- Advertisement -
ಮೂಡಲಗಿ: ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಸಧೃಢ ಸಮಾಜವನ್ನು ನಿರ್ಮಿಸಬೇಕು ಎಂದು ಡಾ. ಅಶೋಕ ಪಾಟೀಲ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಪಟ್ಟಣ ಪಂಚಾಯ್ತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯವರು ಆಯೋಜಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಷ್ಟ್ರೀಯ ಪೌಷ್ಠಿಕ ಆಹಾರ ಮತ್ತು ಪೊಷಣೆ ಅಭಿಯಾನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿಷ ಮುಕ್ತ ಆಹಾರವನ್ನು ಸೇವಿಸುವುದು ಇಂದಿನ ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಅರುಣಕುಮಾರ ಮಾತನಾಡಿ, ಬಾಣಂತಿ ಮಹಿಳೆಯರು ಪೌಷ್ಠಿಕ ಆಹಾರವನ್ನು ಸೇವಿಸಿ ವೈಯಕ್ತಿಕ ಮತ್ತು ಮಗುವಿನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು ಎಂದರು.
- Advertisement -
ಅಂಗನವಾಡಿ ಮೇಲ್ವಿಚಾರಕಿ ಸುಣಗಾರ, ಡಾ. ತುಕರಾಮ ಉಮರಾಣಿ, ಆರೋಗ್ಯ ಇಲಾಖೆಯ ಸುಭಾಷ ಕಾಂಬಳೆ, ಆನಂದ ಕುಂಬಾರ ಅತಿಥಿಯಾಗಿದ್ದರು.
ದೀಪಾ ಪತ್ತಾರ ಸ್ವಾಗತಿಸಿದರು, ಸುಭಾಷ ಕಾಂಬಳೆ ನಿರೂಪಿಸಿದರು.