ಜೈನಧರ್ಮದ ವೀಶೇಷ ದಶಲಕ್ಷಣಪರ್ವ: 8ನೇ ದಿನ

Must Read

ಉತ್ತಮ ತ್ಯಾಗ ಧರ್ಮ

ತ್ಯಾಗವು ವೈರಿಯನ್ನು ಗೆಲ್ಲುವಂಥದ್ದು. ತ್ಯಾಗವು ಯಶಸ್ಸು ಪ್ರೀತಿ ಆತ್ಮತೃಪ್ತಿ ಹೊಗಳಿಕೆ ಕೊಡುವಂತದ್ದು. ಜಿನವಾಣಿಯಿಂದ ತಿಳಿದು ಬರುವ ನಾಲ್ಕು ದಾನಗಳು ಆಹಾರ , ಔಷಧ , ಅಭಯ, ಶಾಸ್ತ್ರ, ಉಲ್ಲೇಖ, ಸಪ್ತವ್ಯಸನದ ತ್ಯಾಗದಿಂದ ಜೀವನ ಸದೃಢವಾಗುತ್ತದೆ. ತ್ಯಾಗ ಮುನಿಗಳಿಗೆ, ಸುರ , ನರರಿಗೆ ವಂದ್ಯವಾಗಿದೆ. ಮುನಿಗಳ ಆಶೀರ್ವಾದ ದಿವ್ಯ ಕವಚ. ಅವರು 24 ಪರಿಗ್ರಹ ತ್ಯಜಿಸಿದ ದೀಕ್ಷಾ ಗುರು. ಇಂದ್ರಿಯಗಳ ತ್ಯಾಗದಿ ಮನ ದೇಹ ಬಲಿಷ್ಟವಾಗುವದು. ಆಹಾರ ದಾನ ಸರ್ವೋತ್ತಮ ಪುಣ್ಯ. ಉತ್ತಮ ತ್ಯಾಗಧರ್ಮ ಆಚರಿಸಲು ಪವಿತ್ರ ದಶಲಕ್ಷಣ ವೃತ ಮಾಡುವ ಮಾನವ ಶ್ರೇಷ್ಠ. ಜಿನದರ್ಶನ ನಿತ್ಯ ಮಾಡಿ, ಯಾವ ಜೀವಿಗೂ ದು:ಖ ಕೊಡದಿರುವದು , ಜಿನ ಶಾಸನದ ಶಾಶ್ವತ ತತ್ವ ತಿಳಿದು ಜೀವಿಸಿ, ಭವಪಾರ ಗೊಳಿಸಿಕೋ ಇದಕ್ಕೆ ತ್ಯಾಗ ನಿತ್ಯ ಕರ್ಮವಾಗಿರಲಿ.

ತ್ಯಾಗದಿಂದ ಪರಿಗ್ರಹ ಕಡಿಮೆಯಾಗಿ ಕರ್ಮ ನಿರ್ಜರೆಗೆ ಕಾರಣವಾಗುವುದು. ಎಲ್ಲ ಪ್ರಕಾರದ ದುಖ ಪರಿಗ್ರಹದಿಂದಲೇ ಆಗುವುದು. ಪರಿಗ್ರಹ ದೂರ ಆಗದೆ ಇದ್ದರೆ ಬಹಳ ದು;ಖವಾಗುವದು. ಆದ್ದರಿಂದ ತ್ಯಾಗ ಮಾಡಿ ಮನಸ್ಸು ಹಗುರಮಾಡಿಕೊಳ್ಳಬೇಕು.

ಜಗದಲ್ಲಿ ಶ್ರೇಷ್ಟ ತ್ಯಾಗ ಧರ್ಮ
ಮೋಕ್ಷದ ದಾರಿ ತ್ಯಾಗ ಧರ್ಮ
ಕಾಮದೇವ ಬಾಹುಬಲಿ ವೀರನಾದ ತ್ಯಾಗದಿ
ಪ್ರಥಮ ಮುಕ್ತಿ ಪಡೆದ ವೀರಸ್ವಾಮಿಯಾದ.

ಓಂ ಹ್ರೀಮ್ ಉತ್ತಮ ತ್ಯಾಗ ಧರ್ಮಾಂಗಾಯ
ನಮ: ಜಲ ಗಂಧಾದಿ ಇತಿ ಅರ್ಘ್ಯ ನಿರುಮಪಾತಿಸ್ವಾಹ.


ಲೇಖಕಿ: ಲಲಿತಾ ಮ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ
9035527366.

Latest News

ಮಾಚಿದೇವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಮಡಿವಾಳ ಮಾಚಿದೇವರ ಜಯಂತಿ ಸಿಂದಗಿ; ಹನ್ನೆರಡನೆಯ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು...

More Articles Like This

error: Content is protected !!
Join WhatsApp Group