ಜಲ ಶುದ್ಧೀಕರಣ ಘಟಕಕ್ಕೆ ಎಸಿ ಧಿಡೀರ್ ಭೇಟಿ

Must Read

ಸಿಂದಗಿ: ಪಟ್ಟಣದ ಕುಡಿಯುವ ನೀರು ಪೂರೈಸುವ ಶುದ್ದೀಕರಣ ಘಟಕಕ್ಕೆ ಉಪವಿಭಾಗ ಅಧಿಕಾರಿ ರಾಹುಲ್ ಶಿಂಧೆಯವರು ಹಾಗೂ ಸಿಂದಗಿ ನಗರ ಸುಧಾರಣಾ ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪುರ ಅವರು ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿ, ಪಟ್ಟಣದ ಸುಮಾರು 50 ಸಾವಿರ ಜನತೆ ಶುದ್ಧ ಕುಡಿಯುವ ಘಟಕವಿದ್ದು ಅಲ್ಲಿ ಮೇಲುಸ್ತುವಾರಿ ಪುರಸಭೆ ಸಿಬ್ಬಂದಿಯ ನಿರ್ಲಕ್ಷದಿಂದ ಯಾವುದೇ ತೆರನಾದ ಸ್ವಚ್ಚತೆ ಕಾಣುತ್ತಿಲ್ಲ ಎಲ್ಲರು ಖಾಸಗಿ ಶುದ್ಧ ನೀರಿನ ಘಟಕಗಳಿಗೆ ಹೋಗಿ ದುಡ್ಡು ಕೊಟ್ಟು ನೀರು ಕುಡಿಯುವ ದುಸ್ಥಿತಿ ಉಂಟಾಗಿದ್ದು ಹಾಗಿದ್ದರೆ ಪುರಸಭೆ ಅಧಿಕಾರಿ ಕಾರ್ಯವೇನು ಎಂದು ಜನರು ಪ್ರಶ್ನಿಸುವಂತಾಗಿದೆ. ಕಾರಣ ಶುಚಿತ್ವ, ಕ್ಲೋರಿನೇಶನ್, ಬ್ಲೀಚಿಂಗ್ ಪೌಡರ್ ಮಿಶ್ರಣ, ಕೆಲಸಕ್ಕೆ ಬಾರದ ಪುರಸಭೆಯ ಸಂಬಂಧಿಸಿದ ವಸ್ತುಗಳನ್ನು ಬೇಕಾ ಬಿಟ್ಟಿ ಇಟ್ಟಿರುವುದು, ಮಿಲ್ಲಿನ ನೀರಿನ ವಾಸನೆ ಹಾಗೂ ನೀರಿನ ಗುಣಮಟ್ಟದ ಟೆಸ್ಟ್ ಮಾಡುವ ಲ್ಯಾಬ್ ಇರದೇ ಇರುವುದು, ಪೌಡರ್ ಮಿಕ್ಸ್ ಮಾಡುವ ಎಲ್ಲಾ ಮಿಷನ್ ಗಳು ಸುಟ್ಟಿರುವ ಕಾರಣ ಪಟ್ಟಣಕ್ಕೆ ಮಿಲ್ಲಿನ ನೀರು ಪೂರೈಕೆ ಆಗುತ್ತಿದೆ ಎಂದು ಉಪವಿಭಾಗಾಧಿಕಾರಿಗಳಿಗೆ ವಿವರಿಸಿದರು.

ಇಂಡಿ ಉಪವಿಭಾಧಿಕಾರಿ ರಾಹುಲ್ ಸಿಂಧೆ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿಗಳು ಸಿಬ್ಬಂದಿಗಳ ಕಾರ್ಯವೈಕರಿಯನ್ನು ಗಮನಿಸಿ ಶಿಸ್ತಿನ ಕ್ರಮ ಜರುಗಿಸಬೇಕು ಮತ್ತು ನಗರದಲ್ಲಿ ಹರಿಯುವ ಪೋಲಾದ ನೀರು ತಡೆಗಟ್ಟಲು 4 ದಿನಗಳ ಗಡುವು ನೀಡಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟೀಸ್ ನೀಡಲು ತಹಸೀಲ್ದಾರ ನಿಂಗಪ್ಪ ಬಿರಾದಾರ್ ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶ್ರೀಶೈಲ ಯಳಮೇಲಿ, ನ್ಯಾಯವಾದಿ ಪ್ರದೀಪ ದೇಶಪಾಂಡೆ ಇದ್ದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group