ಜೈನಧರ್ಮದ ವೀಶೇಷ ದಶಲಕ್ಷಣಪರ್ವ; 7ನೇ ದಿನ..

0
400

ಉತ್ತಮ ತಪಧರ್ಮ 

ತಪವು ಏಕಾಗ್ರತೆ ನೀಡಿ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸುತ್ತದೆ. ತನುಮನ ಆಸೆ ಆಕಾಂಕ್ಷೆಗಳನ್ನು ಧಮನ ಮಾಡಿ,ಇಂದ್ರಿಯಗಳನ್ನು ನಿಯಂತ್ರಿಸಿ ಉಪವಾಸ ಪೂಜಾ ಕಾರ್ಯ ಮಾಡುವದು, ಧರ್ಮಕಲ್ಯಾಣದ ಬಗ್ಗೆ ಚಿಂತಿಸುವದು ಉತ್ತಮ ತಪವಾಗಿದೆ.

ಪೂರ್ವಾಪರಗಳ ಕರ್ಮವನ್ನು ಹಾಗೂ ಕರ್ಮದ ದುಖವನ್ನು ತಪಸ್ಸು ನಾಶಮಾಡುತ್ತದೆ. ತಪವು ಸರ್ವ ವ್ರತಗಳಲ್ಲಿ ಆತ್ಯಂತ ಶ್ರೇಷ್ಠ ವ್ರತವಾಗಿದೆ. ತಪದಿಂದ ಕೇವಲಜ್ಞಾನ ಉಂಟಾಗುತ್ತದೆ. ಐದು ಸಮಿತಿಗಳ ಪಾಲನೆ, ರಾಗ ದ್ವೇಷದ ತ್ಯಾಗ, ನಾಲ್ಕು ಯೋಗ ಅಭ್ಯಾಸ, ಲೋಭದ ತ್ಯಾಗ ಮಾಡಿ ಇಚ್ಚಾರಹಿತವಾಗುವದು. ಕ್ರೋಧವನ್ನು ಬಿಟ್ಟು ಕ್ಷಮಾಮಯಿಯಾಗುವದು. ಇವೆಲ್ಲ ಉತ್ತಮ ತಪಗಳಾಗುತ್ತವೆ.

ಬಾಹ್ಯತಪ ಪ್ರಾಯಶ್ಚಿತ್ತ ದೇವಶಾಸ್ತ್ರ ಮತ್ತು ಗುರುಗಳಲ್ಲಿ ವಿನಯ, ಸಾದುಜನರ ಸೇವೆ, ಸ್ವಾಧ್ಯಾಯ ಪಠಣ ಪರೋಪಕಾರ , ಶಕ್ತ್ಯಾನುಸಾರ , ದಾನ, ಇವೆಲ್ಲ ತಪಗಳಾಗಿವೆ. ಅಂತರಂಗದ್ ಆರುತಪಗಳು ಕರ್ಮಗಳ ಕಳೆಯುವವು. ಅಷ್ಠಮಿ ಚತುರ್ದಶಿ ಉಪವಾಸ, ನೋಂಪಿ ವಿಧಾನ ಆಚರಣೆ ಏಕಾಹಾರ ಸೇವನೆ. ಷಡ್ರಸಗಳಲ್ಲಿ ಒಂದರ ತ್ಯಾಗ, ವಸ್ತುಗಳ ಅತೀ ಬಳಕೆ ತ್ಯಾಗ ದ್ಯಾನ ಇವು ಅಂತರಂಗದ ಆರು ತಪಗಳಾಗಿವೆ.

ತ್ರಿಕಾಲ ಕಾಯದಂಡನೆ, ದ್ಯಾನ್, ಸ್ವಾಧ್ಯಾಯ , ದೀಕ್ಷಾಗ್ರಹ ಇದರಿಂದ ಸರ್ವಸಿದ್ದಿಯಾಗಿ ಜ್ಞಾನದಿಂದ ಕೇವಲಜ್ಞಾನ ಲಭಿಸಿ ಕರ್ಮದಿಂದ ಬಿಡುಗಡೆ ಸಿಗುವುದು. ಮಾನವ ಜನ್ಮ ಸಾರ್ಥಕವಾಗುವುದು.

ಓಂ ಹ್ರೀಮ್ ತಪ ಧರ್ಮಾಂಗಾಯ ನಮ:
ಜಲ ಗಂಧಾದಿ ಅರ್ಘ್ಯ ನಿರೂಮಪಾತಿಸ್ವಾಹಾ।


ಲೇಖಕಿ: ಲಲಿತಾ ಮ ಕ್ಯಾಸನ್ನವ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.