ಎಬಿವಿಪಿ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ

Must Read

ಅಮೃತಮಹೋತ್ಸವದ ಭಿತ್ತಿ ಪತ್ರ ಬಿಡುಗಡೆ

ಬೀದರ – ಗಡಿ ಜಿಲ್ಲೆ ಬೀದರ್ ಭಾಲ್ಕಿ ತಾಲ್ಲೂಕಿನ ಖಟಕಚಿಂಜೊಳಿ ಗ್ರಾಮದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ ಪೋಸ್ಟರ್ ಬಿಡುಗಡೆ ಮಾಡಲಾಯಿತು.

75ನೇ ಸ್ವಾತಂತ್ರ್ಯ ದಿನಾಚರಣೆಯ ವರ್ಷದ ವಿವಿಧ ಕಾರ್ಯಕ್ರಮದ ಭಿತ್ತಿಪತ್ರಗಳ ಬಿಡುಗಡೆಗೆ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಚಾಲನೆ ನೀಡಿದರು.

ಎಬಿವಿಪಿ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಮೃತೋತ್ಸವ ನಡೆಯುತ್ತಿದ್ದ ಏಕ್ ಗಾಂವ್ ಏಕ್ ತಿರಂಗಾ ಎನ್ನುವ ಅಭಿಯಾನದ ಮೂಲಕ ಪ್ರತಿ ಗ್ರಾಮದಲ್ಲಿ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗುವುದರೊಂದಿಗೆ ಆಚರಿಸಲಾಗುತ್ತಿದೆ ಅಲ್ಲದೆ ವರ್ಷಪೂರ್ತಿ ತಿರಂಗಾ ಯಾತ್ರಾ, ಸೈಕಲ್ ಜಾಥಾ, ರಕ್ತದಾನ ಶಿಬಿರ, ಕರೋನಾ ವಾರಿಯರ್ಸ್ ಗೆ ಸನ್ಮಾನ, ಕ್ರಿಡಾ ಚಟುವಟಿಕೆ, ರಾಷ್ಟ್ರೀಯತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಾಡರ್ ನುಡಿದರು.

ಈ ಸಂದರ್ಭದಲ್ಲಿ ಎಬಿವಿಪಿ ಸೋಮನಾಥ್ ಪೂಜಾರಿ, ಪಂಡಿತ, ಪವನ ಪತಂಗೇ, ಅಭಿಷೇಕ, ಸಂತೋಷ್ ಸೇರಿದಂತೆ ವಿವಿಧ ಕಾರ್ಯಕರ್ತರು ಉಪಸ್ಥಿತರಿದ್ದರು.

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...

More Articles Like This

error: Content is protected !!
Join WhatsApp Group