ಸಿಲಿಕಾನ್ ಸಿಟಿಯ “ಬೆಸ್ಕಾಂ ನಲ್ಲಿ ವಿಘ್ನ ವಿನಾಯಕನಿಗೆ ಪೂಜೆ”

Must Read

ಬೆಂಗಳೂರು: ಬನಶಂಕರಿ ೩ನೇ ಹಂತದ ಇಟ್ಟಮಡುವಿನ ಬೆಸ್ಕಾಂ ಕಛೇರಿಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಕಛೇರಿಯ ಸಿಬ್ಬಂದಿ ವರ್ಗದವರು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ ವಿನಾಯಕ ಚತುರ್ಥಿ ಆಚರಿಸಿದರು.

ಇಟ್ಟಮಡುವಿನ ಬೆಸ್ಕಾಂ ಕಛೇರಿಗೆ ಪೂಜೆ ಮಾಡಿಸಲು ಪೂರೋಹಿತರಾದ ಶ್ರೀನಿವಾಸ್ ಮತ್ತು ವರುಣ್ ರವರು ಬಂದು ವಿಘ್ನ ವಿನಾಯಕನಿಗೆ ಪೂಜೆ ಸಲ್ಲಿಸಿ, ಪೂಜೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಹಣೆಗೆ ಕುಂಕುಮದ ತಿಲಕವಿಟ್ಟು – ಜಗತ್ತಿನೆಲ್ಲೆಡೆ ಶಾಂತಿ ನೆಲಸಲಿ ಹಾಗೂ ಕೋವಿಡ್ ೧೯ ಮಹಾಮಾರಿಯಿಂದ ಭಾರತಕ್ಕೆ ಮುಕ್ತಿ ಸಿಗಲಿಯೆಂದು ವಿನಾಯಕನಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಬೆಸ್ಕಾಂ ಕಛೇರಿಯ ಮುಂಭಾಗದಲ್ಲಿ ಬಣ್ಣ-ಬಣ್ಣದ ರಂಗೋಲಿ ಹಾಕಿ, ಬಾಳೇ ಕಂಬ, ಮಾವಿನ ತೋರಣ ಕಟ್ಟಿ- ವಿನಾಯಕನ ಮಂಟಪವನ್ನು ವಿವಿಧ ಪುಷ್ಪಗಳಿಂದ ಅಲಂಕರ ಮಾಡಲಾಗಿತ್ತು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು   ಲಕ್ಷ್ಮೀಶ್  ಮತ್ತು  ಜ್ಯೂನಿಯರ್ ಇಂಜಿನಿಯರ್ ಶಂಕರಪ್ಪ ಹಾಗೂ ಕಛೇರಿಯ ಸಿಬ್ಬಂದಿಗಳು ಭಾಗವಹಿಸಿದ್ದರು.

ವಿನಾಯಕ ಚತುರ್ಥಿಹಬ್ಬವಾದ ಇಂದು ವಿನಾಯಕನ ಮೂರ್ತಿ ಪ್ರತಿಷ್ಠೆ ಮಾಡಿ ಈ ದಿನದ ಸಂಜೆ ಕಛೇರಿಯ ಹಿಂಭಾಗ ಇರುವ  ಬಾವಿಯಲ್ಲಿ ವಿಸರ್ಜನೆ ಮಾಡುತ್ತೇವೆ ಎಂದು ಪತ್ರಿಕೆಗೆ ಶಂಕರಪ್ಪ ತಿಳಿಸಿದರು.


ವರದಿ: ತೀರ್ಥಹಳ್ಳಿ ಅನಂತ  ಕಲ್ಲಾಪುರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group