ಯಾದಗಿರಿ – ಮಹಿಳೆಯೊಬ್ಬಳನ್ನು ಬೆತ್ತಲಾಗಿಸಿ ಅಮಾನವೀಯವಾಗಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.
ನಿಂಗರಾಜ್ s/o ಭೀಮರಾಯ ಬೇವಿನಹಳ್ಳಿ, ವಯಸ್ಸು: 24 ವರ್ಷ ಉದ್ಯೋಗ: ಆಟೋ ಚಾಲಕ, ಇಂದಿರಾನಗರ, ಶಹಾಪುರ.
ಅಯ್ಯಪ್ಪ s/o ಸಂಗಪ್ಪ ನಾಟೆಕಾರ್, ವಯಸ್ಸು: 23 ವರ್ಷ, ಉದ್ಯೋಗ: ಅಲ್ಲಮ ಪ್ರಭು ಪೆಟ್ರೋಲ್ ಪಂಪನಲ್ಲಿ ಕೆಲಸ, ಗುತ್ತೀಪೇಟೆ, ಶಹಾಪುರ, ಭಿಮಾಶಂಕರ್ s/o ಮಲ್ಲಯ್ಯ. ದೋರನಳ್ಳಿ, ವಯಸ್ಸು:28 ವರ್ಷ, ಉದ್ಯೋಗ: ಪಾನ್ ಶಾಪ್ ಅಂಗಡಿ ಸಾ. ಮಾಮಾದಾಪುರ ಏರಿಯಾ ಶಹಪುರ ಹಾಗೂ ಶರಣು ತಂದೆ ಮಹಾದೇವಪ್ಪ ನಾಯಕೋಡಿ,22 ವರ್ಷ, ಹೊಸಬಸ್ ನಿಲ್ದಾಣದ ಬಳಿ ಎಗ್ ರೈಸ್ ಬಂಡಿ ಕೆಲಸ, ವಾಸ: ಮಮದಾಪುರ ಏರಿಯಾ, ಶಹಾಪುರ ಎಂದು ಅವರನ್ನು ಗುರುತಿಸಲಾಗಿದೆ.
ಯಾದಗಿರಿ – ಶಹಾಪೂರ ರಾಜ್ಯ ಹೆದ್ದಾರಿ ಮಧ್ಯೆ ಮಧ್ಯರಾತ್ರಿಯಲ್ಲಿ ಈ ಯುವಕರು ಮಹಿಳೆಯೊಬ್ಬಳನ್ನು ಬೆತ್ತಲಾಗಿಸಿ ಕಬ್ಬಿನ ಜಲ್ಲೆಯಿಂದ ಅಮಾನವೀಯವಾಗಿ ಹೊಡೆದಿದ್ದರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