spot_img
spot_img

ಅಕ್ರಮ ಬಯೋ ಡಿಸೇಲ್ ಮಾರಾಟ ಕೇಂದ್ರದ ಮೇಲೆ ದಾಳಿ

Must Read

- Advertisement -

ಬೀದರ – ಅಕ್ರಮ ಬಯೋ ಡಿಸೇಲ್ ಮಾರಾಟ ಕೇಂದ್ರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿ, ಒಂದು ಡಿಸೇಲ್ ಮಾರಾಟ ಕೇಂದ್ರ ಸೀಜ್ ಮಾಡಿದೆ.

ಕಳೆದ ಆರಕ್ಕೂ ಅಧಿಕ ತಿಂಗಳಿಂದ ನಡೆಯುತ್ತಿದ್ದ ಈ ಅಕ್ರಮ ದಂಧೆ ಕುರಿತು ಬೀದರ್ ಜಿಲ್ಲಾ ಆಡಳಿತ ಮತ್ತು ಹುಮನಬಾದ ತಾಲ್ಲೂಕು ಆಡಳಿತ, ಆಹಾರ ನಿರೀಕ್ಷಕರು ಜಂಟಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಂಡಿದ್ದು ಹುಮನಬಾದ ತಾಲ್ಲೂಕಿನಲ್ಲಿ 4 ಕೇಂದ್ರಗಳನ್ನು ಸೀಜ್ ಮಾಡಿದ್ದರು.

- Advertisement -

ಆದರೇ ಈ ದಂಧೆ ಅಷ್ಟಕ್ಕೆ ನಿಲ್ಲದೇ ಮತ್ತೆ ನಡೆಯುತ್ತಿದೆ ಎಂದು ಬಲ್ಲ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಅವರು ಕೈಗಾರಿಕಾ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದಾಗ ಒಂದು ಬಯೋ ಡಿಸೇಲ್ ಮಾರಾಟ ಕೇಂದ್ರ ತೆರೆದಿರುವುದು ಗಮನಕ್ಕೆ ಬಂದ ಕಾರಣ ಸ್ಥಳದಲ್ಲಿದ್ದ ಡಿಸೇಲ್ ಡಂಪ್ ಮಾಡಲು ಬಳಸುವ ಜನರೇಟರ್ ಎಂಜಿನ್ ವಶಕ್ಕೆ ಪಡೆದು ಮಾರಾಟ ಕೇಂದ್ರವನ್ನು ಸೀಜ್ ಮಾಡಿದ್ದಾರೆ.

ಆದರೇ ಅದು ಯಾರ ಒಡೆತನಕ್ಕೆ ಸೇರಿದ್ದು ಎಂಬುದು ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ ಎಲ್ ನಾಗೇಶ್ ತಿಳಿಸಿದ್ದಾರೆ.

- Advertisement -

ತಹಶೀಲ್ದಾರ ನಾಗಯ್ಯಸ್ವಾಮಿ ಹಿರೇಮಠ, ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಲ್ಲಿಕಾರ್ಜುನ್ ಯಾತನೂರ, ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ರವಿಕುಮಾರ, ಅಪರಾಧ ವಿಭಾಗದ ಪಿಎಸ್ಐ ಕಿರಣಕುಮಾರ ಹಾಗೂ ಸಿಬ್ಬಂದಿ ಇದ್ದರು.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group