- Advertisement -
ಮೂಡಲಗಿ: ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್ ಕಾರ್ಖಾನೆಯ ಆಡಳಿತ ಮಂಡಳಿಯು 2020-21ನೇ ಸಾಲಿನಲ್ಲಿ ಕಬ್ಬು ಮತ್ತು ಕಬ್ಬಿನ ಬೀಜ ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. ಸಕ್ಕರೆಯನ್ನು ರಿಯಾತಿ ದರದಲ್ಲಿ ಕೊಡಲಿದೆ. ಪ್ರತಿ ಒಂದು ಕಿ.ಗ್ರಾಂ.ಗೆ ರೂ. 20 ರಿಯಾತಿ ದರದಲ್ಲಿ ಸಕ್ಕರೆ ಕೊಡುವ ಬಗ್ಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ಜುಲೈ 25ರಿಂದ ಆಗಷ್ಟ 21ರವರೆಗೆ ಹುಣಶ್ಯಾಳ ಪಿಜಿಯ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ರೈತರಿಗೆ ಸಕ್ಕರೆಯನ್ನು ವಿತರಿಸಲಾಗುವುದು. ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಬರುವ ಹಂಗಾಮಿಗೆ ಗುಣಮಟ್ಟದ ಕಬ್ಬು ಪೂರೈಸಬೇಕು ಎಂದು ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.