ಇಂದಿನಿಂದ ರಾಜ್ಯದಲ್ಲಿ ಬೊಮ್ಮಾಯಿ ಆಡಳಿತ ; ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕಾರ

Must Read

ಅನಿರೀಕ್ಷಿತ ಕಾಲಘಟ್ಟದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾಗಿ ನೇಮಕಗೊಂಡ ಹಾವೇರಿ ಜಿಲ್ಲೆಯ ಶಾಸಕ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ದೇವರ ಹೆಸರಿನಲ್ಲಿ ರಾಜ್ಯದ ೩೦ ನೇ ಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.

ನೂತನ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಪ್ತಮಾಣವಚನ ಬೋಧಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ಶಾಸಕರಾದ ಬೊಮ್ಮಾಯಿಯವರು ಅಪಾರ ರಾಜಕೀಯ ಅನುಭವ ಹೊಂದಿದವರು. ಅವರ ತಂದೆ ಎಸ್ ಆರ್ ಬೊಮ್ಮಾಯಿಯವರು ಕೂಡ ೮೦ ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾಗಿದ್ದರು. ಅವರ ಗರಡಿಯಲ್ಲಿ ಬೆಳೆದ ಬಸವರಾಜ ಬೊಮ್ಮಾಯಿಯವರು ಮೊದಲು ಜನತಾದಳದ ಪಾಳಯದಲ್ಲಿ ಗುರುತಿಸಿಕೊಂಡು ಆಮೇಲೆ ಬಿಜೆಪಿ ಪಕ್ಷ ಸೇರಿಕೊಂಡು ಸರ್ಕಾರದಲ್ಲಿ ಗುರುತರ ಜವಾಬ್ದಾರಿ ನಿಭಾಯಿಸಿದವರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿಕಟವರ್ತಿಯಾಗಿ ರಾಜ್ಯದ ಜವಾಬ್ದಾರಿಯುತ ಗೃಹ ಮಂತ್ರಿಯಾಗಿ ಹೊಣೆಗಾರಿಕೆ ನಿಭಾಯಿಸಿರುವ ಬಸವರಾಜ ಬೊಮ್ಮಾಯಿಯವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿರುವುದು ಅತ್ಯಂತ ಯೋಗ್ಯವೆಂಬುದಾಗಿ ರಾಜಕೀಯ ವಲಯದಲ್ಲಿ ಕೊಂಡಾಡಲಾಗುತ್ತಿದೆ.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group