ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ – ಮಂಜುನಾಥ ಗಂಗೆಮತ

Must Read

ಬನವಾಸಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬನವಾಸಿ ಉಪ ಅರಣ್ಯ ವಲಯಧಿಕಾರಿ ಮಂಜುನಾಥ ಗಂಗೆಮತ ಹೇಳಿದರು.

ಅವರು ಬನವಾಸಿ ವಲಯದ ಅಂಗನವಾಡಿ ಮೇಲ್ವಿಚಾರಕಿಯಾಗಿರುವ ನಿರ್ಮಲ ಸಲ್ಕಿಮಠ ಅವರ ಪುತ್ರ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ನಾಗಯ್ಯ ಯರಗಟ್ಟಿಮಠ ಅವರ ಜನ್ಮದಿನದ ಅಂಗವಾಗಿ ಸ್ಥಳೀಯ ಗಾರ್ಡನ್ ಅಭಿವೃದ್ದಿ ಸಂಸ್ಥೆ ಮತ್ತು ಜಿ.ಎಸ್.ಪಿಳ್ಳೈ ಗ್ರೂಪ್ಸ್ ವತಿಯಿಂದ ಬನವಾಸಿಯ ಕ್ರಮ ಸಂಖ್ಯೆ-2 ಮತ್ತು ಹೂವಿನಕೊಪ್ಪಲಕೇರಿಯ ಅಂಗನವಾಡಿಗಳಲ್ಲಿ ಹಮ್ಮಿಕೊಂಡ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ, ಮಕ್ಕಳಲ್ಲಿ ಅಂಗನವಾಡಿಯಿಂದಲೇ ಪರಿಸರ ಕಾಳಜಿಯನ್ನು ಬೆಳೆಸುವ ಕಾರ್ಯವಾಗಬೇಕು. ನಾವು ಮನೆಗೊಂದು ಮರ ನೆಟ್ಟು, ಊರಿಗೊಂದು ವನವಾಗಿ ಮಾರ್ಪಡಿಸಬೇಕು ಎಂದರು.

ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಪ್ರೇಮ್‍ಕುಮಾರ್ ನಾಯ್ಕ್ ಮಾತನಾಡಿ, ಸ್ಥಳೀಯ ಗಾರ್ಡನ್ ಅಭಿವೃದ್ದಿ ಸಂಸ್ಥೆ ಮತ್ತು ಜಿ.ಎಸ್.ಪಿಳ್ಳೈ ಗ್ರೂಪ್ಸ್ ಅವರ ಪರಿಸರ ಕಾಳಜಿ ಎಲ್ಲರಿಗೂ ಮಾದರಿಯಾಗಿದ್ದು ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಪ್ರತಿಯೊಬ್ಬರು ಇಂತಹ ಕಾರ್ಯಗಳನ್ನು ಮಾಡಿದರೇ ನಮ್ಮ ಪರಿಸರ ಸಂಪತ್ತು ಬೆಳೆಯಲಿದೆ ಎಂದರು.

ಅಂಗನವಾಡಿ ಆವರಣದಲ್ಲಿ ಹಣ್ಣು ಮತ್ತು ಔಷಧಿ ಗಿಡಗಳನ್ನು ಹಚ್ಚಲಾಯಿತು.

ಕಾರ್ಯಕ್ರಮದಲ್ಲಿ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್, ಗ್ರಾಪಂ ಸದಸ್ಯ ಆನಂದ ಚನ್ನಯ್ಯ, ಹೆಸ್ಕಾಂಲೈನ್‍ಮ್ಯಾನ್ ಷಣ್ಮುಖ ತಳವಾರ, ಅರಣ್ಯ ವೀಕ್ಷಕ ಪರಮೇಶ್ವರ, ರಾಜು ಗೌಡ, ದೀಕ್ಷಾ ನಾಯರ್, ಅಭಿಷೇಕ ನಾಯ್ಕ್, ಅಂಗನವಾಡಿ ಮೇಲ್ವೀಚಾರಕಿ ನಿರ್ಮಲ ಸಲ್ಕಿಮಠ, ಕಾರ್ಯಕರ್ತೆಯರಾದ ಕುಸುಮ ನಾಯ್ಕ್, ವಿದ್ಯಾ ರೇವಣಕರ, ಜಯಲಕ್ಷ್ಮಿ ದೇವಲಕರ, ಗಾಯತ್ರಿ ರೆಡ್ಡಿ, ಪುಷ್ಪ ಮಡಾಯಿ, ಆಶಾ ನಾಯ್ಕ್, ಮಂಗಳ ಗಾಣಿಗೇರ ಹಾಗೂ ಎಲ್ಲ ಸಹಾಯಕಿಯರು ಇದ್ದರು.

Latest News

ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ

ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...

More Articles Like This

error: Content is protected !!
Join WhatsApp Group