spot_img
spot_img

ಶ್ರೀ ಕೃಷ್ಣ ಜನ್ಮಾಷ್ಟಮಿ

Must Read

spot_img
- Advertisement -

ರಾಧ ಕೃಷ್ಣ ಮತ್ತು ಶ್ರೀ ಕೃಷ್ಣ ಧಾರಾವಾಹಿಗಳು ಕೊರೋನಾ ಸಂದರ್ಭದಲ್ಲಿ ಟೀವೀ ವಾಹಿನಿಗಳಲ್ಲಿ ಪ್ರಸಾರವಾಗುವ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ಕೃಷ್ಣನ ಕುರಿತು ಇಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸುತ್ತಿವೆ. ಶ್ರಾವಣ ಮಾಸದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ.

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ
ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ
ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ
ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ

ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸರ್ವೋತ್ಕøಷ್ಟವಾದದ್ದು. ದೇವಕಿ ಮತ್ತು ವಸುದೇವರು ಸೆರಮನೆಯಲ್ಲಿರುವಾಗ ಜನ್ಮ ತಳೆದ ಕೃಷ್ಟ್ಣ. ತಂದೆ ವಸುದೇವ ತಾಯಿ ದೇವಕಿ.ಸಾಕು ತಂದೆ ನಂದರಾಜ.ಸಾಕು ತಾಯಿ ಯಶೋಧೆ.ಉಗ್ರಸೇನ ಮಹಾರಾಜ ಕೃಷ್ಣನ ಅಜ್ಜ.

- Advertisement -

ರಾಕ್ಷಸನಾದ ಕಂಸ ಕೃಷ್ಣನ ಸೋದರಮಾವ. ಕಂಸನ ಮರಣ ಕೃಷ್ಣನಿಂದ ಆಯಿತು. ಶ್ರೀ ಮನ್ನಾರಾಯಣ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಟ್ಣ. ಶ್ರಾವಣ ಮಾಸದ ರೋಹಿಣಿ ನಕ್ಷತ್ರದಲ್ಲಿ ಕೃಷ್ಟ್ಣನ ಜನ್ಮವಾಯಿತು. ಈ ದಿನ ಕೃಷ್ಟ್ಣ ಜನ್ಮಾಷ್ಟಮಿ ಆಚರಿಸುವರು.ಈ ದಿನ ಕೃಷ್ಟ್ನನನ್ನು ಪೂಜಿಸುವರು. ತಮ್ಮ ಮನೆಯ ಪೂಜಾ ಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಶೃಂಗರಿಸಿ ತಮ್ಮ ಮನೆಯ ಪೂಜಾ ಮಂಟಪದಿಂದ ಮನೆಯ ಬಾಗಿಲಿನ ಹೊಸ್ತಿಲಿನವರೆಗೂ ಹೆಜ್ಜೆ ಗುರುತುಗಳನ್ನು ಇಡುವರು.

ಇದು ಬಾಲ ಕೃಷ್ಟ್ಣನು ತಮ್ಮ ಮನೆಯೊಳಗೆ ಬರುವ ಸೂಚನೆ. ಭವಿಷೋತ್ತರ ಪುರಾಣದ ಆಶಯದಂತೆ ಕೃಷ್ಣಾಷ್ಟಮಿಯಂದು ಕೃಷ್ಣನನ್ನು ಅರ್ಚನೆ ಮಾಡಿದರೆ ಮೂರು ಜನ್ಮಗಳಲ್ಲಿ ಮಾಡಿದ ಪಾಪವು ನಾಶ ಹೊಂದುವುದು ಎಂದು ನಂಬಿಕೆ. ಶ್ರೀ ಕೃಷ್ಣನ ವ್ಯಕ್ತಿತ್ವ ಅದ್ವಿತೀಯವಾದುದು.

ಬಾಲ್ಯಲೀಲೆಗಳಿಂದ ಹಿಡಿದು ನಿರ್ವಾಣದ (ಅಂತಿಮ) ಕ್ಷಣದವರಗೂ ಘಟನೆಗಳು ನಮ್ಮ ಬದುಕಿನಲ್ಲಿ ಅನೇಕ ಸಮಸ್ಯೆಗಳಿಗೆ ಸಮಾಧಾನವನ್ನು ಸೂಚಿಸುತ್ತವೆ. ಈ ದಿಸೆಯಲ್ಲಿ ಭಾಗವತವನ್ನು ನಾವು ಓದಬೇಕು.ಅರ್ಥ ಮಾಡಿಕೊಳ್ಳಬೇಕು. ಕೃಷ್ಣ ಪುಟ್ಟ ಬಾಲಕನಾಗಿದ್ದಾಗಲೇ ಅನೇಕ ದೈತ್ಯರನ್ನು ಸಂಹರಿಸಿದ.ಕಾಳಿಂಗಸರ್ಪವನ್ನು ಮರ್ದಿಸಿದ. ಕಂಸನನ್ನು ಸಂಹರಿಸುವ ಮೊದಲು ಅವನಿಂದ ಕಳಿಸಲ್ಪಟ್ಟ ದೈತ್ಯರನ್ನು ಸಂಹರಿಸಿದ.ಶಿಶುಪಾಲ ದಂತವಕ್ತರು ನಾಮಾವಷೇಶವಾದರು.

