ಕಾಂಗ್ರೆಸ್ ಭದ್ರಕೊಟೆ ಭಾಲ್ಕಿಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

Must Read

ಬೀದರ: ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಭಾಲ್ಕಿ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೂತ್ ಮಟ್ಟದ ಅಧ್ಯಕ್ಷರ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಡಿ ಕೆ ಸಿದ್ರಾಮ ಉದ್ಘಾಟಿಸಿದರು.

ನಮ್ಮದು ಕಾರ್ಯಕರ್ತರ ಪಕ್ಷ ನಾವೆಲ್ಲರೂ ಸೇರಿ ಪಕ್ಷದ ಸಂಘಟನೆಗಾಗಿ ಶ್ರಮಿಸೋಣ ಹಾಗೂ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.

ಭಾಲ್ಕಿ ಕ್ಷೇತ್ರು ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂಬುದು ಬಿಜೆಪಿ ಪಕ್ಷದ ನಾಯಕರಿಗೆ ಗೊತ್ತಿರುವ ವಿಷಯ.ಮುಂಬರುವ ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮಾತ್ರ ಮುಂದೆ ವಿಧಾನ ಸಭಾ ಚುನಾವಣೆ ಗೆಲ್ಲುವುದು ಸರಳ ಆಗಬಹುದು ಎಂದು ಬಿಜೆಪಿ ನಾಯಕರ ಲೆಕ್ಕಾಚಾರ. ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಸೋಲಿಸುವುದು ಬಹಳ ಕಷ್ಟದ ವಿಷಯ. ಯಾಕೆಂದರೆ ಭಾಲ್ಕಿಯಲ್ಲಿ ಬಿಜೆಪಿ ನಾಯಕರ ಒಳ ಜಗಳ ಜಾಸ್ತಿ ಎಂಬುದು ಈಶ್ವರ ಖಂಡ್ರೆ ಅವರಿಗೆ ಗೊತ್ತು ಇರುವ ವಿಷಯ.

ಬಿಜೆಪಿ ನಾಯಕರಲ್ಲಿ ವೈಮನಸು ಇರುವುದು ಒಂದು ಕಡೆ ಡಿ ಕೆ ಶಿ, ಸಿದ್ದರಾಮಯ್ಯ ಇನ್ನೊಂದು ಕಡೆ ಪ್ರಕಾಶ ಖಂಡ್ರೆ ಇವರ ಇಬ್ಬರ ನಡುವೆ ಇರುವ ವೈಮನಸು ರಾಜ್ಯ ಬಿಜೆಪಿ ನಾಯಕರನ್ನು ಹೇಗೆ ಒಂದು ಮಾಡಿ ಬಿಜೆಪಿ ಪಕ್ಷದ ಯಾರೆ ಅಭ್ಯರ್ಥಿ ಆಗಲಿ ಗೆದ್ದು ಕೊಂಡು ತರಬಹುದೇ ಎಂದು ಕಾದು ನೊಡ ಬೇಕಾಗುತ್ತದೆ.

ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಪಂಡಿತ ಶಿರೋಳೆ, ವಿಭಾಗ ಸಹಪ್ರಭಾರಿ ಶ್ರೀ ಈಶ್ವರಸಿಂಗ್ ಠಾಕೂರ್, ಮಾಜಿ ಶಾಸಕರಾದ ಶ್ರೀ ಪ್ರಕಾಶ ಖಂಡ್ರೆ,ಸೂರ್ಯಕಾಂತ ಧೋಣಿ,ವಿಶ್ವನಾಥ ಪಾಟೀಲ, ವಿರಣ್ಣಾ ಕಾರಬಾರಿ,ಬಾಬುರಾವ ಕಾರಬಾರಿ,ಸೂರಜಸಿಂಗ ರಜಪೂತ, ಅರಿಹಂತ ಸವಳೆ,ಮಲ್ಲಿಕಾರ್ಜುನ ಕುಂಬಾರ ಸುರೆಶ ಬಿರಾದರ ,ಸಂತೋಷ ಪಾಟೀಲ, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು,ಪುರಸಭೆಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group