತೆ ಸಾಗುತ್ತದೆ ‘ ಎಂಬುದು ನಿರ್ದೇಶಕರ ವಿವರಣೆ.

ನಿರಂಜನ್ ಸ್ವಾಮಿಗಳು ಚಿತ್ರದ ನಿರ್ಮಾಪಕರು. ಕಾರ್ಯಕಾರಿ ನಿರ್ಮಾಪಕರಾಗಿ ಅನಿಲ ಹುದಲಿ, ಕೃಷ್ಣ ನಾಯಕರ ಛಾಯಾಗ್ರಹಣ, ತಂಡದಲ್ಲಿ ರಂಜಿತ್ ತಿಗಡಿ, ಮಂಜುಗೌಡ, ರವಿ ಸೂರ್ಯ ಅವರ ಸಂಗೀತ ಚಿತ್ರಕ್ಕಿದೆ.

ಚಿತ್ರದಲ್ಲಿ ನಾಯಕ ನಟರಾಗಿ ಸಂದೀಪ್ ಎಸ್ ಎಮ್ ನಾಯಕಿ ನಟಿಯಾಗಿ ಪ್ರಿಯಾ ಸವದಿ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಮಹಾಭಾರತ ಬಸವರಾಜ, ಅಭಿನಯಿಸುತ್ತಿದ್ದಾರೆ. ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವಿರೇಶ ಹಂಡಗಿ. ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಮಹಾಂತೇಶಣ್ಣ ಮತ್ತಿಕೊಪ್ಪ, ಕೃಷ್ಣ ನಾಯ್ಕರ್, ರಂಜತ್ ತಿಗಡಿ, ಮಂಜು, ಅನಿಲ ಹುದಲಿ, ರವಿ, ಮಹಾಂತೇಶ ರಣಗಟ್ಟಿಮಠ, ಮಹೇಶ ಶಾಸ್ತ್ರಿಗಳು, ಪ್ರವೀಣ ಕಣಗಲೆ, ಉಮೇಶ ಬಡಿಗೇರ, ಬಸವರಾಜ ಹಮ್ಮಿಣಿ, ಈರಣ್ಣ ಉಮ್ರಾಣಿ, ಬಸಪ್ಪ ಹುದಲಿ, ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.

Latest News

ಕವನ : ಕವಿತೆಗೊಂದು ಕರೆಯೋಲೆ

ಕವಿತೆಗೊಂದು ಕರೆಯೋಲೆ ಬರೆಯಲೆಂದು ಕುಳಿತ ನನಗೆ ಪದಗಳೇ ಸಿಗುತಿಲ್ಲ... ನುಡಿಗಳೆಲ್ಲ ಮುನಿಸಿಕೊಂಡು ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ ಒಳಗೊಳಗೆ ನಡೆಯಿತಾ? ಒಳಜಗಳ!! ಮನಃಪಟದಲೋ ಸಾವಿರಾರು ಅಕ್ಷರ ಬಳಗ... ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು ಓಲೆ ಬರೆದು...

More Articles Like This

error: Content is protected !!
Join WhatsApp Group