ಉತ್ತಮ ಬ್ರಹ್ಮಚರ್ಯ
ಇದು ಸ್ಪರ್ಶ ಸಂಬಂದಿ ಧರ್ಮ ತಂಪು ಗಾಳಿ ಬಿಸಿಲಿನಲ್ಲಿ ಬೀಸಿದಾಗ ದೇಹಕ್ಕೆ ತಂಪು ನೀಡುವಂತದನ್ನು ತ್ಯಜಿಸಿ ಮುನಿಗಳು ಬಿರುಬಿಸಿಲಿಗೆ ಮೈಯೊಡ್ಡಿ ದೇಹದಂಡಿಸಿ ಆತ್ಮ ಜ್ಞಾನಕ್ಕಾಗಿ ಪ್ರಯತ್ನಿಸುತ್ತಾರೆ. ಆತ್ಮದ್ಯಾನ ಹೊಂದಿ ಆತ್ಮಾರಾಧನೆಯಲ್ಲಿ ನಿರತರಾಗಿ ಸಾತ್ವಿಕ ಆಹಾರ ಸೇವನೆಯೊಂದಿಗೆ ಬಾಳುವದೇ ಉತ್ತಮ ಬ್ರಹ್ಮಚರ್ಯ ಧರ್ಮವಾಗಿದೆ.
ಬ್ರಹ್ಮ ಎಂದರೆ ದೇವ ಚರ್ಯ ಎಂದ್ತೆ ರಾಕ್ಷಸ. ದುಖಕ್ಕೆ ದಾರಿಮಾಡಿದ್ದು ಎಂದರ್ಥ. ಆದ್ದರಿಂದ ಚರ್ಯ ತ್ಯಜಿಸಿದರೆ ಮಾತ್ರ ಆತ್ಮಕಲ್ಯಾಣ ಎಂದರ್ಥ. ಆದ್ದರಿಂದ ದೇಹದಲ್ಲಿ ದೇವನಿದ್ದರೆ ಮಾತ್ರ ಮೋಕ್ಷ.
ಬ್ರಹ್ಮಚರ್ಯವು ಸುರನರರಿಂದ ಪೂಜಿಸಲ್ಪಡುವಂತದು. ನಾರಿಸಂಗ ವ್ಯರ್ಜವಾದುದು.
ಅಜ್ಞಾನಿಯೂ ಕೂಡ ಸ್ತ್ರೀರೂಪವನ್ನು ವಿಕಾರ ಭಾವದಿಂದ ನೋಡಿದರೆ ಕರ್ಮಬಂಧವಾಗುತ್ತದೆ. ಸ್ತ್ರೀ ಪುರುಷರ ದೇಹದುರ್ಗಂಧ ಸಹಿಸಲಸದಳ,ರೋಗ ವೇದನೆ ಬಾಯಿಯಿಂದ ಜೊಲ್ಲು, ದೇಹವು ಸಪ್ತ ದ್ರವ್ಯಗಳ ಪಿಂಡ , ಸೂಕ್ಷ್ಮ ಜೀವಿಗಳ ಹಿಂಸೆ ಅಪಾರ, ರಾಜ ಮಹಾರಾಜರಿಗೂ ಪರನಾರಿ ಮೋಹ ಕ್ರಮಬಿಟ್ಟಿಲ್ಲ. ಶೀಲವೃತದಿಂದ ಹಿಂಸೆನಿವಾರ ದರ್ಶನ ಜ್ಞಾನ ಚಾರಿತ್ರ್ಯ ವಿಶುದ್ದಿ ಜಪತಪ ಶೀಲದಿ ಲಭ್ಯ. ಶೀಲದಿಂದ ಸ್ಥಿತ್ಯತೆ, ಇಲ್ಲದಿದ್ದರೆ ಸಂಸ್ಕೃತಿನಾಶಂ ಮುನಿಶ್ರಾವಕರ ಪೂಜಿಸಲು ಯೋಗ್ಯ ಬ್ರಹ್ಮ ಚರ್ಯ ಇಹಲೋಕ ಪರಲೋಕದಿ ಕೀರ್ತಿಪ್ರಾಪ್ತಿ. ಹತ್ತು ಧರ್ಮಗಳ ಸಾರ ಬ್ರಹ್ಮಚರ್ಯ.
ವೀತರಾಗದಿಂದ ಹುಟ್ಟಿದ್ದು ವ್ರತನಿಯಮಗಳಿಗೆ ಅಗತ್ಯವಾದದ್ದು ಬ್ರಹ್ಮಚರ್ಯ ಧರ್ಮ.
ಸಂಯಮ ವಿಕಾಸದ ಸಾರ ಬ್ರಹ್ಮಚರ್ಯ
ನಾಲ್ಕು ಗತಿಗಳ ಬ್ರಮಣ ವಿನಾಶ
ಅಷ್ಟ ಕರ್ಮ ನಾಶ ಬ್ರಹ್ಮಚರ್ಯ ಧರ್ಮದಿ ಮುಕ್ತಿ.
ಓಂ ಹ್ರೀಮ್ ಉತ್ತಮ ಬ್ರಹ್ಮಚರ್ಯ ಧರ್ಮಾಂಗಾಯ ನಮ: ಜಲ ಗಂಧಾದಿ ನಿರುಮಪಾತಿಸ್ವಾಹಾ।
ಲೇಖಕಿ: ಲಲಿತಾ ಮ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ.
9035527366.