- Advertisement -
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಘಟಕ ಮೂಡಲಗಿ ತಾಲೂಕಿನ ಕಾರ್ಯಕರ್ತರಿಂದ ಮೂಡಲಗಿ ಗಾಂಧಿ ಚೌಕದಲ್ಲಿರುವ ಶ್ರೀ ಗುರು ನೀಲಕಂಠ ಮಠದಲ್ಲಿ ಗುರು ಪೂರ್ಣಿಮಾ ನಿಮಿತ್ತ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ ಪಾದಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮೂಡಲಗಿ ತಾಲೂಕಾ ಅಧ್ಯಕ್ಷ ಪ್ರಕಾಶ ಮಾದರ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಈಶ್ವರ ಮುರಗೋಡ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ನೇಕಾರ ಪ್ರಕೋಷ್ಟ ಸಂಚಾಲಕರಾದ ಮಹಾಲಿಂಗ ಒಂಟಗೂಡಿ, ಶಂಕರ ರೇಳೆಕರ,ಕೇದಾರಿ ಬಸ್ಮೆ, ಶಿವಬಸು ಬಂಡಿವಡ್ಡರ, ಶಿವಾನಂದ ಮಗದುಮ, ವಿಠ್ಠಲ ಶೀಳನವರ, ಕುಮಾರ ಗಿರಡ್ಡಿ, ಮುಂತಾದವರು ಭಾಗವಹಿಸಿದ್ದರು.