ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

0
377

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ ವಿಜಯಕುಮಾರ ಜ್ಞಾನದೇವ ಕುರಣೆ ನಿವೃತ್ತ ಡಯಟ ಉಪನ್ಯಾಸಕರು ಮತ್ತು ಶ್ರೀಮತಿ ಮಲಪ್ರಭಾ ವಿಜಯಕುಮಾರ ಕುರಣೆ ನಿವೃತ್ತ ಪ್ರೌಢ ಶಾಲಾ ಶಿಕ್ಷಕರ ಮಗಳಾದ ಪ್ರೊ.ಅಲಕಾ ವಿ ಕುರಣೆ ಇವರು 2008 ರಲ್ಲಿ ಸರಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ 2017 ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾಗಿ ಆಯ್ಕೆಗೊಂಡು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ದಿನಾಂಕ-19- 09-2021 ರಂದು ರಂಗಾಯಣ ಧಾರವಾಡದಲ್ಲಿ ನಡೆದ ಅಕ್ಷರ ದೀಪ ಪೌಂಡೇಶನ್ ವಾರ್ಷಿಕ ಸಂಭ್ರಮದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾ.ಸುರೇಖಾ ಸಂಕನಗೌಡರ, ಸಹ ಪ್ರಾಧ್ಯಾಪಕರು, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಚಂದ್ರಶೇಖರ ಮಾಡಲಗೇರಿ, ಡಾ.ಸಂತೋಷಕುಮಾರ ಟಿ.ಪೂಜಾರ ,ಶ್ರೀಮತಿ ಮಂಜುಳಾ ಕಾಮಧೇನು, ಸದಾಶಿವ ಐಹೊಳೆ, ಶ್ರೀಮತಿ ಸವಿತಾ ಕುಸುಗಲ್ , ಅಕ್ಷರ ದೀಪ ಫೌಂಡೇಷನ್ನಿನ ಅಧ್ಯಕ್ಷರಾದ ಪ್ರವೀಣಕುಮಾರ ಕನ್ಯಾಳ ಮತ್ತಿತರರು ಉಪಸ್ಥಿತರಿದ್ದರು.