spot_img
spot_img

ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರ ಅಲ್ಲ

Must Read

spot_img
- Advertisement -

೭೫ನೇ ಸ್ವಾತಂತ್ರ್ಯ ದಿನದ ಸಮಯದಲ್ಲಿ ನಾವು ಭಾರತೀಯ ಪ್ರಜೆಗಳು ಮುಖ್ಯವಾಗಿ ತಿಳಿಯಬೇಕಾದದ್ದು,ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಾಗಿ ಬದುಕುವುದಲ್ಲ. ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಇದೊಂದು ಪ್ರಶ್ನೆ ಏಳುತ್ತದೆ.

ಹೌದು ಸ್ವಾತಂತ್ರ್ಯ ಸಿಕ್ಕಿದ್ದೆ ಆದರೆ ಯಾವುದಕ್ಕೆ ಸಿಕ್ಕಿದ್ದು? ಯಾರಿಗೆ ಸಿಕ್ಕಿದ್ದು? ಯಾವಾಗ ಸಿಕ್ಕಿದ್ದು? ಎಲ್ಲಿ ಸಿಕ್ಕಿದ್ದು? ಹೇಗೆ ಸಿಕ್ಕಿದ್ದು? ಕೊಟ್ಟವರು ಯಾರು? ಪಡೆದುಕೊಂಡವರು ಯಾರು?ಸ್ವಾತಂತ್ರ್ಯ ಕೊಡುವಾಗ ಮತ್ತು ಪಡೆದುಕೊಳ್ಳುವಾಗ ಯಾರಿದ್ದರು? ಸ್ವಾತಂತ್ರ್ಯ ಎಂಬುದು ನೋಡಲು ಹೇಗಿದೆ? ಇವೆಲ್ಲವುಗಳಿಗೆ ಉತ್ತರ ಸಿಕ್ಕಾಗ ನಮಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿದೆ ಎಂದರ್ಥ.

ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೆ ಆದರೆ ಯಾವುದಕ್ಕೆ ಸಿಕ್ಕಿದೆ. ಕಂಡ ಕಂಡ ಕಡೆಗೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿಕೃತ ಕಾಮುಕರಿಗೆ ಅಲ್ವ.ಜಗತ್ತು ಕಣ್ಣು ಬಿಡುವ ಮೊದಲು ಹೆಣ್ಣನ್ನು ದೇವರೆಂದು ಪೂಜಿಸಿದ ನಾಡು ನಮ್ಮದು. ಇಂದು ಕೇವಲ ಭೋಗದ ವಸ್ತುವನ್ನಾಗಿ ಬಳಸಿಕೊಂಡು ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅಲ್ಲವೇ? ನಾವು ನಮ್ಮ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಹಾಳು ಮಾಡಿ ಹೊರಟಿರುವ ನಮಗೆ ಸ್ವಾತಂತ್ರ್ಯ ಬೇಕಾ?ಬದುಕನ್ನು ಸ್ವೇಚ್ಛೆಯಾಗಿ ಹರಿದಾಡಲು ಬಿಟ್ಟು ಕಾನೂನಿನ ಕಟ್ಟಳೆಗಳನ್ನು ವಿಧಿಸಿದ್ದೇವೆ.

- Advertisement -

ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರೆ ಆದರೂ ‌ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಬಹುದಲ್ಲವೆ? ಇದೇ ಅಲ್ಲವೇ? ಸ್ವಾತಂತ್ರ್ಯ. ಸಾವಿರಾರು ಜನರ ಪಾಲಿನ ಒಬ್ಬ ಕ್ರೂರ ನಿರಪರಾಧಿಯಾಗಿ ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಡುತ್ತದೆ ಇದೇ ಅಲ್ಲವೇ ಸ್ವಾತಂತ್ರ್ಯ. ದೇಶದಲ್ಲಿ ದೇಶದ್ರೋಹಿ ಕಾರ್ಯಗಳನ್ನು ಮಾಡಲು ಅವಕಾಶ ನೀಡುವ ನಮಗೆ ಅಲ್ಲವೇ ಸ್ವಾತಂತ್ರ್ಯ ಸಿಕ್ಕಿದ್ದು.

