Homeಸುದ್ದಿಗಳುಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ " ಚಿಂತನ- ಚಾವಡಿ ಗೋಷ್ಠಿ" ಎರಡನೇ ಕಾರ್ಯಕ್ರಮ

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ” ಚಿಂತನ- ಚಾವಡಿ ಗೋಷ್ಠಿ” ಎರಡನೇ ಕಾರ್ಯಕ್ರಮ

ಬೆಳಗಾವಿ – ಹಿರಿಯ ಸಾಹಿತಿಗಳು, ಚಿಂತಕರು ಮತ್ತು ಉದಯೋನ್ಮುಖ ಸಾಹಿತಿಗಳ ಬಳಗ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳುತ್ತಿರುವ “ಚಿಂತನ ಚಾವಡಿ ಗೋಷ್ಠಿ” ಎರಡನೇ ಕಾರ್ಯಕ್ರಮ ಇದೇ ಶನಿವಾರ ದಿ. 9 ರಂದು ಮ.3:30ಕ್ಕೆ ಜರುಗಲಿದೆ.

ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಮಾನಗಳ ಕುರಿತು ಚಿಂತನ ನಡೆಯಲಿದ್ದು ಇದೇ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಸಾಹಿತಿ ಎಸ್ ಆರ್ ಪಾಟೀಲ ಅವರು ರಚಿಸಿದ “ಮನದಾಳದ ಮಾತು” ಕೃತಿಯ ಪರಿಚಯ ಮತ್ತು ವಿಶ್ಲೇಷಣೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು “ತನ್ಮಯ ಪ್ರಕಾಶನ” ಬೆಳಗಾವಿಯ ಅಶೋಕ ಉಳ್ಳೆಗಡ್ಡಿ ವಹಿಸಲಿದ್ದು, ಸಾಹಿತಿ ಸ. ರಾ. ಸುಳಕುಡೆ ಆಶಯ ಭಾಷಣ ಮಾಡುವರು. ಕೃತಿಯ ಕುರಿತು ವಿಶ್ಲೇಷಣೆ ಮತ್ತು ಪ್ರಸ್ತುತ ವಿದ್ಯಮಾನಗಳ ಕುರಿತು ಚಿಂತನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಜಲತಕುಮಾರ ಪುನಜಗೌಡ, ಎಸ್ ಆರ್ ಹಿರೇಮಠ, ಬಸವರಾಜ ಸುಣಗಾರ, ಎಂ ವೈ ಮೆಣಸಿನಕಾಯಿ, ಸಿ. ಎಂ ಬೂದಿಹಾಳ, ಮಹಾಂತೇಶ ವಾಲಿ, ಮಲ್ಲಿಕಾರ್ಜುನ ಜೋಗತಿ, ಯುವ ಸಾಹಿತಿ ಶಿವಾನಂದ ತಲ್ಲೂರ, ಆರ್.ಎಸ್.ಚಾಪಗಾವಿ, ಮುತಾಲಿಕ್ ದೇಸಾಯಿ,ಈರನಗೌಡ, ಎಸ್.ಎಂ.ಕುಲಕಣಿ೯,ಕುಂದರಗಿ, ಕುರಗುಂದಿ, ಬೇವಿನಕೊಪ್ಪಮಠ ಮುಂತಾದವರಲ್ಲದೆ ಇತರ ಸಾಹಿತ್ಯಾಸಕ್ತರೂ ಭಾಗವಹಿಸುವರು. ಕಾರ್ಯಕ್ರಮವು “ನೆನಹು” ನಂ.708, ರಿಲಯನ್ಸ ಟವರ್ ಎದುರಿಗೆ ರಾಮತೀರ್ಥ ನಗರ ಬೆಳಗಾವಿ ಇಲ್ಲಿ ಜರಗುವುದು.

ಆಸಕ್ತರು ಚಿಂತನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಎಂ ವೈ ಮೆಣಸಿನಕಾಯಿ.

ಸಾಹಿತಿಗಳು.*9449209570..9964358624.

RELATED ARTICLES

Most Popular

error: Content is protected !!
Join WhatsApp Group