ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬದಲಾವಣೆ ಕುರಿತು ಕಾಂಗ್ರೆಸ್ ನಾಯಕರ ಸಭೆ

0
1020

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಒಳ ಜಗಳ ಮೇಲ್ನೋಟಕ್ಕೆ ಎದ್ದುಕಾಣುತ್ತದೆ. ಇಂದು ಕೆಲವು ಕಾಂಗ್ರೆಸ್ ಪಕ್ಷದ ಸದಸ್ಯರು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರ ವಿರುದ್ಧ ಸಭೆ ನಡೆಸಿದರು.

ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಶಿರ್ವಾದ ಇದ್ದ ಕಾರಣ ಜಿಲ್ಲಾಧ್ಯಕ್ಷ ಜಾಬಶೆಟ್ಟಿ ಅವಧಿ ಮುಗಿದರೂ ಜಿಲ್ಲಾ ಅಧ್ಯಕ್ಷ ಗಾದಿ ಬಿಡಲು ಮನಸ್ಸು ಇಲ್ಲದೆ ಹಾಗೆ ಕಾಣುತ್ತದೆ. ಸ್ಥಳೀಯ ನಾಯಕರು ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರನ್ನೂ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಗಂಭೀರ ಆರೋಪ ಮಾಡಿ ಇಂದು ಕಾಂಗ್ರೆಸ್ ಕೆಲವು ನಾಯಕರು ಜಿಲ್ಲಾ ಅಧ್ಯಕ್ಷರ ವಿರುದ್ಧ ರಾಜ್ಯ ನಾಯಕರ ಗಮನಕ್ಕೆ ತರಬೇಕು ಎಂದು ಇಂದು ಸಭೆ ನಡೆಸಿದರೆನ್ನಲಾಗಿದೆ.

ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಗಮನಕ್ಕೆ ಈ ವಿಷಯ ಇದ್ದರೂ ಕಣ್ಣು ಮುಚ್ಚಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ ಅವರ ಕಾರ್ಯವಧಿ ಮುಗಿದಿದ್ದು ಅವರನ್ನು ಬದಲಾಯಿಸಿ ಹೊಸ ಉತ್ಸಾಹಿ, ಪಕ್ಷ ಕಟ್ಟುವ ಹಾಗೂ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ವ್ಯಕ್ತಿಯನ್ನು ಅಧ್ಯಕ್ಷರಾಗಿ ನೇಮಕ ಮಾಡಲು ಪಕ್ಷದ ವರಿಷ್ಟರಲ್ಲಿ ಮನವಿ ಮಾಡಲು ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ಮುಖಂಡರು ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

ಸಭೆಯಲ್ಲಿ ಮುರಳಿ ಏಕಲಾರ್ ,ಪ್ರದೀಪ್ ಕುಶನೂರ್,ರಾಜಶೇಖರ್ ಪಾಟೀಲ್ ಅಷ್ಟುರ್,ಶೇಕ್ ಹಾಜಿ, ಸಮಿಯೋದಿನ, ಆನಂದ ದೇವಪ್ಪ, ಶಂಕರ ರೆಡ್ಡಿ, ಅರ್ಜುನ್ ಕನಕ್,ಆಜ್ಮತ್ ಪಟೇಲ್, ಸಂದೀಪ್ ಭುಯೇ,ರತಿಕಾಂತ ಮಜಗೆ ಹಾಜರಿದ್ದರು ಎಂದು ತಿಳಿದು ಬಂದಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