spot_img
spot_img

“ಗೌರಿ ಗಣೇಶ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ”

Must Read

spot_img
- Advertisement -

ಹಾವೇರಿ: ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಜಿಲ್ಲಾ ಘಟಕ ಹಾವೇರಿ ಹಾಗೂ ಭಾರತ್ ಸ್ಕೌಟ್ ಗೈಡ್ ಸಂಸ್ಥೆ ಹಾನಗಲ್ಲ ಸಹಯೋಗದಲ್ಲಿ ಸೆಪ್ಟೆಂಬರ್ ೮ ರಂದು ಗೂಗಲ್ ಮೀಟ್ ಮೂಲಕ ವಿಶೇಷ ಉಪನ್ಯಾಸ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿದ್ದು ಪ್ರೊ ಮಾರುತಿ ಶಿಡ್ಲಾಪೂರ ಉದ್ಘಾಟಿಸಲಿದ್ದಾರೆ.

ಸೃಜನಶೀಲ ಸಾಹಿತ್ಯ ಬಳಗದ ಜಿಲ್ಲಾಧ್ಯಕ್ಷರಾದ ಸಂತೋಷ್ ಬಿದರಗಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ್ ಸ್ಕೌಟ್ ಗೈಡ್ ಸಂಸ್ಥೆ ಹಾವೇರಿಯ ಎಸ್ ಜಿ ವಿ ಶ್ರೀಮತಿ ಮಂಜುಳಾ ಹರಿಜನ ಇವರು “ಪರಿಸರ ಸ್ನೇಹಿ ಗೌರಿ ಗಣೇಶ” ವಿಶೇಷ ಉಪನ್ಯಾಸ ನೀಡಲಿದ್ದು, ಹಾನಗಲ್ಲ ಸ್ಕೌಟ್ ಗೈಡ್ ಕಾರ್ಯದರ್ಶಿಗಳಾದ ಪಿ ಆರ್ ಚಿಕ್ಕಳ್ಳಿ, ಡಾ ಬಿ ಎಂ ಬೇವಿನಮರದ, ಶ್ರೀಮತಿ ಪಾರ್ವತಿ ಕಾಶೀಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇವೇಳೆ “ಗೌರಿ ಗಣೇಶ” ಕವಿಗೋಷ್ಠಿ ಕೂಡ ನಡೆಯಲಿದ್ದು ಕು.ಶ್ರದ್ಧಾ ದೀಪಕ್ ಸಾಮಂತ ದಾಂಡೇಲಿ, ಪಾರ್ವತಿ ಹಮ್ಮಿಗಿ ಧಾರವಾಡ, ಶ್ರೀಮತಿ ಭಾಗ್ಯ ಗಿರೀಶ್ ಹೊಸದುರ್ಗ, ಗಣೇಶ್ ಎನ್ ಚವ್ಹಾಣ್ ತಿಳವಳ್ಳಿ, ಜೆ ಸಿ ಹೊಸರಾಯಪ್ಪನವರ, ಸಿ ಪಿ ರಾಧ, ಮಾನಸ ವಿಜಯ್ ಕೈಂತಜೆ, ಮಂಗಳೂರು,ಸುರೇಖಾ ಎಸ್ ಬಿರಾದಾರ ಕಲ್ಬುರ್ಗಿ, ರಂಜನಾ ಎಂ ಬೆಟಗೇರಿ ಧಾರವಾಡ, ದೀಪಾ ಗಡಗಿ ಗಂಗಾವತಿ, ಸಿ ಹೆಚ್ ನಾಗೇಂದ್ರಪ್ಪ ಭದ್ರಾವತಿ, ನಟರಾಜ್ ದೊಡ್ಡಮನಿ ಹೊನ್ನಾಳಿ, ಜ್ಯೋತಿ ಮಾಳಿ, ಜ್ಯೋತಿ ಜೋಶಿ ಗೋಕರ್ಣ, ಮಧು ಮಾಲತಿ, ಕು.ಸಾಕ್ಷಿ ದೀಪಕ್ ಸಾಮಂತ ದಾಂಡೇಲಿ, ಕು.ಗೀತಾ ಪೂಜಾರ, ಮಮತಾ ಪೂಜಾರ, ಆರ್ ಬಿ ರಡ್ಡಿ, ಮುಂತಾದ ನಾಡಿನ ವಿವಿಧ ಜಿಲ್ಲೆಗಳ ಆಯ್ದ ೧೫ ಜನ ಕವಿಮನಸುಗಳು ತಮ್ಮ ಕಾವ್ಯ ವಾಚನ ಮಾಡಲಿದ್ದಾರೆಂದು ಸಂಘಟಕರಾದ ಸಂತೋಷ್ ಬಿದರಗಡ್ಡೆ, ದಾವಲಮಲೀಕ ಇಂಗಳಗಿ ಪ್ರಕಟಣೆ ಮಾಡಿರುತ್ತಾರೆ.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group