- Advertisement -

ಈ ದಿಸೆಯಲ್ಲಿ ಭಕ್ತಿಯಿಂದ ಕೃಷ್ಣನ ಉಪಾಸನೆ ಇಂದಿಗೂ ವಿಶೇಷ ಅನುಗ್ರಹಕ್ಕೆ ಕಾರಣವಾಗಿದೆ. ಶ್ರೀ ಕೃಷ್ಣಾಷ್ಟಮಿಯ ಈ ದಿನ ಹದಿನೆಂಟು ಬಗೆಯ ವಿವಿಧ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವುದು ವಾಡಿಕೆ. ಅದರಲ್ಲಿ ಎಲಕ್ಕಿಯಿಂದ ತಯಾರಿಸಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯತೆ. ಶ್ರೀ ಕೃಷ್ಣನು ಹೊಂದಿರುವ ಕೊಳಲು,ನವಿಲುಗರಿ ಶಾಂತಿ ಸಮಯದಲ್ಲಾದರೆ ಧರ್ಮ ರಕ್ಷಣೆ ಸಮಯದಲ್ಲಿ ಸುದರ್ಶನ ಚಕ್ರವಿದೆ.

ಈ ದಿನದಂದು ಸಣ್ಣ ಪುಟ್ಟ ಹುದುಗರನ್ನು ಗೋವಿಂದ ಗೋಪಾಲ ಎಂದು ಕೃಷ್ಣನ ಅವತಾರದಲ್ಲಿ ಶೃಂಗರಿಸುವರು. ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಹಗ್ಗಕ್ಕೆ ಕಟ್ಟಿ ಒಂದು ಎತ್ತರದಲ್ಲಿ ತೂಗು ಬಿಡುವರು. ಆ ಗಡಿಗೆಯಲ್ಲಿ ಬೆಣ್ಣೆ ಇಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು.

ಮಡಿಕೆ ಒಡೆವರಿಗೆ ಹಣದ ರೂಪದಲ್ಲಿ ವಸ್ತುಗಳ ರೂಪದಲ್ಲಿ ಬಹುಮಾನ ನೀಡುವರು. ಇನ್ನೂ ಕೆಲವಡೆ ಗಡಿಗೆಗೆ ಎಣ್ಣೆಯನ್ನು ಸವರಿರುತ್ತಾರೆ. ಅಷ್ಟೇ ಅಲ್ಲ ಪಿರಮಿಡ್ ಆಕಾರದಲ್ಲಿ ನಿಂತಾಗ ಮೇಲೆ ಹತ್ತುವ ಗೋವಿಂದನ ವೇಷಧಾರಿಗೆ ನೀರನ್ನು ಎರಚುವರು. ಅವನು ಜಾರಿ ಕೆಳಗೆ ಬೀಳಲೆಂಬುದು ಈ ರೀತಿ ಮಾಡುವ ತಂತ್ರಗಳಲ್ಲಿ ಒಂದು ಇವುಗಳನ್ನು ದಾಟಿ ಗಡಿಗೆ ಒಡೆಯುವುದು ಕೂಡ ಸಾಹಸದ ಕಾರ್ಯವೇ. ಪುಟ್ಟ ಮಕ್ಕಳಿಗೆ ತಾಯಂದಿರು ಕೃಷ್ಣ ಮತ್ತು ರಾಧೆಯರ ವೇಷ ಹಾಕುವ ಮೂಲಕ ಬಾಲಕೃಷ್ಣ ರಾಧೆಯನ್ನು ಅವರ ರೂಪದಲ್ಲಿ ಕಂಡು ಸಂಭ್ರಮಿಸುವುದಲ್ಲದೇ ಅವರು ಅಳದಿರಲೆಂದು ಬಾಯಿಗೆ ಬೆಣ್ಣೆ ಒರೆಸುವರು.

