spot_img
spot_img

ಆತ್ಮಜ್ಞಾನ ಕಣ್ಣಿಗೆ ಕಾಣೋದಿಲ್ಲ, ವಿಜ್ಞಾನ ಕಾಣುತ್ತದೆ

Must Read

- Advertisement -

ಭೀಮನಂತಹ ಪತಿ ದೊರೆಯಲೆಂದು ಸ್ತ್ರೀ ಪರಮಾತ್ಮ ಭೀಮೇಶ್ವರನಲ್ಲಿ ಬೇಡೋ ವಿಶೇಷವಾದ ವ್ರತವೆ ಭೀಮನ ಅಮವಾಸ್ಯೆ. ಇಲ್ಲಿ ಭೀಮನ ಹಾಗೆ ಎಂದರೆ ಮಹಾಬಲಶಾಲಿ ಎಂದಷ್ಟೇ ಅಲ್ಲ.ಭೀಮನ ಮನಸ್ಸು ಅಷ್ಟೇ ಶಕ್ತಿಶಾಲಿಯಾಗಿತ್ತು. ಸ್ತ್ರೀ ಯರನ್ನು ಗೌರವಿಸಿ ರಕ್ಷಣೆ ನೀಡುವ ಸದ್ಗುಣ ಸಂಪನ್ನನಾಗಿದ್ದ ಭೀಮ ವಾಯುಪುತ್ರ. ಗಾಳಿಯನ್ನು ತಡೆಯೋ ಶಕ್ತಿ ಯಾರಿಗಿದೆ? ಭೂಮಿ ಮೇಲಿರುವ ಪ್ರತಿಯೊಬ್ಬರೂ ಜೀವನ ನಡೆಸಿರೋದೆ ವಾಯುವಿನಿಂದ ಗಾಳಿಯಿಲ್ಲದೆ ಬದುಕುವುದು ಅಸಾಧ್ಯ.

ಹೀಗಾಗಿ ಭೀಮ ವಾಯುಪುತ್ರನಾಗಿದ್ದು ಭೂಮಿಯ ಪುತ್ರಿಯಾದ ಸ್ತ್ರೀ ಗೆ ಸಹಕರಿಸುವುದರಿಂದ ಮಹಿಳೆಯರು, ಹೆಣ್ಣುಮಕ್ಕಳು ಈ ವ್ರತವನ್ನು ಬಹಳ ಶ್ರದ್ದಾ ಭಕ್ತಿಯಿಂದ ಆಚರಿಸಿ, ತಮ್ಮ ಅಣ್ಣ ತಮ್ಮಂದಿರನ್ನು ಮನೆಗೆ ಕರೆದು ತನ್ನ ಪತಿಯ ಶ್ರೇಯಸ್ಸು ಆಯಸ್ಸಿಗಾಗಿ ಪ್ರಾರ್ಥನೆ ಮಾಡಿ ವ್ರತ, ಸಿಹಿಭೋಜನ ಮಾಡುವ ಮೂಲಕ ಆಚರಿಸುತ್ತಾರೆ.

ಇಲ್ಲಿ ಪುರುಷನ ಬಲವೆ ಸ್ತ್ರೀ ಗೆ ರಕ್ಷಣೆ ಆಗಿರುತ್ತದೆ. ಭಾರತೀಯ ನಾರಿಯರ ಪವಿತ್ರ ಸಂಬಂಧದಲ್ಲಿ ಮುಖ್ಯವಾಗಿರುವ ಪತಿಪತ್ನಿ ಸಂಬಂಧ ಗಟ್ಟಿಯಾಗಿದ್ದರೆ ಎಲ್ಲಾ ಸುಖವಿದ್ದ ಹಾಗೆ. ಪಂಚಪಾಂಡವರಲ್ಲಿ ಭೀಮನ ಬಲ ಹೆಚ್ಚಾಗಿತ್ತು. ಹೀಗಾಗಿ ದ್ರೌಪದಿ ಭೀಮನನ್ನು ವಿಶೇಷವಾಗಿ ಗೌರವಿಸಿ ತನ್ನ ರಕ್ಷಣೆ ಮಾಡಿಕೊಂಡಿದ್ದಳೆನ್ನಬಹುದೆ? ಕೇವಲ ಪುರುಷನಲ್ಲಿ ದೇಹಬಲವಿದ್ದರೆ ಸಾಲದು.

