ಜೈನಧರ್ಮದ ವೀಶೇಷ ದಶಲಕ್ಷಣಪರ್ವ 3ನೇ ದಿನ

Must Read

ಉತ್ತಮ ಅರ್ಜವ ಧರ್ಮ

ಆತ್ಮಜ್ಞಾನದಿಂದ ಬರುವ ಸುಖವೆ ನಿಜವಾದ ಸುಖ. ಇದು ಒಳ್ಳೆಯ ವಿಚಾರ ಆಚಾರದಿಂದ ಬರುವಂಥದು. ಅಜ್ಞಾನಿ ಮಾನವನ ವಿಚಾರಕ್ಕೂ, ಮಾತಿಗೂ, ಆಚರಣೆಗೂ ವ್ಯತ್ಯಾಸವಿರುತ್ತದೆ. ಇದು ಅವನನ್ನು ಕುಟಿಲತೆ ಮೋಸಕ್ಕೆ ತಳ್ಳುತ್ತದೆ. ಅಂಥವರು ತಮ್ಮ ಮೌಲ್ಯವನ್ನು ಬೇಗ ಕಳೆದುಕೊಳ್ಳುತ್ತಾರೆ.

ಅತಿಯಾದ ಸಿಟ್ಟಿನಿಂದ ಮಾತನಾಡಿ ತಮ್ಮ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಾರೆ. ಆದರೆ ಮಾತು ಕೃತಿ ಆಚರಣೆಯಲ್ಲಿ ಏಕತೆಹೊಂದಿ ಸತ್ಯಸಂಧನಾಗಿ ಬಾಳುವುದು ಮಾನವನನ್ನು ಉತ್ತಮ ಮೌಲ್ಯಕ್ಕೆ ಕೊಂಡೊಯ್ಯುತ್ತದೆ. ಇಲ್ಲದಿದ್ದರೆ ಮೋಸಗಾರನಾಗಿ ಕುಟಿಲಮನೋಭಾವಿಯಾಗಿ ಭವ ಭವಾಂತರದಲ್ಲಿ ಪಾಪಬಂಧವಾಗುತ್ತದೆ.

ಕುಟಿಲತೆಯು ಮಾನವನ ನೀಚಬುದ್ದಿಯ ಕನ್ನಡಿಯಾಗಿರುತ್ತದೆ. ಅದು ದು:ಖಕ್ಕೆ ದಾರಿಯಾಗಿದೆ. ಆದರೆ ಒಳ್ಳೆಯ ವಿಚಾರ ಜ್ಞಾನವು ಅಖಂಡ ಸುಖಕ್ಕೆ, ಕೇವಲ ಜ್ಞಾನಕ್ಕೆ ದಾರಿಯಾಗಿದೆ. ಆದ್ದರಿಂದ ಒಳ್ಳೆಯ ಕಾರ್ಯ, ಒಳ್ಳೆಯ ವಿಚಾರಗಳು ಮಾನವನನ್ನು ಅಂತರ್ ಜ್ಞಾನಿಯನ್ನಾಗಿ ಮಾಡುತ್ತದೆ.

ಮಾನವಜೀವಿ ಕುಟಿಲತೆಯನ್ನು ತ್ಯಜಿಸಿ ನ್ಯಾಯ ನೀತಿ ಧರ್ಮಮಾರ್ಗದಲ್ಲಿ ಉತ್ತಮ ಸಾತ್ವಿಕ ಜೀವನ ನಡೆಸುವುದು ಅರ್ಜವವಾಗಿದೆ. ಜೀನೆಂದ್ರ ಭಗವಾನರ ಮುಖತೇಜದಿಂದ ಹೊರಡುವ ಬೆಳಕಿನಿಂದ, ಜಿನವಾಣಿ ಸ್ತವನದಿಂದ ಪಾಪ ಸಂತಾಪ ನಾಶವಾಗುವದು ಮತ್ತು ತನಗೂ ಇತರರಿಗೂ ಸಂತೋಷವಾಗುವುದು. ಮನಸಿನಲ್ಲಿ ಮೋಸ ಕಪಟ ಭಾವವಿದ್ದರೆ ಯಾವುದೇ ಕಾರ್ಯಕ್ಕೆ ಯಶವಿಲ್ಲ. ಆದ್ದರಿಂದ ಅರ್ಜವ ಧರ್ಮ ಆಚರಣೆ ಯೋಗ್ಯವಾಗಿದೆ.

ವೃಷಭನಾಥರಿಂದ ಯುಕ್ತ ಶುದ್ದ ಅರ್ಜವ ಧರ್ಮ ದೋಷ ರಹಿತ ಪಾರಮಾರ್ಥ ಸ್ವರೂಪ ಜಿನಭಕ್ತಿಯಿಂದ ಪ್ರಾಪ್ತ ಜನಗಣ ಪೂಜಿತ ಲಭ್ದ ಹೇತು.

“ಓಂ ರ್ಹಿಂ ಉತ್ತಮ ಅರ್ಜವ ಧರ್ಮಾಂಗಾಯ ನಮ”


ಲಲಿತಾ ಮ ಕ್ಯಾಸನ್ನವರ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ. ಹಲಗಾ ಬೆಳಗಾವಿ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group