spot_img
spot_img

ರಾಜ್ಯಪಾಲರಿಂದ 17 ಸಾಧಕರಿಗೆ ಸರ್ದಾರ್ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ

Must Read

- Advertisement -

ಬೀದರ:  ಶರಣರ ಸೂಫಿ ಸಂತರ ನಾಡು ಬೀದರ ನಗರದ  ಶ್ರೀ ನಾನಕ ಝೀರಾ ಸಾಹೇಬ್ ಫೌಂಡೇಷನ್ ವತಿಯಿಂದ ಗುರುನಾನಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸರ್ದಾರ್ ಜೋಗಾಸಿಂಗ್‌ಜಿ ಅವರ 90 ನೇ ಜನ್ಮ ದಿನಾಚರಣೆ ಅಂಗವಾಗಿ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 17 ಜನರಿಗೆ ‘ಸರ್ದಾರ್ ಜೋಗಾಸಿಂಗ್‌ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ನಿವೃತ್ತ ರಾಜ್ಯಪಾಲ ಪಂಜಾಬ್ ವಿಧಾನಸಭೆಯ ಸಭಾಪತಿ ಸರ್ದಾರ್ ಕುಲ್ತಾರಸಿಂಗ್ ಸಂಧ್ವಾನ್, ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಸರ್ದಾರ್ ಚಿರಜೀವಿಸಿಂಗ್ , ಬೀದರ್‌ನ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಎಸ ವಿಕ್ರಮಜೀತಸಿಂಗ್ ಸಾಯನಿ, ನಿಜಾಮಾಬಾದ್ ಶಾಸಕ ಬಿಗ್ಲಾ ಗಣೇಶ ಗುಪ್ತಾ, ದೆಹಲಿಯ ಮಾಜಿ ಶಾಸಕ ಸರ್ದಾರ್ ಜಿತೇಂದ್ರಸಿಂಗ್ ಶಂಟಿ, ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ,ಕಲಬುರಗಿಯ ರೆ. ಡಾ .ರಾಬರ್ಟ್ ಮೈಕಲ್ ಮಿರಾಂಡಾ , ಭಾರತೀಯ ಪ್ಯಾರಾಒಲಿಂಪಿಕ್ ಸಮಿತಿ ಅಧ್ಯಕ್ಷೆ ದೀಪಾ ಮಲಿಕ್, ಬೆಂಗಳೂರಿನ ಡಾ .ಸಮರ್ಥ ರಾಘವ್ ನಾಗಭೂಷಣ, ಬೀದರ್‌ನ ಹುಮ್ಯಾನಿಟಿ ಫಸ್ಟ್ ಫೌಂಡೇಷನ್ ಅಧ್ಯಕ್ಷ ಮಾಜೀದ್ ಬಿಲಾಲ್ ಸರ್ದಾರ್ ಜೋಗಾಸಿಂಗ್‌ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಆರ್ ಶೆಟ್ಟಿ, ಕಲಬುರಗಿಯ ಖಾಜಾ ಬಂದೇನವಾಜ್ ವಿಶ್ವ ವಿದ್ಯಾಲಯದ ಕುಲಪತಿ ಸೈಯದ್ ಷಾ ಖುಸ್ರೋ ಹುಸೈನಿ , ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರ ಪರವಾಗಿ ಅವರ ಪ್ರತಿನಿಧಿಗಳು ಪ್ರಶಸ್ತಿ ಸ್ವೀಕರಿಸಿದರು. 

- Advertisement -

ನಾಂದೇಡ್‌ನ ಕಾರಸೇವಾ ವಾಲೆ ಸಂತ್ ಬಾಬಾಬಲವಿಂದರ್ ಸಿಂಗ್ , ಡಾ.ಅನಿಲ, ಡಿ.ಸಹಸ್ರಬುದ್ಧೆ, ಜನರಲ್ ಸರ್ದಾರ್ ಜೋಗಿಂದರ್ ಜಸ್ವಂತ್ ಸಿಂಗ್ ಬಂದಿರಲಿಲ್ಲ.

ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿಸಿಂಗ್ ಉಪನ್ಯಾಸ ನೀಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ , ಶ್ರೀ ನಾನಕ ಝೀರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಎಸ್ ಬಲಬೀರಸಿಂಗ್ , ಡಾ . ಸಿ ಮನೋಹರ ಇದ್ದರು. ಪಂತ ರತ್ನ ಶಿರೋಮಣಿ ಸರ್ದಾರ್ ಜೀವನ ಚರಿತ್ರೆ ಬಿಡುಗಡೆ ಮಾಡಲಾಯಿತು . ಗುರುನಾನಕ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕ್ಷೆ ರೇಷ್ಮಾ ಕೌರ್ ಸ್ವಾಗತಿಸಿದರು.

- Advertisement -

ಶಂಕರ ಪ್ರಕಾಶ ನಿರೂಪಿಸಿದರು. ಸರ್ದಾರ್ ಪ್ರೀತಂ ಸಿಂಗ್ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group