- Advertisement -

ಆತ್ಮಬಲ, ಜ್ಞಾನಬಲ ಅಗತ್ಯ. ಇದು ಭೀಮನಲ್ಲಿತ್ತು. ಪ್ರತಿಯೊಬ್ಬರಲ್ಲಿಯೂ ವಿಶೇಷವಾದ ಜ್ಞಾನಶಕ್ತಿ ಜೊತೆಗೆ ದೇಹಶಕ್ತಿಯೂ ಅಡಗಿರುತ್ತದೆ. ಆದರೆ ಕೆಲವರು ತಮ್ಮ ಜ್ಞಾನವನ್ನಷ್ಟೇ ಬಳಸಿಕೊಂಡರೆ ಕೆಲವರು ದೇಹವನ್ನಷ್ಟೇ ಬಳಸಿಕೊಂಡು ಜೀವನ ನಡೆಸುತ್ತಾರೆ. ಜ್ಞಾನದಲ್ಲಿ ಸಾತ್ವಿಕ, ರಾಜಸ, ತಾಮಸಗುಣ ಇದ್ದಂತೆ ದೇಹವೂ ಇರುತ್ತದೆ. ದೈಹಿಕವಾಗಿ ಬಲಶಾಲಿ ಆದವರು ಬೌತಿಕದಲ್ಲಿ ಹೆಚ್ಚು ಸಾಧನೆ ಮಾಡಿದರೆ, ಆಂತರಿಕ ಜ್ಞಾನಶಕ್ತಿಯಿಂದ ಆಧ್ಯಾತ್ಮ ಸಾಧನೆ ಸುಲಭ.

ಇವೆರಡೂ ಮಾನವನಿಗೆ ಅಗತ್ಯವಿದ್ದರೂ ಎರಡನ್ನೂ ಸದ್ಬಳಕೆ ಮಾಡಿಕೊಂಡು, ಸಮಾಜದ ಋಣ ತೀರಿಸಲು ಮುಂದಾದಾಗಲೆ ಜೀವನ ಸಾರ್ಥಕ. ಧರ್ಮರಕ್ಷಣೆಗಾಗಿ ಪಂಚಪಾಂಡವರು ಕೌರವರನ್ನು ಯುದ್ದಮಾಡಿ ರಾಜ್ಯ ಪಡೆಯುವಂತಾಗಿತ್ತು. ಭಾರತದ ಆತ್ಮವೇ ಆಧ್ಯಾತ್ಮ. ಹಿಂದಿನ ಪುರಾಣಗಳಿಂದ ನಾವಿದನ್ನು ಕಾಣುತ್ತೇವೆ. ಎಂತಹ ಮಹಾವೀರ, ಶೂರ,ಬಲಶಾಲಿ ಆಗಿದ್ದರೂ ಧರ್ಮದ ವಿರುದ್ದ ನಡೆಯುತ್ತಿರಲಿಲ್ಲ.

ರಾಮಾಯಣ, ಮಹಾಭಾರತ ಕಥೆಗಳಲ್ಲಿಯೇ ನಾವಿದನ್ನು ಕಾಣುತ್ತೇವೆ. ಮಿತಿಮೀರಿದ ಅಧರ್ಮವನ್ನು ಯುದ್ದದಿಂದ ತಡೆಯುತ್ತಿದ್ದರು. ಇದೂ ಕೂಡ ಶಾಂತಿ ಪ್ರಸ್ತಾವನೆ ಸ್ವೀಕಾರ ಮಾಡದ ಸಮಯದಲ್ಲಿ ಮಾತ್ರ ನಡೆದಿತ್ತು. ಅಂದಿನ ಸ್ತ್ರೀ ಪುರುಷರಿಗೆ ಧರ್ಮ ಶಿಕ್ಷಣವಿದ್ದ ಕಾರಣ ಇಂದಿಗೂ ಇದು ಭೂಮಿಯಲ್ಲಿ ಮನುಕುಲಕ್ಕೆ ತಿಳಿಯುವುದಕ್ಕೆ ಒಂದು ಉಡುಗೊರೆ ರೂಪದಲ್ಲಿ ಗ್ರಂಥಗಳಾಗಿದೆ.

- Advertisement -

ಇದನ್ನು ಇಟ್ಟು ಪೂಜಿಸುವುದರಿಂದ ಪುಣ್ಯ ಬರಬಹುದು. ಆದರೆ ಪೂಜೆ ಮಾಡಿಕೊಂಡು ಅಧರ್ಮದ ರಾಜಕೀಯಕ್ಕೆ ಸಹಾಯ ಮಾಡಿದರೆ ಅಧರ್ಮವೆ. ಭೂಮಿಯಲ್ಲಿ ಸ್ತ್ರೀ ಮಾಡುವ ಎಲ್ಲಾ ಧಾರ್ಮಿಕ ಸಹಕಾರದಿಂದ ಸಂಸಾರದಲ್ಲಿ ನೆಮದಿ, ಸುಖ, ಶಾಂತಿ, ಸಮೃದ್ದಿ ಇರುತ್ತದೆ. ಎಂದರೆ ಪುರುಷರೂ ಧಾರ್ಮಿಕ ರೀತಿಯಲ್ಲಿ ನಡೆದು ಸ್ತ್ರೀ ರಕ್ಷಣೆ ಮಾಡೋದರಿಂದ ಮಾತ್ರ ಸಮಾನತೆ ಇರುತ್ತದೆ. ಭೌತಿಕಾಸಕ್ತಿ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಹಣ ಸಂಪಾದನೆಗಾಗಿ ದಾರಿ ತಪ್ಪಿ ನಡೆದರೂ ಸಹಕಾರ ಸಿಕ್ಕರೆ ಇದರ ಫಲವನ್ನು ಸಹಕಾರ ನೀಡಿದವರೆ ಮೊದಲು ಅನುಭವಿಸೋದು.

