ಶಾಲಾರಂಭದ ಪೂರ್ವ ಸಿದ್ಧತೆ ಪರಿಶೀಲಿಸಿದ ಸಮನ್ವಯಾಧಿಕಾರಿ

Must Read

ಸಿಂದಗಿ: ಸೆ.6 ರಿಂದ 6 ನೇ ತರಗತಿಯಿಂದ 8ನೇ ತರಗತಿ ವರೆಗಿನ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳ ಮಕ್ಕಳಿಗೆ ಭೌತಿಕ ತರಗತಿಗಳು ಪ್ರಾರಂಭವಾಗುತ್ತಿದ್ದು  ಅದಕ್ಕೆ ಸಂಬಂಧಿಸಿದ ಪೂರ್ವಸಿದ್ಧತೆ ಶಾಲಾ ಪ್ರಾರಂಭಕ್ಕೆ ಭರದ ಸಿದ್ದತೆ ಮಾಡಲಾಗುತ್ತಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ಪಟ್ಟಣದ ಸರಕಾರಿ ಕನ್ನಡ ಗಂಡು ಮಕ್ಕಳ  ಮಾದರಿ ಪ್ರಾಥಮಿಕ ಶಾಲೆಗೆ ಸಂದರ್ಶನ ನೀಡಿದಾಗ ಶಾಲೆಯಲ್ಲಿ ಭರದಿಂದ ಸಿದ್ದತೆ ಸಾಗಿರುವುದರ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿ, ಸರಕಾರಿ ನಿಯಮಗಳ ಪ್ರಕಾರ ಸಿದ್ದತೆ ಜರುಗಿಸಲು ಸೂಚಿಸಲಾಯಿತು ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಶಾಲೆಯಲ್ಲಿನ ಕೋಣೆಗಳಿಗೆ ಮತ್ತು ಶೌಚಾಲಯ, ವರಾಂಡಾ ಕುಡಿಯುವ ನೀರಿನ ಸ್ಥಳಗಳಲ್ಲಿ ಹಾಗೂ ಸಿಬ್ಬಂದಿ ಕೊಠಡಿ, ಮುಖ್ಯೋಪಾಧ್ಯಾಯರ ಕೊಠಡಿ   ಸ್ಯಾನಿಟೈಜೆಷನ್ ಮಾಡಿಸುವದು  ಸಾಮಾಜಿಕ ಅಂತರ ಕಾಪಾಡಲು ಗುರುತುಗಳನ್ನು ಹಾಕಿರುವದು, ಮಕ್ಕಳನ್ನು ತಂಡವಾಗಿ ವಿಂಗಡಿಸುವದು, ಶಿಕ್ಷಕರು ಮಕ್ಕಳಿಗೆ ಕೈಗೊಳ್ಳುವ  ಶೈಕ್ಷಣಿಕ ಚಟುವಟಿಕೆಗಳನ್ನು ಅಲ್ಲದೆ ಶಾಲೆಗಳಿಗೆ ಆಗಮಿಸುವ ಮಕ್ಕಳಿಗೆ ಕರೋನಾ ಮುಂಜಾಗ್ರತಾ ನಿಯಮಗಳ ಪಾಲನೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಭಿತ್ತಿ ಪತ್ರ ಗೋಡೆಗೆ ಅಂಟಿಸಿ ಮತ್ತು ತರಗತಿ ಕೋಣೆಗಳಲ್ಲಿ ನೇತು ಹಾಕಬೇಕು ಎಂದು ಸೂಚಿಸಿದರು.

ಈ ಸಮಯದಲ್ಲಿ ಸಿಂದಗಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎನ್ ಎಸ್ ತೆಲುಗು ಸಿಂದಗಿ ವಲಯದ ಬಿಆರ್‍ಪಿ ಎಂ ಎಂ ದೊಡಮನಿ, ಶಾಲೆಯ ಮುಖ್ಯೋಪಾಧ್ಯಾಯ ಶರಣು ಲಂಗೋಟಿ ಇದ್ದರು

Latest News

ಬಿಡಿಸಿಸಿ ಬ್ಯಾಂಕ ನೂತನ ನಿರ್ದೇಶಕ ಅಪ್ಪಾಸಾಬ ಕೂಲಿಗುಡೆಗೆ ಮಾಲಗಾರ ಸಮಾಜದ ಅಭಿನಂದನೆ

ಬೆಳಗಾವಿ : ಪ್ರತಿಷ್ಠಿತ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ ನಿ ಬೆಳಗಾವಿ ರವಿವಾರದಂದು ನಡೆದ ಚುನಾವಣೆಯಲ್ಲಿ ರಾಯಬಾಗ ತಾಲುಕು ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ...

More Articles Like This

error: Content is protected !!
Join WhatsApp Group