ಹಣವೆಂಬ ಹೊಳೆ ಯಾರ ಮನೆಯಲ್ಲಿ ಹರಿಯುತ್ತದೆಯೋ ಅವರಿಗೆ ಸಿಕ್ಕಿದ್ದು ಸ್ವಾತಂತ್ರ್ಯ. ಒಂದು ಹೊತ್ತಿನ ಊಟಕ್ಕೆ ಗತಿಯಿರದ ಎಷ್ಟೋ ಬೀದಿ ಬೀದಿಗಳಲ್ಲಿ ಮೆರವಣಿಗೆ ಹೊರಟಿರುವ ಹೊಟ್ಟೆಗಳಲ್ಲಿ ಸ್ವಾತಂತ್ರ್ಯ ಇದೆಯಾ?ಕೇವಲ ಹಾರ ತುರಾಯಿಗಳಲ್ಲಿ,ಬೃಹತ್ ವೇದಿಕೆಗಳಲ್ಲಿ, ಮೇಜು ಕುಟ್ಟಿ, ಧ್ವನಿವರ್ಧಕ ಮುರಿದು ಮಾಡುವ ಭಾಷಣಗಳಲ್ಲಿ ಸ್ವಾತಂತ್ರ್ಯ ಇಲ್ಲ. ಇದು ಒಂದು ದಿನಕ್ಕೆ ಸೀಮಿತವಾಗುವುದಲ್ಲ.

ಯಾವತ್ತು ಒಂದೊತ್ತಿನ ಊಟಕ್ಕೆ ಮೆರವಣಿಗೆ ಹೊರಟ ಹೊಟ್ಟೆಗಳಿಗೆ ಒಂದು ತುತ್ತು ಊಟ ಹೊಟ್ಟೆಗೆ ಬೀಳುತ್ತದೆಯೋ ಆಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗುತ್ತದೆ. ಒಂದು ಹೆಣ್ಣು ಮಗು ನಿರ್ಭಯವಾಗಿ ತನ್ನ ಎಲ್ಲ ರೀತಿಯ ಕೆಲಸಗಳನ್ನು ಒಬ್ಬಳೇ ಮಾಡಿಕೊಂಡು ಹೋಗಲು ಸಮರ್ಥಳಾಗುತ್ತಾಳೋ ಆಗ ಸ್ವಾತಂತ್ರ್ಯ ಬಂದದ್ದು ಸಾರ್ಥಕವಾಗುತ್ತದೆ.ಪರಂಪರೆಯನ್ನು ನೋಡುವ ದೃಷ್ಟಿಕೋನಗಳು ಬದಲಾಗಬೇಕಿದೆ.

- Advertisement -

ಒಂದು ಶಕ್ತಿ ಮುಂದುವರೆಯುತ್ತಿದ್ದರೆ ಅದಕ್ಕೆ ಇನ್ನಷ್ಟು ಶಕ್ತಿ ನೀಡಿ ಮುಂದೆ ಕಳುಹಿಸಿ ಕೊಡುವ ಪ್ರಯತ್ನ ಮಾಡಬೇಕು. ಇನ್ನೊಬ್ಬರ ಒಳಿತಿಗಾಗಿ ಶ್ರಮಿಸಬೇಕು. ಬದುಕು ನಾವಂದುಕೊಂಡಷ್ಟು ಸುಲಭವಲ್ಲ.ಅದು ಸ್ವಾತಂತ್ರ್ಯವೂ ಅಲ್ಲ. ಜಾತಿಯ ಸಂಕೋಲೆಗಳನ್ನು ಕಳಚಿ ಹಾಕಬೇಕು. ನಮ್ಮ ನಮ್ಮಗಳ ನಡುವಿನ ಅಂತಃ ಕಲಹಗಳನ್ನು ಹೊಡೆದು ಹಾಕಬೇಕು. ಕೋಮು ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನು ಗಡೀಪಾರು ಮಾಡಬೇಕು.

ಸಾಮರಸ್ಯದ ಬದುಕು ಕಟ್ಟಿಕೊಂಡು ಜಾತ್ಯಾತೀತ ಮನೋಭಾವ ಬೆಳೆದು ಬಂದ ಮೇಲೆ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು ಅರ್ಥಪೂರ್ಣ ಎನಿಸುತ್ತದೆ. ಸಮಾನತೆಯ ಶಿಕ್ಷಣ, ಕೈಗೆಟುಕುವ ಕಾನೂನು ವ್ಯವಸ್ಥೆ, ಬಡತನ ನಿವಾರಣೆ, ಹಳ್ಳಿಗಳ ಉದ್ದಾರ, ಮೂಲ ಶಿಕ್ಷಣ ಕಲಿಕೆ,ನಿರಂತರವಾದ ಬದಲಾವಣೆಗಳು,ಕಲೆ,ಸಂಸ್ಕ್ರತಿ, ಪರಂಪರೆಯನ್ನು ಗೌರವಿಸಿ ಉಳಿಸಿಕೊಂಡು ಬಂದಾಗ ನಿಜಕ್ಕೂ ಅರ್ಥ ಸಿಗುತ್ತದೆ.

ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ನೋಡಬಾರದು.ಸ್ವಾತಂತ್ರ್ಯ ಸ್ವೇಚ್ಛೆಯಾದರೆ ಅದು ಸ್ವಾತಂತ್ರ್ಯವಲ್ಲ.ಪರಾಧೀನತೆಯ ಪರಮಾವಧಿ.ಸರಿ ಸುಮಾರು ಇನ್ನೂರು ವರ್ಷಗಳ ಕಾಲ ಅನುಭವಿಸಿದ ಪರಾಧೀನತೆ ಸಾಕು.ಸ್ವಾವಲಂಬಿ ಬದುಕು ಕಟ್ಟಿಕೊಳ್ಳೋಣ. ಹೀಗೆ ಸದಾಕಾಲವೂ ನಮ್ಮ ನಮ್ಮಗಳ ನಡುವಿನ ಸ್ವಾರ್ಥಕ್ಕೆ ದೇಶ ಬಲಿಯಾಗುತ್ತದೆ.ಮತ್ತೆ ನಾವೆಲ್ಲರೂ ಪರಕೀಯರ ಗುಲಾಮಗಿರಿಯನ್ನು ಅಧಿಕೃತವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆ ಅಣು ಬಾಂಬ್ ದಾಳಿ ನಡೆಯಿತು.

ಇಡೀ ದೇಶ ಭೀಕರ ಅರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿತ್ತು. ಇಂಗ್ಲೆಂಡಿನ ಒಂದು ಶಾಲೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗ ತನ್ನ ಪೆನ್ಸಿಲ್ಲನ್ನು ಹೆರೆಯುತ್ತಿದ್ದ. ಅದು ಮತ್ತೆ ಮತ್ತೆ ಹಾಳಾಗುತ್ತಿತ್ತು. ಪಕ್ಕದ ಅವನ ಸ್ನೇಹಿತ ನೀನೇಕೆ ನನ್ನ ತರಹದ ಪೆನ್ಸಿಲ್ ತೆಗೆದು ಕೊಳ್ಳುವುದಿಲ್ಲ ಎಂದು ಕೇಳಿದಾಗ ಆ ಹುಡುಗ ಹೇಳುತ್ತಾನೆ, ಸ್ನೇಹಿತನೆ ನನ್ನ ದೇಶ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ, ನಮ್ಮ ದೇಶದ ವಸ್ತುಗಳನ್ನು ನಾವೇ ಖರೀದಿಸಲು ಹಿಂದೇಟು ಹಾಕಿದರೆ ಹೇಗೆ ಎಂದಾಗ ಅವನ ಕಣ್ಣಾಲಿಗಳು ತುಂಬಿ ಬಂದಿದ್ದವು. ಇಂದು ಅದೇ ದೇಶದ ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿದೆ.

ಕಾರಣ ಅಲ್ಲಿಯ ಜನ ದೇಶಕ್ಕೋಸ್ಕರ ದುಡಿಯುತ್ತಾರೆ.ನಾವು ದುಡಿಯುವ ಕ್ಷೇತ್ರದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲವೆಂದಾಗ ದಂಗೆ ಏಳುತ್ತೇವೆ. ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುತ್ತೇವೆ. ಏಕೆಂದರೆ ನಮಗೆ ಎಲ್ಲವನ್ನೂ ಮಾಡುವುದಕ್ಕೆ ಸ್ವಾತಂತ್ರ್ಯ ಇದೆ. ಇದಕ್ಕೆ ನಾವೇ ಪರೋಕ್ಷವಾಗಿ ದಂಡ ಕಟ್ಟುತ್ತೇವೆ.

ಹೀಗೆ ಕೇವಲ ಸ್ವಾತಂತ್ರ್ಯ ಎಂಬುದನ್ನು ಒಂದು ಅರ್ಥ ಪೂರ್ಣ ವ್ಯವಸ್ಥೆಯನ್ನಾಗಿ ಮಾಡಬೇಕೆ ವಿನಃ ಅದು ನಮ್ಮ ಸೂತ್ರದ ಗೊಂಬೆಯಾಟವಾಗಬಾರದು. ಆಗಲೇ ನಾವು ಪಡೆದ ಸ್ವಾತಂತ್ರ್ಯ ನಿಜವಾಗಿಯೂ ನಮ್ಮ ಹಿರಿಯರು ನಮಗೆ ಬಿಟ್ಟು ಕೊಟ್ಟ ಬಳುವಳಿ ಎನ್ನುವಲ್ಲಿ ಯಾವುದೇ ಸಂಶಯವಿಲ್ಲ. ಈ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಎಂದುಕೊಳ್ಳೋಣ.


ಶ್ರೀ ಇಂಗಳಗಿ ದಾವಲಮಲೀಕ
ಸಹ ಶಿಕ್ಷಕರು

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group