- Advertisement -
ಬೀದರ – ಜಿಲ್ಲೆಯ ಹುಮನಾಬಾದ್ ಕ್ಷೇತ್ರದ ರಾಜಕೀಯ ನಾಯಕರ ಜಟಾಪಟಿ ಇಲ್ಲಿಗೇ ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗೆ ಶಾಸಕ ರಾಜಶೇಖರ ಪಾಟೀಲರು ತಮ್ಮನ್ನು ತಾವು ಹುಲಿ ಎಂದು ಕರೆದುಕೊಂಡಿದ್ದನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮರಾವ ಪಾಟೀಲ ಸಮರ್ಥಿಸಿದ್ದಾರೆ.
ನಮ್ಮಣ್ಣನ ಹೆಸರಿಗೆ ಯಾರೇ ಬಂದರೂ ನಮ್ಮ ಕುಟುಂಬ ಒಂದೇ ಸಾಕು ಎಂದು ಗುಡುಗಿರುವ ಅವರು ನನ್ನ ಅಣ್ಣ ಗಡಿ ಜಿಲ್ಲೆಯ ಬೀದರ ನಲ್ಲಿ ಕಾಡಿನಲ್ಲಿ ನಿರ್ಭೀತಿಯಿಂದ ಓಡಾಡುವ ರಾಜಾ ಹುಲಿ ಈ ಹುಲಿಯ ಎದುರಿಗೆ ಸಚಿವ ಭಗವಂತ ಖೂಬಾ ಅವರು ಪರಿಚಯಿಸಿದ ಸರ್ಕಸ್ (ಸಿದ್ದು ಪಾಟೀಲ) ಸಿಂಹದ ಆಟ ನಡೆಯೋದಿಲ್ಲ ನನ್ನ ಮುಂದೆ ಎಂದು ಸಿದ್ದು ಪಾಟೀಲ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ನಂದಗಾಂವ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತು ಆಡಿ ಹುಮನಬಾದ ಕ್ಷೇತ್ರದ ಶಾಸಕರ ತಮ್ಮ ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮರಾವ ಪಾಟೀಲ ನನ್ನ ಅಣ್ಣ ಹೆಸರಿಗೆ ಯಾರೆ ಬಂದರು ನಮ್ಮ ಕುಟುಂಬ ಸಾಕು ಎಂದು ಗುಡುಗಿದರು.