ಗೊತ್ತಿಲ್ಲದೆ ಮಾಡಿದ ತಪ್ಪು ತಿದ್ದಬಹುದು. ಗೊತ್ತಿದ್ದೂ ಮಾಡೋ ತಪ್ಪು ತಿದ್ದಲು ಕಷ್ಟ. ಅಂದಿನ ಕೌರವರ ಅಜ್ಞಾನದ ಅಹಂಕಾರ ವೆ ಅವರ ವಿನಾಶಕ್ಕೆ ಕಾರಣವಾದ ಹಾಗೆ ಇಂದಿಗೂ ಎಷ್ಟೋ ಜನರಿಗೆ ತಾವು ತಪ್ಪು ದಾರಿಯಲ್ಲಿ ನಡೆದಿರುವ ಸತ್ಯ ಅರ್ಥವಾಗಿದ್ದರೂ ತಿರುಗಿ ಬರಲಾಗದೆ ಮಧ್ಯೆ ನಿಂತು ಸತ್ಯವನ್ನು ತಡೆಯುತ್ತಿದ್ದರೆ ಜೀವ ಹೋದರೂ ಸತ್ಯ ಹೋಗೋದಿಲ್ಲ. ಭೀಷ್ಮ ಪ್ರತಿಜ್ಞೆ ಹೆಸರಾದಂತೆ ಬೀಮನ ಪ್ರತಿಜ್ಞೆ ಯೂ ಇಂದಿಗೂ ಹೆಸರಿನಲ್ಲಿದೆ. ಇಲ್ಲಿ ನಾವು ಪಾಂಡವರಲ್ಲಿದ್ದ ಧಾರ್ಮಿಕತೆ ಎಂತಹ ಪರಿಸ್ಥಿತಿಗೆ ತಂದಿಟ್ಟು ಪರೀಕ್ಷೆ ನಡೆಸಿತು ಎನ್ನುವ ಸತ್ಯವನ್ನು ನಾಟಕದಲ್ಲಿ ಅಭಿನಯಿಸಿ ಜನರೆಡೆಗೆ ತರುವುದಕ್ಕೆ ಸಾಕಷ್ಟು ಶ್ರಮಪಡುವ ನಮಗೆ ಅದರಲ್ಲಿ ಅಡಗಿದ್ದ ಸಾತ್ವಿಕ ಧರ್ಮ ಜ್ಞಾನವನ್ನು ಊಹಿಸಿಕೊಳ್ಳಲು ಕಷ್ಟ.

ಹೀಗಾಗಿ ಇವೆಲ್ಲವೂ ನಡೆದೇ ಇಲ್ಲ. ರಾಮನಿರಲಿಲ್ಲ.ಕೃಷ್ಣನಿರಲಿಲ್ಲ ಎನ್ನುವವರೂ ಇದ್ದಾರೆ. ನಿಜ, ಅವರಂತೆಯೇ ಈಗಲೂ ಭೂಮಿಯ ಮೇಲಿರುವ ಎಷ್ಟೋ ಮಹಾತ್ಮರನ್ನು ನಾವು ಕಾಣುತ್ತಿಲ್ಲ ಕಾರಣ ಅಜ್ಞಾನದಿಂದ ಮುಳುಗಿರುವ ಮನಸ್ಸು. ಆತ್ಮಜ್ಞಾನ ಕಣ್ಣಿಗೆ ಕಾಣೋದಿಲ್ಲ. ವಿಜ್ಞಾನ ಕಾಣುತ್ತದೆ.ಹೀಗಾಗಿ ಹಿಂದಿನ ಆಚರಣೆಗಳಿಂದ ಜನರು ದೇವರನ್ನು ಕಾಣಲು ಪ್ರಯತ್ನಪಟ್ಟರು.