ಇದು ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಕ್ರಿಯೆಯು ಕೂಡ. ಶಾಲೆಗಳಲ್ಲಿ ಶ್ರೀ ಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆ ಈ ದಿನ ಜರುಗುತ್ತದೆ. ಉತ್ತಮವೇಷ ಭೂಷಣ ಹೊಂದಿದ ಮಕ್ಕಳಿಗೆ ಪ್ರಥಮ,ದ್ವಿತೀಯ,ತೃತೀಯ ಬಹುಮಾನಗಳನ್ನು ಕೂಡ ನೀಡುವ ಮೂಲಕ ಕೃಷ್ಣನನ್ನು ಸ್ಮರಿಸುವ ಈ ದಿನ ನಾಡಿಗೆಲ್ಲ ಮಹತ್ವದ್ದಾಗಿದೆ.

ಶ್ರೀ ಕೃಷ್ಣನ ಸ್ಮರಣೆಗಾಗಿ ವಿಷ್ಣುಸಹಸ್ರನಾಮ,ಭಗವದ್ಗೀತೆಗಳನ್ನು ಪಠಿಸುವ ಜೊತೆಗೆ ಅದರ ತಿರುಳನ್ನು ಹತ್ತು ಜನಕ್ಕೆ ತಿಳಿಸುವ ಮೂಲಕ ಶ್ರೀ ಕೃಷ್ಣನನ್ನು ಪೂಜಿಸುವುದು ಹಿರಿಯರು ವಯಸ್ಕರು ಮಾಡುವ ಕರ್ತವ್ಯಗಳಲ್ಲೊಂದಾಗಿದೆ. ಈ ದಿನ ವಿವಾಹಿತ ಸ್ತ್ರೀಯರು ಉಪವಾಸ ಮಾಡುವ ಮೂಲಕಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು.

ಬಾಲ್ಯದಲ್ಲಿ ಬೆಣ್ಣೆಯನ್ನು ತಿಂದಿರುವ ಕಾರಣ ನವನೀತನೆಂದು ಕರೆಸಿಕೊಳ್ಳುವ ಕೃಷ್ಣನನ್ನು ಅಚ್ಯುತ, ಅಸುರಾರಿ, ವಾಸುದೇವ.ನಂದಗೋಪಾಲ.ಕಾಲದೇವ.ಗಿರಿಧರ.ಗೋಪಾಲ.ವೇಣುಗೋಪಾಲ.ಗೋವಿಂದ.ಚಕ್ರಧಾರಿ.ದ್ವಾರಕಾಧೀಶ.ಜಗನ್ನಾಥ.ಜನಾರ್ಧನ.ಪತಿತಪಾವನ.ಪರಬ್ರಹ್ಮ.ಪಾಥಸಾರಥಿ.ಮಧುಸೂದನ.ಮಾಧವ.ಮುಕುಂದ.ಯೋಗೇಶ್ವರ.ಶ್ಯಾಮಸುಂದರ.ಹೃಷಿಕೇಶ.ಪುರುಷೋತ್ತಮ.ಸುದರ್ಶನ.ಮುರಳಿ.ಮುರಾರಿ.ಘನಶ್ಯಾಮ.ದಾಮೋದರ.ಪಾಂಡುರಂಗ.ಕೇಶವ.ವಿಠ್ಠಲ.ಶ್ರೀ ರಂಗನಾಥ ಶಕಟಸುರಭಂಜನ.ಹೀಗೆ ವಿವಿಧ ಹೆಸರುಗಳಿಂದ ಕರೆಯುವರು.

ಶ್ರೀ ಕೃಷ್ಣನ ಬಾಲ್ಯದ ಅನೇಕ ರೋಚಕ ಕತೆಗಳು ಭಾಗವತದಲ್ಲಿವೆ, ಶಕಟಾಸುರ ವಧೆ, ಪೂತನಿಯ ವಧೆ.ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ.ಕಾಳಿಂಗ ಮರ್ಧನ.ಗೋವರ್ಧನ ಗಿರಿಯ ರಕ್ಷಣೆ ಈ ಕತೆಗಳಲ್ಲಿ ಮಹತ್ವವಾದವು. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ, ಇವರೆಲ್ಲ ಕೃಷ್ಣನ ಭಕ್ತರಾಗಿದ್ದ ಕವಿವರ್ಯರು.ಇವರು ಕೃಷ್ಣನನ್ನು ಕುರಿತು ಅನೇಕ ಗೀತೆಗಳನ್ನು ಭಜನೆಗಳನ್ನು ರಚಿಸಿರುವರು.


ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು
ಮುನವಳ್ಳಿ-591117
ತಾಲೂಕ;ಸವದತ್ತಿ ಜಿಲ್ಲೆ;ಬೆಳಗಾವಿ
9449518400,897117442

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group