ಹೊಸದಿಲ್ಲಿ – ಜಪಾನ್ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದುಕೊಂಡ ನೀರಜ್ ಚೋಪ್ರಾ ಗೆ ವಿವಿಧ ರಾಜ್ಯ ಸರ್ಕಾರಗಳು ಅಪಾರ ಪ್ರಮಾಣದಲ್ಲಿ ಬಹುಮಾನ ಘೋಷಣೆ ಮಾಡಿವೆ.
ಚಿನ್ನದ ಹುಡುಗನಿಗೆ ಕೋಟ್ಯಂತರ ಬಹುಮಾನ ಘೋಷಿಸಿದ ರಾಜ್ಯಗಳು ಇಂತಿವೆ:
ಪಂಜಾಬ್ ನ ಅಮರೀಂದರ್ ಸಿಂಗ್ ಸರ್ಕಾರ ೨ ಕೋಟಿ ರೂ.ಗಳ ಕೊಡುಗೆ ನೀಡುವದಾಗಿ ಹೇಳಿದೆ.
ಹರ್ಯಾಣದ ಮನೋಹರಲಾಲ ಖಟ್ಟರ್ ಸರ್ಕಾರ ನೀರಜ್ ಅವರಿಗೆ ಆರು ಕೋಟಿ ರೂ.ಗಳ ಕೊಡುಗೆಯ ಜೊತೆಗೆ ಒಂದು ನೌಕರಿ ನೀಡಲಿದೆ.
ಮಣಿಪುರ ಸರ್ಕಾರದಿಂದ ಒಂದು ಕೋಟಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ ) ಯಿಂದ ಒಂದು ಕೋಟಿ ನೀರಜ್ ಗೆ ಹಾಗೂ ಬೆಳ್ಳಿ ಪದಕ ಪಡೆದವರಿಗೆ ೫೦ ಲಕ್ಷ ಕಂಚಿನ ಪದಕ ಪಡೆದವರಿಗೆ ರೂ. ೨೫ ಲಕ್ಷ ಬಹುಮಾನ ಅಲ್ಲದೆ ಹಾಕಿ ತಂಡಕ್ಕೆ ೧.೨೫ ಕೋಟಿ ರೂ. ಗಳ ಬಹುಮಾನ ಘೋಷಿಸಿದೆ.
ಪ್ರಸಿದ್ಧ ಆನ್ ಲೈನ್ ಶಿಕ್ಷಣ ಕಂಪನಿ ಬೈಜು ಕೂಡ ನೀರಜ್ ಗೆ ೨ ಕೋಟಿ ರೂ. ಗಳನ್ನು ನೀಡುವುದಾಗಿ ಹೇಳಿದ್ದು, ಚೆನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಸಂಸ್ಥೆ ಕೂಡ ಒಂದು ಕೋಟಿ ರೂ. ನೀಡಲಿದೆ. ಜೊತೆಗೆ ಇನ್ನೂ ಹಲವು ರಾಜ್ಯಗಳು, ಹಲವಾರು ಕ್ರೀಡಾ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಕೊಡುಗೆಗಳನ್ನು ನೀರಜ್ ಅವರಿಗಾಗಿ ಘೋಷಿಸಿವೆ.