ಆಚರಣೆಗಳ ಹಿಂದಿನ ಉದ್ದೇಶ ಧರ್ಮ ರಕ್ಷಣೆ,ಸತ್ಯರಕ್ಷಣೆ ಆಗಿದ್ದರೆ ಈಗ ನಾವು ಹೀಗಿರುತ್ತಿರಲಿಲ್ಲ. ರಾಜಕೀಯದ ರಕ್ಷಣೆ ಮಾಡಲು ಹೊರಟು ಅದೇ ಈಗ ಅತಂತ್ರಸ್ಥಿತಿಗೆ ತಂದು ಕೂರಿಸಿದೆ. ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಬೇಕಿದೆ ಆತ್ಮಜ್ಞಾನ.ಬೌತಿಕದಲ್ಲಿ ವಿಶೇಷ ಜ್ಞಾನ ಒಳಗೆ ಹಾಕಿಕೊಂಡು ಒಳಗಿದ್ದ ಸತ್ಯಧರ್ಮ ಮರೆತರೆ ವ್ಯರ್ಥ. ಯಾವುದಕ್ಕೂ ಚಿಂತನೆ ನಡೆಸುವುದಕ್ಕೂ ನಮಗೆ ಆ ಪರಾಶಕ್ತಿಯ ಅರಿವಿರಬೇಕು. ಪರಮಾತ್ಮ ಚರಾಚರದಲ್ಲಿಯೂ ಇದ್ದ ಹಾಗೆ ಮನುಕುಲವನ್ನು ರಕ್ಷಣೆ ಮಾಡಿರುವ ಪರಾಶಕ್ತಿ ಬಿಟ್ಟು ಯಾರೂ ಇಲ್ಲ.

ಭೂಮಿಯ ಮೇಲಿರುವ ಸ್ತ್ರೀ ಶಕ್ತಿಯ ಸಹಕಾರವೆ ಧರ್ಮ ಅಧರ್ಮ ಹೆಚ್ಚಾಗಲು ಕಾರಣ. ನಮ್ಮನ್ನು ರಕ್ಷಣೆ ಮಾಡೋರಲ್ಲಿ ಅಧರ್ಮವಿದ್ದರೆ ಅಧರ್ಮವೆ ಬೆಳೆದು ಶಿಕ್ಷೆ ನೀಡುತ್ತದೆ. ಅಂದಿನ ಮಹಾರಥಿಗಳೇ ತಡೆಯಲಾಗದ್ದನ್ನು ಇಂದಿನ ಮನುಕುಲ ತಡೆಯುವುದೆ? ಪರಮಾತ್ಮನಿಗೆ ಎಲ್ಲಾ ಒಂದೆ. ಅವರವರ ಧರ್ಮ ಕರ್ಮ ಬಿಡದಿದ್ದರೆ ಶ್ರೀ ರಕ್ಷೆ.

ಶ್ರೀ ಕೃಷ್ಣ ಪರಮಾತ್ಮನೆ ಅರ್ಜುನನಿಗೆ ತಿಳಿಸದಂತೆ ” ನನಗೂ ನಿನಗೂ ಜನ್ಮಗಳಿವೆ, ನನಗೆ ಹಿಂದಿನ ಜನ್ಮದ ನೆನಪಿದ್ದಹಾಗೆ ನಿನಗಿರೋದಿಲ್ಲ” ಎಂದ ಮೇಲೆ. ನರರಿಗೆ ಹಿಂದಿನ ಜನ್ಮದ ಕರ್ಮ ಹಾಗು ಋಣದ ಬಗ್ಗೆ ತಿಳಿಯದೆ ಮತ್ತಷ್ಟು ಈ ಜನ್ಮದಲ್ಲಿ ಹೆಚ್ಚಿಸಿಕೊಂಡರೆ ತೀರಿಸದೆ ವಿಧಿಯಿಲ್ಲ. ಸ್ತ್ರೀ ಋಣ,ಭೂಮಿ ಋಣ ತೀರಿಸಲು ಜ್ಞಾನ ಅಗತ್ಯವಿದೆ. ಭೀಮ ಎಷ್ಟೇ ಬಲಶಾಲಿಯಾಗಿದ್ದರೂ ಜ್ಞಾನವಿದ್ದ ಕಾರಣ ಸಹನೆಯಿಂದ ನಡೆದುಕೊಳ್ಳಲು ಸಾಧ್ಯವಾಗಿತ್ತು.

ಸಹನೆ ಎಂದರೆ ಅಧರ್ಮದ ಪರ ನಿಂತು ನೋಡಬಾರದಷ್ಟೆ. ಪತಿಯನ್ನು ಅಧರ್ಮದಿಂದ ನಡೆಯಲು ಬಿಟ್ಟು ಪೂಜೆ ಮಾಡಿದರೆ ಭೂಮಿಯಲ್ಲಿನ ಸ್ತ್ರೀ ಗೆ ಕಷ್ಟ ನಷ್ಟ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group