spot_img
spot_img

ಕೊರೋನಾ ನಡುವೆಯೇ ಗಣೇಶೋತ್ಸವ ಸಂಭ್ರಮ

Must Read

spot_img
- Advertisement -

ಮೂಡಲಗಿ: ಕೊರೋನಾ ಅರ್ಭಟಕ್ಕೆ ಸಿಲುಕಿ ಸಾರ್ವಜನಿಕರು ಅಲೆಗಳ ಬಲೆಗೆ ಸಿಲುಕಿ ಕಂಗಾಲಾಗಿದ್ದರು. ಪವಿತ್ರ ವಿಘ್ನ ನಿವಾರಕ ಗಣೇಶನನ್ನು ಮಣ್ಣಿನ ರೂಪದಲ್ಲಿ ಬರಮಾಡಿಕೊಂಡು ಮಹಾಮಾರಿ ಕೊರೋನಾ ಅಲೆಗಳನ್ನು ಹಿಮ್ಮೆಟ್ಟಿಸುವಂತೆ ವಿಘ್ನ ನಿವಾರಕ ಗಣೇಶನಲ್ಲಿ ಪ್ರಾರ್ಥಿಸಿ ತಮ್ಮ ಮನೆಗಳಿಗೆ ಹಾಗೂ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ದೇವರ ಮೊರೆಹೋಗಿ ತಾಲೂಕಿನ ಜನತೆ ಸಂಭ್ರಮಿಸಿದರು.

ಶುಕ್ರವಾರ ಜರುಗಿದ ಗಣೇಶ ಹಬ್ಬದ ಪ್ರಯುಕ್ತ ಮೂಡಲಗಿ ಹಾಗೂ ಸುತ್ತಲಿನ ಜನತೆ ಸರಳ ರೀತಿಯಲ್ಲಿ ಗೌರಿ ಗಣೇಶನನ್ನು ಮಣ್ಣಿನ ರೂಪದಲ್ಲಿ ತಯಾರಿಸಿದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜಿಸುವ ಮೂಲಕ ನಾಡಿನ ಜನತೆಗೆ ಒಳ್ಳೆಯದಾಗಲೆಂದು ಗಣೇಶನಲ್ಲಿ ಪ್ರಾರ್ಥಿಸಿದರು.

- Advertisement -

ಕೊರೋನಾ 3 ನೇ ಅಲೆಯ ಭೀತಿಯ ಹಿನ್ನೆಲೆ ವ್ಯಾಪಾರ ವಹಿವಾಟು, ಶಿಕ್ಷಣ, ಸಂಘ ಸಂಸ್ಥೆ, ಸಹಕಾರಿ ಬ್ಯಾಂಕಗಳು, ರೈತಾಪಿ ವರ್ಗದ ಜನರು ಕಂಗಾಲಾಗಿರುವ ಸಂದರ್ಭದಲ್ಲಿ ಯಾವುದೇ ಮನರಂಜನೆ, ಹಬ್ಬ ಹರಿದಿನಗಳು, ಮದುವೆ ಮುಂಜಿ, ಗೃಹ ಪ್ರವೇಶ ಅಷ್ಟೇ ಅಲ್ಲದೆ ಶವ ಸಂಸ್ಕಾರಗಳಿಗೂ ಅಡ್ಡಿಯಾಗಿ ಪರಸ್ಪರ ಕೂಡುವಿಕೆಯಿಂದ ದೂರವಾಗಿ ಕಂಗಾಲಾಗಿದ್ದ ಜನತೆಗೆ ಗೌರಿ ಗಣೇಶ ಶುಭ ನೀಡಲೆಂದ ಆಶಾ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿತ್ತು.

ಹಬ್ಬದ ನಿಮಿತ್ಯ ಸಾರ್ವಜನಿಕರು ಹೂ, ಹಣ್ಣು, ಅಲಂಕಾರಿಕ ವಸ್ತುಗಳು, ಕಬ್ಬು, ತಳಿರು ತೋರಣ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಪರಿಸರಯುಕ್ತ ಮಣ್ಣಿನಿಂದ ತಯಾರಾದ ಗಣೇಶ ಮೂರ್ತಿಗಳು, ಯಾವುದೇ ತರಹದ ಶಬ್ದ ಮಾಲಿನ್ಯಯಾಗದ ನಿಟ್ಟಿನಲ್ಲಿ ಗಣಪನಿಗೆ ಜೈಯಕಾರಗಳಷ್ಟೇ ಕಂಡು ಬಂದಿತ್ತು. ತುಂತುರು ಮಳೆಯಾಗಿ ಯುವಕರಿಗೆ ಸ್ಪೂರ್ತಿಯನ್ನು ನೀಡಿತು. ಯಾವುದೇ ತೆರನಾದ ಅಹಿತಕರ ಘಟನೆಗಳು ಜರುಗದೆ ಶಾಂತಿಯುತವಾಗಿ ಸರಳತೆಯಿಂದ ಆಚರಿಸಿ ವಿಘ್ನ ನಿವಾರಕ ಗೌರಿ ಗಣೇಶನನ್ನು ಬರಮಾಡಿಕೊಂಡು ಸಂತಸ ಹಂಚಿಕೊಂಡರು.

- Advertisement -
- Advertisement -

Latest News

ಹಡಪದ ಅಪ್ಪಣ್ಣ ಸಹಕಾರ ಸಂಘಕ್ಕೆ ಹೊಸ ಪ್ಯಾನಲ್ ಆಯ್ಕೆ

ಸಿಂದಗಿ: ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ ಸಿಂದಗಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹಳೇ ಸದಸ್ಯರಿಗೆ ಸೋಲಿನ ರುಚಿ...
- Advertisement -

More Articles Like This

- Advertisement -
close
error: Content is protected !!
Join WhatsApp Group