- Advertisement -
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2013 ನೇ ಸಾಲಿನಲ್ಲಿ ಕುಮಾರಿ ವಿಜಯಲಕ್ಷ್ಮೀ ಜೋಗೂರ ಹಾಗೂ 2015 ನೇ ಸಾಲಿನಲ್ಲಿ ವ್ಯಾಸಂಗ ಮಾಡಿರುವ ಕುಮಾರಿ ಸ್ವಾತಿ ಲಿಂಗರಾಜ ಈರ್ವರು ಕಲಬುರಗಿಯ ಶ್ರೀ ಶರಣಬಸಪ್ಪ ಅಪ್ಪ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಕ್ರಮವಾಗಿ ಎಮ್.ಟೆಕ್ ಹಾಗೂ ಎಮ್.ಎಸ್ಸಿ ಸಸ್ಯಶಾಸ್ತ್ರ ವಿಷಯಗಳಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಈ ವಿದ್ಯಾರ್ಥಿನಿಯರ ಸಾಧನೆಗೆ ಶ್ರೀ ಪವಿವ ಸಂಸ್ಥೆಯ ಚೇರಮನ್ ಪರಮಪೂಜ್ಯ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯ ಎಸ್.ಸಿ.ಸಣ್ಣಹಳ್ಳಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.