ಜೈನಧರ್ಮದ ವೀಶೇಷ ದಶಲಕ್ಷಣಪರ್ವ: 9ನೇ ದಿನ

Must Read

ಉತ್ತಮ ಆಂಕಿಚನ್ಯ ಧರ್ಮ

ಆಂಕಿಚನವು ಪರಿಗ್ರಹ ತ್ರಾಜ್ಯ, ಸರ್ವಪಾಪಾರಂಭಗಳ ವಿಮುಕ್ತಿ .ಭೂಮಿ, ಮನೆ , ಬೆಳ್ಳಿ , ಬಂಗಾರ, ಸಂಪತ್ತು, ಕಾಳು, ಕಡಿ , ಸೇವಕ, ಸೇವಕಿ, ಉದ್ಯೋಗ ವಸ್ತುಗಳನ್ನು ಒಳಗೊಂಡ ಪ್ರರದ್ರವ್ಯ, ಹಾಸ್ಯ, ಕಷಾಯ ವೇದಾದಿಗಳ ಅನುಕರಣದಿಂದ ದೂರ, ಮನವಚನ ಕಾಯ ಗುತ್ತಿ ಪಂಚಸಮಿತಿಗಳ ನಿಗ್ರಹಮಾಡಿ ದೇಹದಂಡಿಸಿ ಶರೀರ ಶೋಷಿಸಿ ಆತ್ಮದ್ಯಾನ ನಿರಂತರ ಮಾಡುವದು. ಇದರಿಂದ ಆತ್ಮವೊಂದೆ ನಿಜ ಎನ್ನುವ ಭಾವ ಬರುವದು.

ಎಲ್ಲ ಲೌಕಿಕ ವಸ್ತು ಪರಿಗ್ರಹಗಳನ್ನು ತೊರೆದು ವೀತರಾಗಭಾವದಿಂದ ಬಾಳುವದೆ ಆಂಕಿಚನ್ಯ ಧರ್ಮ. ಧಾರ್ಮಿಕ ಕ್ರಿಯೆಯಲ್ಲಿ ತೊಡಗಿ ಸಾತ್ವಿಕ ವೃತ್ತಿಯಿಂದ ಬಾಳುವುದೇ ಆಂಕಿಚನ್ಯ ಧರ್ಮವಾಗಿದೆ.

ನನ್ನದಲ್ಲದ ಎಲ್ಲ ವಸ್ತುಗಳು ಪರ ವಸ್ತುಗಳು. ಅವುಗಳಿಗೂ ಆತ್ಮನಿಗೂ ಯಾವುದೇ ಸಂಭದವಿಲ್ಲ .ಪರವಸ್ತು ನಾಶವಾಗುವಂತಹವು. ಆದ್ದರಿಂದ ಅವುಗಳ ಮೇಲಿನ ಕ್ಷಣಿಕ ಮೋಹತೊರೆದು. ನಾಶರಹಿತ ಅಖಂಡ ತನ್ನಾತ್ಮ ದ್ಯಾನದಲ್ಲಿ ಲೀನವಿರುವದು ಮೋಕ್ಷ ಮಾರ್ಗವಾಗಿದೆ.

ಹೇಯಮಾನ ನಿಗ್ರಹ ಆಂಕಿಚನ ಧರ್ಮ
ವೇಧದ್ಯಾನ ಧರ್ಮದಿಂ ಆಂಕಿಚನ
ಶುಕ್ಲದ್ಯಾನಗೈದ ಅಕಲಂಕ ಮುನಿ
ಸಿದ್ದ ಸ್ಥಾನ ಸುಖ ದೊರೆಯುವದು.
ಓಂ ಹ್ರೀಮ್ ಉತ್ತಮ ಆಂಕಿಚನ ಧರ್ಮಾಂಗಾಯ ಜಲ ಗಂಧಾದಿ ಅರ್ಘ್ಯ್ಂ ನಿರುಮಪಾತಿಸ್ವಾಹಾ।.


ಲೇಖಕಿ: ಲಲಿತಾ ಮ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.
9035527366.

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group