ರೈತ ಹೋರಾಟಗಾರ, ಸಂಪಾದಕ ಕಲ್ಯಾಣರಾವ್ ಜಿ ಮುಚಳಂಬಿ ನಿಧನ

Must Read

ಬೆಳಗಾವಿ: ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು

ಅವರು ಗೋಕಾಕದಲ್ಲಿ ಬುಧವಾರ ದಿ.6 ರಂದು ಮುಂಜಾನೆ ಕೊನೆಯುಸಿರೆಳೆದರು.

ಜನ್ಮತಃ ಹೋರಾಟದ ಮನೋಭಾವದ ಕಲ್ಯಾಣರಾವ್ ಮುಚಳಂಬಿಯವರು
ಬುಧವಾರ ಮುಂಜಾನೆ ಸಾವಳಗಿ ಬಳಿ ಹೋರಾಟದ ಅಂಗವಾಗಿ ಪಾದಯಾತ್ರೆಯೊಂದರಲ್ಲಿ‌ ಪಾಲ್ಗೊಂಡಿದ್ದರು. ಹೋರಾಟಗಾರನೊಬ್ಬ ಹೋರಾಟದ ಸಮಯದಲ್ಲಿಯೇ ಅಸುನೀಗಿರುವುದು ಅವರ‌ ವ್ಯಕ್ತಿತ್ವದ ಸಾಧನೆಗೆ ಸಿಕ್ಕ ಗೌರವ..
ರಾಜ್ಯದ ರೈತ ಹೋರಾಟದಲ್ಲೇ ತಮ್ಮ ಜೀವನದ ಬಹುತೇಕ ಸಮಯ ಕಳೆದ ಮುಚಳಂಬಿ ಅವರು, ಪ್ರೋ ನಂಜುಡಸ್ವಾಮಿ, ಬಾಬಾಗೌಡ ಪಾಟೀಲ್, ಪುಟ್ಟಣ್ಣಯ್ಯ ಸೇರಿದಂತೆ ರೈತ ಹೋರಾಟಗಾರರಿಗೆ ಸಾಥ್ ನೀಡಿದ್ದರು.. ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಲೆಕ್ಕಿಸದೇ ಗಡಿ ಜಿಲ್ಲೆಗಳಲ್ಲಿ ರೈತ ಹೋರಾಟ ಸಂಘಟನೆ ಮಾಡಿದ ಕೀರ್ತಿ ಮುಚಳಂಬಿ ಅವರಿಗೆ ಸಲ್ಲುತ್ತದೆ..

ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ನಾಯಕರಿಗೆ ಕೃಷಿ ಸಂಕಷ್ಟಗಳ ಬಗ್ಗೆ ಲೇಖನಗಳ ಮೂಲಕ ಗಮನಸೆಳೆದ ಹಿರಿಮೆ‌ ಮುಚಳಂಬಿ ಅವರದ್ದು.ರೈತ ಹೋರಾಟಗಳ ಜೊತೆಗೆ ಮಠ ಮಾನ್ಯಗಳೊಂದಿಗೆ, ಮಠಾಧೀಶರೊಂದಿಗೆ, ಜನಪರ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕಲ್ಯಾಣರಾವ್ ಮುಚಳಂಬಿ ಅವರ ನಿಧನಕ್ಕೆ ರಾಜ್ಯದ ವಿವಿಧೆಡೆಯ ರೈತ, ಜನಪರ ಸಂಘಟನೆಗಳ ಪ್ರಮುಖರು, ಮಠಾಧೀಶರು , ರಾಜಕೀಯ ಧುರೀಣರು , ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group