ಸಿಂದಗಿ: ದೇಹದ ಆರೋಗ್ಯಕ್ಕಿಂತ ದೊಡ್ಡ ಶಕ್ತಿ ಬೇರೊಂದು ಇಲ್ಲ ನಾವು ಮೊದಲು ಆರೋಗ್ಯವಂತರಾದಾಗ ನಮಗೆ ಪರಿಪೂರ್ಣ ಶಿಕ್ಷಣ ದೊರೆಯುತ್ತದೆ ಎಂದು ಶಾಲಾ ಮುಖ್ಯಗುರು ಎನ್.ಕೆ ಚೌಧರಿ ಹೇಳಿದರು.
ತಾಲೂಕಿನ ಬಂದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ (ಆರ್ ಬಿ ಕೆ ಎಸ್ ) ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಶುದ್ದವಾದ ನೀರು ಕುಡಿಯಬೇಕು ಸಾತ್ವಿಕ ಆಹಾರ ಸೇವನೆ ಮಾಡಬೇಕು, ಸಮಾಜದಲ್ಲಿ ಸಾಮಾಜಿಕ ಅಂತರ ಪಾಡಿಕೊಂಡು ಕೋವಿಡ್ 19 ಜಾಗ್ರತೆಯಿಂದ ಇರಬೇಕು .”ಆರೋಗ್ಯವೇ ಭಾಗ್ಯ ನಮ್ಮ ಸಂಪತ್ತಿಗಿಂತ ಯಾವ ಭಾಗ್ಯ ಇಲ್ಲ. ಯಾವುದೇ ವ್ಯಕ್ತಿಯು ಆರೋಗ್ಯ ಸ್ವಾಸ್ಥ್ಯವಾಗಿದ್ದಾಗ ಮಾತ್ರ ಆ ವ್ಯಕ್ತಿ ಕ್ರಿಯಾಶೀಲರಾಗಲು ಸಾಧ್ಯ .ಆ ವ್ಯಕ್ತಿಯು ಸಾಮಾಜಿಕವಾಗಿ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯ.
ಸದೃಢ ದೇಹದಲ್ಲಿ ಸದೃಢ ಮನಸ್ಸು .ಎಂಬಂತೆ ಮನುಷ್ಯನ ದೇಹ ಸದೃಢವಾದಾಗ ಅವರು ಆರೋಗ್ಯದಿಂದ ಸದಾ ಅವರ ಮನಸ್ಸು ಕೂಡ ಆರೋಗ್ಯಯುತವಾಗಿದ್ದು.
ಅವರ ತಲೆಯಲ್ಲಿ ಉತ್ತಮ ವಿಚಾರಗಳು ಮೂಡುತ್ತವೆ. ಅವರು ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಸಂತೋಷವಾಗಿರುತ್ತಾರೆ ಎಂದರು.
ರಾಷ್ರ್ಟೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ವೈದ್ಯ ಡಾಕ್ಟರ್ ಪ್ರಿಯಾಂಕ ಕುಂಬಾರ ಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಿ ಶರೀರದ ಭಾಗಗಳು ಸ್ವಚ್ಛವಾಗಿ ಇಟ್ಟುಕೊಂಡು .ಪ್ರತಿ ವಾರ ತಮ್ಮ ಉಗುರುಗಳು ಹಿರಿಯರ ಸಹಕಾರದಿಂದ ಸ್ವಚ್ಛ ಮಾಡಿ ಕೊಳ್ಳಬೇಕು .ಪರಿಶುದ್ದವಾದ ಆಹಾರ ಸೇವಿಸಿಕೊಂಡು ಆರೋಗ್ಯವಂತರಾಗಬೇಕು.
ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಲು ನಾವು ಸಮತೋಲನ ಆಹಾರವು ಪ್ರತಿ ನಿತ್ಯ ಸೇವನೆ ಮಾಡುವ ಮೂಲಕ ಕಾರ್ಬೋಹೈಡ್ರೇಟ್, ಪ್ರೋಟೀನ್ವಿ, ಟಮಿನಗಳು, ಕೊಬ್ಬುಗಳು, ಖಣಿಜಗಳು ಎಲ್ಲವನ್ನು ಮಾನವ ದೇಹಕ್ಕೆ ಅವಶ್ಯ ಇದೆ .ಮಾನವನ ದೇಹಕ್ಕೆ ನೀರು ಮತ್ತು ನಾರು ಪದಾರ್ಥಗಳನ್ನೊಳಗೊಂಡ ಆಹಾರವನ್ನು ಸಮತೋಲನ ಆಹಾರ ಸೇವಿಸಬೇಕು ತಮ್ಮ ಕುಟುಂಬದಲ್ಲಿ ವಿದ್ಯಾರ್ಥಿಗಳು ಹಸಿರು ತರಕಾರಿ, ಕಾಯಿಪಲ್ಯ, ಹಣ್ಣು ಹಂಪಲು, ಹಾಲು, ಸೇವಿಸುವದರಿಂದ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂದರು.
ಆರೋಗ್ಯ ಇಲಾಖೆಯ ಚಂದ್ರಶೇಖರ ಕಾಳೆ.ಶಿಕ್ಷಕರಾದ ಎನ್.ಎಂ.ಚಪ್ಪರಬಂದ, ಎಂ.ಬಿ.ಕೋರವಾರ, ಚಂದ್ರಶೇಖರ ಬುಯ್ಯಾರ, ನಿಂಗನಗೌಡ ಪಾಟೀಲ, ಸಿದ್ದಲಿಂಗಪ್ಪ ಪೊದ್ದಾರ, ಬಸವರಾಜ ಅಗಸರ, ಶಿಕ್ಷಕಿಯರಾದ ಸುಮಾಂಗಲಾ ಕೆಂಭಾವಿ.ಶ್ರೀದೇವಿ ಕುರ್ಲೆ, ಮಲ್ಲಮ್ಮ ಹಿಪ್ಪರಗಿ, ಅಕ್ಷತಾ ಉಡಕೇರಿ ಭಾಗವಹಿಸಿದರು.