ಹುಟ್ಟಿಬಂದ ಇನ್ನೊಬ್ಬ ನರೇಂದ್ರ !

0
681

ನರೇಂದ್ರ ಮೋದಿ ಹುಟ್ಟು ಹಬ್ಬದ ದಿವಸ ಹುಟ್ಟಿದ ಮಗುವಿಗೆ ನರೇಂದ್ರ ಎಂದು ಹೆಸರು ಇಟ್ಟಿದ್ದ ಬಡಕುಟಂಬ.

ಬೀದರ – ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಹುಟ್ಟಿದ ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಟ್ಟು ತಮ್ಮ ಅಭಿಮಾನ ವ್ಯಕ್ತಪಡಿಸಿದ ಬೀದರ್ ಜಿಲ್ಲೆಯ ಚಿಡಗುಪ್ಪ ತಾಲೂಕಿನ ನಿರ್ಣಾವಾಡಿ ಗ್ರಾಮದ ನಿವಾಸಿಗಳಾದ ಅಂಬಿಕಾ ವೀರಶೆಟ್ಟಿ ರಂಜೇರಿ.

ಬೀದರ್ ನಗರದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯಲ್ಲಿ ಮುಂಜಾನೆ 10.30 ಕ್ಕೆ ಜನಿಸಿದ ಮಗುವಿಗೆ ಪೋಷಕರು ಖುಷಿ ಖುಷಿ ಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಇಡುವ ಮೂಲಕ ಗಮನ ಸೆಳೆದಿದ್ದಾರೆ.

ನಮಗೆ ಪ್ರಧಾನಿ ನರೇಂದ್ರ ಮೋದಿ ಅಂದರೆ ಅಷ್ಟು ಖುಷಿ ಹೀಗಾಗಿ ಜನ್ಮ ದಿನದಂದು ನಮ್ಮ ಮನೆಗೆ ಮಗು ಮೋದಿ ಬಂದಷ್ಟು ಖುಷಿ ತಂದಿದೆ ಎನ್ನುತ್ತಿದ್ದಾರೆ ಮಗುವಿನ ತಾಯಿ ಹಾಗೂ ಪೋಷಕರು.

ದೇಶದ ಹೆಮ್ಮೆಯ ಪ್ರಧಾನಿ ಮೋದಿಯವರ ಜನ್ಮದಿನದಂದೇ ಹುಟ್ಟಿರುವ ಈ ಬಡಕುಟುಂಬದ ಮಗು ಮುಂದೆ ದೇಶದ ಹೆಮ್ಮೆಯ ಪ್ರಜೆಯಾಗಿ, ದೇಶ ಆಳುವ ಪ್ರಭುವಾಗಿ ಮೋದಿಯವರಂತೆಯೇ ಭಾರತದ ಕೀರ್ತಿಯನ್ನು ಹೆಚ್ಚಿಸಲಿ ಎಂಬುದು ಟೈಮ್ಸ್ ಆಫ್ ಕರ್ನಾಟಕ ಬಳಗದ ಹಾರೈಕೆ.

ವರದಿ : ನಂದಕುಮಾರ ಕರಂಜೆ, ಬೀದರ