ನೂತನ ದೇವರಹಿಪ್ಪರಗಿ ತಾಲ್ಲೂಕಿನ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವಂತೆ ಆಗ್ರಹಿಸಿ ಮನವಿ

0
419

ಸಿಂದಗಿ: ದೇವರಹಿಪ್ಪರಗಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪರವಾಗಿ ಸೋಮವಾರದಂದು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ವೈ ದೇವಣಗಾಂವಿ ಅವರಿಗೆ ಸಂಘದ ಪರವಾಗಿ ಮನವಿ ಕೊಡುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಲಾಯಿತು.

ದೇವರಹಿಪ್ಪರಗಿ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ( ಬಿ ಇ ಓ )ಕಾರ್ಯಾಲಯ ಆರಂಭಿಸಲು ಭೂದಾನಿ ರಿಯಾಜ್ ಯಲಗಾರ ಅವರು ನೀಡಿರುವ ಜಾಗೆಯನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಳ್ಳುವದು. ಗುರುಸ್ಪಂದನ ಕಾರ್ಯಕ್ರಮ ನಡೆಸಿ ತಾಲ್ಲೂಕಿನ ಶಿಕ್ಷಕರ ಸೇವಾ ಪುಸ್ತಕಗಳ ಪರಿಶೀಲನೆ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವದು.

ನಿವೃತ್ತ ಶಿಕ್ಷಕರ ಕೆಲಸಕಾರ್ಯಗಳನ್ನು ತುರ್ತಾಗಿ ಮಾಡಿಕೊಡುವದು.ಪ್ರಭಾರಿ ಮುಖ್ಯಗುರುಗಳಿಗೆ ಭತ್ಯೆಯನ್ನು ಮಂಜೂರು ಮಾಡುವದು.

ಶಿಕ್ಷಕರ ವೇತನವನ್ನು ಸಕಾಲಕ್ಕೆ ಮಾಡುವದು. ಶಿಕ್ಷಕರ ವೈದ್ಯಕೀಯ ಬಿಲ್ಲುಗಳನ್ನು ತುರ್ತಾಗಿ ಮರುವೆಚ್ಚ ಮಾಡುವದು. ಕಾರ್ಯಾಲಯದ ಸಿಬ್ಬಂದಿಗಳು ಶಿಕ್ಷಕರ ಕಡತಗಳನ್ನು/ಕೆಲಸ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸಿ,ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವದು. ಶಿಕ್ಷಕರ ಬಾಕಿ ಅರಿಯರ್ಸ್ ಬಿಲ್ಲುಗಳನ್ನು ತುರ್ತಾಗಿ ಮಾಡುವದು.

ಕೋವಿಡ್ ಕಾರ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ಮಂಜೂರು ಮಾಡುವದು.ಮೃತ ಶಿಕ್ಷಕರ ಕುಟುಂಬಕ್ಕೆ ತುರ್ತಾಗಿ ಅನುಕಂಪದ ನೌಕರಿ ಒದಗಿಸಲು ಕ್ರಮ ತಗೆದು ಕೊಳ್ಳಬೇಕು ಎಂದು ದೇವರಹಿಪ್ಪರಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ ಎಚ್ ವಾಲೀಕಾರ ಮನವಿಯನ್ನು ಸಲ್ಲಿಸಿ ಮಾತನಾಡಿದರು.

ಸಿ ಬಿ ಗಡಗಿ,ಎಮ್ ಜಿ ಯಂಕಂಚಿ,ಜಿ ಪಿ ಬಿರಾದಾರ,ಪಿ ಸಿ ತಳಕೇರಿ, ಎಸ್ ವಿ ಕೋಟಿನ,ಆರ್ ಎಸ್ ಇಂಡಿ, ಬಿ ಪೂಜಾರಿ, ಸೇರಿದಂತೆ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಮನವಿ ಸಲ್ಲಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿಠ್ಠಲ ದೇವಣಗಾಂವಿ ಮನವಿಯನ್ನು ಸ್ವೀಕರಿಸಿ, ಮುಂದಿನ ಕ್ರಮ ತಕ್ಷಣ ಜರುಗಿಸುವುದಾಗಿ ಭರವಸೆ ನೀಡಿದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